Karnataka Times
Trending Stories, Viral News, Gossips & Everything in Kannada

Guarantee Scheme: ಮಹಿಳೆಯರಿಗೆ ಆಯ್ತು, ಈಗ ರೈತರಿಗೆ ಮೊದಲ ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್ ಸರ್ಕಾರ!

advertisement

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ದೆಹಲಿಯತ್ತ ನಡೆಯುತ್ತಿರುವ ರೈತರ ಮೆರವಣಿಗೆಯನ್ನುದ್ದೇಶಿಸಿ ಮಾತನಾಡುತ್ತಾ, ಅವರು ರೈತರ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಎಂಎಸ್ಪಿಗೆ ಕಾನೂನು ಹಕ್ಕುಗಳನ್ನು ಶಿಫಾರಸು ಮಾಡುವ ಎಂಎಸ್ ಸ್ವಾಮಿನಾಥನ್ ವರದಿಯ ಅನುಷ್ಠಾನದ ಬೇಡಿಕೆಯನ್ನು ಒತ್ತಿ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್ಪಿಯ (MSP) ಕಾನೂನು ಖಾತರಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರ ಮೋದಿ ಕಿ ಗ್ಯಾರಂಟಿ ಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge)  ಮಂಗಳವಾರ ಸರಣಿ ಕಾಂಗ್ರೆಸ್ ಕಿ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಛತ್ತೀಸ್ಗಢದ ಅಂಬಿಕಾಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖ್ಯಸ್ಥರು ಬಿಜೆಪಿಯನ್ನ ಗುರಿಯಾಗಿಸಿಕೊಂಡು, ನಾವು ಅದನ್ನ ಕಾಂಗ್ರೆಸ್ ಗ್ಯಾರಂಟಿ ಎಂದು ಕರೆಯುತ್ತೇವೆ, ಆದರೆ ಅವರು ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಇಷ್ಟೊಂದು ಅಹಂಕಾರದಿಂದ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದಾರೆಯೇ ಎಂದು ಯೋಚಿಸಿ ಎಂದು ಪ್ರಶ್ನಿಸಿದ್ದಾರೆ.

ರೈತರ ಧ್ವನಿ ಅಡಗಿಸಲಾಗುತ್ತಿದೆ ಎಂದ ಖರ್ಗೆ

ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ, ಇದಕ್ಕೂ ಮುನ್ನ ಮಾತನಾಡಿದ ಖರ್ಗೆ, ಒಂದು ದಶಕದಿಂದ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗುವ ಮೂಲಕ ಮೋದಿ ಸರ್ಕಾರವು ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.

advertisement

ಸಾವಿರಾರು ರೈತರು ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿದ ದಿನದಂದು ಸರ್ಕಾರದ ಮೇಲೆ ಅವರ ದಾಳಿ ನಡೆಯಿತು, ಮತ್ತು ರಾಜಧಾನಿಯು ವಾಸ್ತವಿಕ ಕೋಟೆಯಾಗಿ ಮಾರ್ಪಟ್ಟಿತು, ಅಧಿಕಾರಿಗಳು ಅವರನ್ನು ನಗರಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದರು.

ಮುಳ್ಳು ತಂತಿ, ಡ್ರೋನ್ಗಳಿಂದ ಅಶ್ರುವಾಯು, ಮೊಳೆಗಳು ಮತ್ತು ಬಂದೂಕುಗಳು… ಎಲ್ಲವೂ ಸರಿಯಾಗಿದೆ ಎಂದರು. ಇನ್ನು ಸರ್ವಾಧಿಕಾರಿ ಮೋದಿ ಸರ್ಕಾರವು ರೈತರ ಧ್ವನಿಯನ್ನ ಅಡಗಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಬರೆದಿದ್ದಾರೆ.

ರೈತರಿಗೆ ಎಂಎಸ್ಪಿಯ ಕಾನೂನು ಜಾರಿ.

ದೇಶದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷದಿಂದ ಜನತೆಗೆ ಗ್ಯಾರಂಟಿ ಯೋಜನೆ (Guarantee Scheme) ಯೊಂದನ್ನು ಘೋಷಣೆ ಮಾಡಲಾಗಿದೆ. ಅದೇ ರೈತರಿಗೆ ಬೆಳೆಗಳ ಮೇಲೆ ಎಂಎಸ್ಪಿಯ ಕಾನೂನು ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿರೋದು ಆಗಿದೆ.ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ರೈತ ಸಹೋದರರೇ, ಇಂದು ಐತಿಹಾಸಿಕ ದಿನ! ಸ್ವಾಮಿನಾಥನ್ ಆಯೋಗದ ಪ್ರಕಾರ ಪ್ರತಿಯೊಬ್ಬ ರೈತರಿಗೆ ಬೆಳೆಗಳ ಮೇಲೆ ಎಂಎಸ್ಪಿಯ ಕಾನೂನು ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಸಮೃದ್ಧಿಯನ್ನು ಖಚಿತಪಡಿಸುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತದೆ. ಇದು ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ನ ಮೊದಲ ಖಾತರಿಯಾಗಿದೆ ಎಂದು  ಹೇಳಿದ್ದಾರೆ.

advertisement

Leave A Reply

Your email address will not be published.