Karnataka Times
Trending Stories, Viral News, Gossips & Everything in Kannada

Hybrid SUV: 40 ಕಿ.ಮೀ ಮೈಲೇಜ್, ಸ್ಪೋರ್ಟಿ ಡ್ರೈವಿಂಗ್ ಲುಕ್ ಇರುವ ಮಾರುತಿಯ ಹೈಬ್ರಿಡ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ!

advertisement

ಮಾರುತಿ ಸುಜುಕಿ (Maruti Suzuki) ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಕಾರುಗಳನ್ನ ಬಿಡುಗಡೆ ಮಾಡುವ ಮೂಲಕ ಅತ್ಯುತ್ತಮ ಮೋಟಾರ್ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ತನ್ನ ಎಸ್ ಯು ಬಿ ಸರಣಿಗೆ ಹೈಬ್ರಿಡ್ ಅವತರಣಿಕೆಯನ್ನು ಸೇರಿಸಿದ್ದು, ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲಿದೆ.

ಪೆಟ್ರೋಲ್, ಡೀಸೆಲ್ ಇಂಜಿನ್ ಹೊಂದಿರುವ ವಾಹನಗಳನ್ನು ನೋಡಿದ್ದು ಆಯ್ತು, ಬಳಕೆ ಮಾಡಿದ್ದು ಆಯ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಿಎನ್ ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಎಥನ್ಮಧ್ಯೆ ಹೈಬ್ರಿಡ್ ಎಂಜಿನ್ ಜನರ ಗಮನ ಸೆಳೆಯುತ್ತಿದೆ. ಇದೀಗ ಈ ನಿಟ್ಟಿನಲ್ಲಿ ಮಾರುತಿ ತನ್ನ ಹೊಸ ಕಾರಿನಲ್ಲಿ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಏನಿದು ಹೈಬ್ರಿಡ್ ಎಂಜಿನ್?

ಇದು ಮೂಲತಃ ICE ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ನಿಂದ ಉತ್ಪತ್ತಿಯಾಗುವ ಶಕ್ತಿಯ ಮಿಶ್ರಣವಾಗಿದೆ. ಮಾರುತಿ ಸುಜುಕಿ 2020ರಲ್ಲಿ ಡೀಸೆಲ್ ಕಾರಿನ ಉತ್ಪಾದನೆಯನ್ನು ನಿಲ್ಲಿಸಿದ ನಂತರ ಪೆಟ್ರೋಲ್ ಮತ್ತು ಸಿಎನ್ಜಿ ಪೋರ್ಟ್ಫೋಲಿಯು ಮೇಲೆ ಹೆಚ್ಚಿನ ಗಮನ ಹರಿಸಲು ಆರಂಭಿಸಿತು. ಈಗಾಗಲೇ ಸಿ ಎನ್ ಜಿ ಹಾಗೂ ಒಂದು ಕಡೆ ಎಲೆಕ್ಟ್ರಿಕ್ ವಾಹನ (Electric Vehicle)ಗಳನ್ನು ಕೂಡ ತಯಾರಿಸುವ ಮಾರುತಿ, ಹೈಬ್ರಿಡ್ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿದೆ.

Maruti Suzuki Fronx Hybrid SUV!

