Karnataka Times
Trending Stories, Viral News, Gossips & Everything in Kannada

Guarantee Scheme: ಇನ್ಮುಂದೆ ಇಂತವರಿಗೆ ರೇಷನ್ ಕಾರ್ಡ್ ಜೊತೆ ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆ ಸಿಗಲ್ಲ, ಹೊಸ ಆದೇಶ

advertisement

ಚುನಾವಣೆ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಳಿದೊಡನೆ ಎಲ್ಲರೂ ಸಂತೋಷ ಪಟ್ಟಿದ್ದರು. ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದಾಗ ಕೂಡ ಗ್ಯಾರಂಟಿ ಯೋಜನೆ (Guarantee Scheme) ಗಳ ನಂಬಿ ಹಲವಾರು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಅದರಲ್ಲೂ ಬಳ್ಳಾರಿ ಜಿಲ್ಲೆಯ ತೃತೀಯಲಿಂಗಿ 42 ವರ್ಷದ ಗಂಗಾ ಕಳೆದ ಆಗಸ್ಟ್ ತಿಂಗಳಲ್ಲಿ  ಸರ್ಕಾರದಿಂದ ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಆರಂಭವಾದಾಗ ಖುಷಿಪಟ್ಟಿದ್ದಳು. ಗೃಹ ಲಕ್ಷ್ಮಿ ಯೋಜನೆಯಿಂದ ತಿಂಗಳಿಗೆ ಬರುವ 2 ಸಾವಿರ ರೂಪಾಯಿ ಮತ್ತು ತೃತೀಯ ಲಿಂಗಿಗಳಿಗೆ ಸರ್ಕಾರದ ಯೋಜನೆ ಮೈತ್ರಿಯಿಂದ ಸಿಗುವ 800 ರೂಪಾಯಿಗಳಿಂದ ಮನೆ ಬಾಡಿಗೆ ಖರ್ಚು ನಿಭಾಯಿಸಿಕೊಂಡು ಹೋಗಬಹುದೆಂದು ಭಾವಿಸಿದ್ದಳು.

ಆದರೆ ಕೆಲವೇ ದಿನಗಳಲ್ಲಿ ಗಂಗಾಳ ಆಸೆ ಹುಸಿಯಾಯಿತು. ಸರ್ಕಾರದ ಯೋಜನೆ (Guarantee Scheme) ಲಾಭ ಪಡೆಯಲು ಗಂಗಾ ಅಲೆಯದ ಸರ್ಕಾರದ ಇಲಾಖೆ ಬಾಕಿ ಉಳಿದಿಲ್ಲ. ಆದರೆ ಏನೂ ಪ್ರಯೋಜನವಾಗಿಲ್ಲ. ಈ ಬಗ್ಗೆ ತಮ್ಮ ಸಂಕಟವನ್ನು ತೋಡಿಕೊಂಡ ಗಂಗಾ, ಗೃಹ ಲಕ್ಷ್ಮಿ ಯೋಜನೆಯಡಿ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಲು ಇಂಟರ್ನೆಟ್ ಕೇಂದ್ರಕ್ಕೆ ಹೋದಾಗ ಸರ್ಕಾರಿ ಪೋರ್ಟಲ್ ಅಲ್ಲಿ ಪಡಿತರ ಚೀಟಿ (Ration Card) ಯನ್ನು ಅಪ್‌ಲೋಡ್ ಮಾಡಲು ಹೇಳಿದರು. ಆಗ ಗಂಗಾ ಪಡಿತರ ಚೀಟಿಗೆ ಅರ್ಜಿ ಹಾಕಿದ್ದಳು. ಆದರೆ ಆ ಪೋರ್ಟಲ್ ಕೇವಲ ಎರಡು ಆಯ್ಕೆಗಳನ್ನು ಹೊಂದಿದೆ-ಅದು ಗಂಡು ಮತ್ತು ಹೆಣ್ಣು, ನಾನು ಈ ವರ್ಗಗಳಿಗೆ ಸೇರಿಲ್ಲವಲ್ಲ ಎನ್ನುತ್ತಾಳೆ.

ನಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಗೆ ಭೇಟಿ ನೀಡಿದಳು. ಅಲ್ಲಿ ಅವಳಿಗೆ ಪಡಿತರ ಚೀಟಿ (Ration Card) ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ನನ್ನ ಪೋಷಕರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾರೆ, ಅವರು ಪಡಿತರ ಚೀಟಿ ಹೊಂದಿದ್ದಾರೆ. ನನ್ನ ಮನೆಯಿಂದ ಹೊರಹಾಕಿದ್ದಾರೆ, ನನಗೆ ದಿಕ್ಕು ದೆಸೆಯಿಲ್ಲ. ಅಧಿಕಾರಿಗಳೂ ನನಗೆ ಪಡಿತರ ಚೀಟಿ ನೀಡುತ್ತಿಲ್ಲ, ನಾನೇನು ಮಾಡಲಿ ಹೇಳಿ ಎಂದು ಗಂಗಾ ಅಳುತ್ತಾಳೆ.