advertisement

Maruti Suzuki fronx hybrid SUV ಬಿಡುಗಡೆ ಮಾಡಲು ಮುಂದಾಗಿದ್ದು ಸ್ವತಹ ಹೈಬ್ರಿಡ್ ಸಿಸ್ಟಮ್ ಅನ್ನು ಮಾರುತಿ ಸುಜುಕಿ ಈ ಕಾರಿನಲ್ಲಿ ಅಭಿವೃದ್ಧಿಪಡಿಸುತ್ತಿದೆ. ಟಯೋಟ ಈಗಾಗಲೇ ಹೈಬ್ರಿಡ್ ಸಿಸ್ಟಮ್ ಅಭಿವೃದ್ಧಿಪಡಿಸಿದ್ದರು ಕೂಡ ಮಾರುತಿ ಸುಜುಕಿ ಪ್ರತ್ಯೇಕವಾಗಿ ಹೈಬ್ರಿಡ್ ಸಿಸ್ಟಮ್ ಅಭಿವೃದ್ಧಿ ಪಡಿಸುತ್ತಿರುವುದು ನಿಜಕ್ಕೂ ವಿಶೇಷ. ಮಾರುತಿ ಸುಜುಕಿ ಸರಣಿ ಹೈಬ್ರಿಡ್ ವ್ಯವಸ್ಥೆಯನ್ನು ಕಾರಿನಲ್ಲಿ ಅಳವಡಿಸಲು ಮುಂದಾಗಿದೆ. ಇದು ಆರ್ಥಿಕವಾಗಿ ಗ್ರಾಹಕರಿಗೆ ಅಗ್ಗವಾಗಿರುವ ಕಾರನ್ನು ಒದಗಿಸುವ ಗುರಿ ಹೊಂದಿದೆ. ಸರಣಿ ಹೈಬ್ರಿಡ್ ವ್ಯವಸ್ಥೆಯಲ್ಲಿ ಪೆಟ್ರೋಲ್ ಎಂಜಿನ್ ಜನರೇಟರ್ ಅಥವಾ ರೇಂಜ್ ಎಸ್ಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅಂದರೆ ಇದನ್ನ ನೇರವಾಗಿ ಚಾಲನೆ ಮಾಡುವ ಬದಲು ಚಕ್ರಕ್ಕೆ ಎಲೆಕ್ಟ್ರಿಕ್ ಮೋಟಾರ್ ಶಕ್ತಿಯನ್ನು ನೀಡಿ ಆ ಮೂಲಕ ಹೈಬ್ರಿಡ್ ವ್ಯವಸ್ಥೆ ತನ್ನ ಕಾರ್ಯವನ್ನು ಆರಂಭಿಸುತ್ತದೆ.

ಮಾರುತಿ ಸುಜುಕಿ HEV ಆಧಾರಿತ ಸರಣಿ, ಮೂರು ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ Z12E ಅಭಿವೃದ್ಧಿಪಡಿಸಿದೆ. ಇದು 1.5 – 2kWh ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡುವ ಜನರೇಟರ್ ನಂತೆ ಕಾರ್ಯ ನಿರ್ವಹಿಸುತ್ತದೆ ಈ ಬ್ಯಾಟರಿಯ ಮೂಲಕ ಎಲೆಕ್ಟ್ರಿಕ್ ಮೋಟಾರ್ ಗೆ ಶಕ್ತಿಯನ್ನು ನೀಡಲಾಗುತ್ತದೆ ಇದು ಮುಂಭಾಗದ ಚಕ್ರಕ್ಕೆ ಶಕ್ತಿಯನ್ನು ಒದಗಿಸುವುದರಿಂದ ಸರಳ ವಿಧಾನದಲ್ಲಿ ಹೈಬ್ರಿಡ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ.

ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು!

HEV ಹೈಬ್ರಿಡ್ ಕಾರಿನಲ್ಲಿ ಇಂಧನ ಬಳಕೆ ಅತ್ಯಂತ ಕಡಿಮೆ ಇರುವುದರಿಂದ ಈ ಕಾರು ಪ್ರತಿ ಲೀಟರ್ಗೆ ಸುಮಾರು 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡಬಲ್ಲದು ಎಂದು ಮಾಧ್ಯಮದ ವರದಿಗಳು ಹೇಳುತ್ತವೆ. ಆದರೆ ಈ ಬಗ್ಗೆ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. 2025ರ ವೇಳೆಗೆ ಮಾರುತಿ ಸುಜುಕಿ ಹೈಬ್ರಿಡ್ ಸರಣಿ ಇಂಜಿನ್ ಹೊಂದಿರುವ ಕಾರು ಮಾರುಕಟ್ಟೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

advertisement

Leave A Reply

Your email address will not be published.