ಈ ಹಿಂದೆ, ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಒಂದೇ ಕುಟುಂಬದ ಎಲ್ಲಾ ಸದಸ್ಯರು ತಮ್ಮ ಹೆಸರಿನಲ್ಲಿ ವೈಯಕ್ತಿಕ ಪಡಿತರ ಚೀಟಿಗಳನ್ನು ಪಡೆದ ಅನೇಕ ನಿದರ್ಶನಗಳಿವೆ. ಅಂತಹ ವಯಕ್ತಿಕ ಕಾರ್ಡ್‌ಗಳನ್ನು ಈಗ ತೆಗೆದುಹಾಕಲಾಗಿದೆ. ಇಲಾಖೆ ಒಂದೇ ಒಂದು ಕಾರ್ಡ್ ನೀಡದಿರಲು ಇದೇ ಕಾರಣವಾಗಿರಬಹುದು ಎಂದು ನ್ಯಾಯಬೆಲೆ ಅಂಗಡಿ ವಿತರಕರ ಸಂಘದ ಮುಖ್ಯಸ್ಥರು ಹೇಳುತ್ತಾರೆ.

advertisement

ಚಿಕ್ಕಮಗಳೂರಿನ ಶೀತಲ್, ಪಡಿತರ ಚೀಟಿ ಇಲ್ಲದೇ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಸುವಂತಿಲ್ಲವಂತೆ ಎನ್ನುತ್ತಾರೆ. ಚಿಕ್ಕಮಗಳೂರಿನಲ್ಲಿ 350 ತೃತೀಯಲಿಂಗಿಗಳಿದ್ದಾರೆ, ಆದರೆ ಇಬ್ಬರಿಗೆ ಮಾತ್ರ ಮನೆಗಳಿವೆ. ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವುದರಿಂದ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸಂಗಮ ಕಾರ್ಯಕ್ರಮ ನಿರ್ದೇಶಕಿ ನಿಶಾ ಗೂಳೂರು, ಸಮುದಾಯದವರು ತೃತೀಯ ಲಿಂಗಿಗಳ (Transgender) ಕಾರ್ಡ್ ಪಡೆಯಲು ಅವಕಾಶವಿದೆ. ಈ ಕಾರ್ಡ್ ತೋರಿಸಿ, ತೃತೀಯಲಿಂಗಿಗಳು ಶಕ್ತಿ ಯೋಜನೆ (Shakti Yojana) ಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಕರ್ನಾಟಕದಲ್ಲಿ ಕೇವಲ 2,000 ಸದಸ್ಯರು ಮಾತ್ರ ತೃತೀಯಲಿಂಗ ಕಾರ್ಡ್‌ಗಳನ್ನು ಹೊಂದಿದ್ದಾರೆ. ನಮ್ಮ ಎನ್‌ಜಿಒ ತೃತೀಯಲಿಂಗಿಗಳಿಗೆ ಅಂತಹ ಕಾರ್ಡ್‌ಗಳನ್ನು ಪಡೆಯಲು ಸಹಾಯ ಮಾಡುತ್ತಿದೆ. ಕಲ್ಯಾಣ ಯೋಜನೆಗಳ ಲಾಭವನ್ನು ಅನುಭವಿಸಲು ತೃತೀಯಲಿಂಗ ಸಮುದಾಯಕ್ಕೆ ಸರ್ಕಾರ ಸಹಾಯ ಮಾಡಬೇಕು. ಸರಕಾರ ತೃತೀಯಲಿಂಗಿಗಳ ಗಣತಿ ನಡೆಸಬೇಕು ಎಂದು ನಿಶಾ ಹೇಳುತ್ತಾರೆ.

ಹೊಸಪೇಟೆಯ ಲಕ್ಷ್ಮಿ, ಶಕ್ತಿ ಯೋಜನೆಯು ತೃತೀಯಲಿಂಗಿಗಳಿಗೆ ಅನ್ವಯಿಸುವುದಿಲ್ಲ. ನಮಗೆ ತೃತೀಯಲಿಂಗ (Transgender) ಕಾರ್ಡ್‌ಗಳನ್ನು ನೀಡಲಾಗಿದೆ. ಆದರೆ ಬಸ್ ಕಂಡಕ್ಟರ್‌ಗಳು ತಮ್ಮ ಟಿಕೆಟ್ ನೀಡುವ ಯಂತ್ರಗಳಲ್ಲಿ ಉಚಿತ ಟಿಕೆಟ್‌ಗಳನ್ನು ನೀಡಲು ತೃತೀಯಲಿಂಗಿಗಳ ಕಾರ್ಡ್ ಸಂಖ್ಯೆಗಳನ್ನು ನಮೂದಿಸಲು ಯಾವುದೇ ಅವಕಾಶವಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲ. ಸರ್ಕಾರಕ್ಕೂ ಇಲ್ಲ ಎಂದು ತೃತೀಯಲಿಂಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.