Karnataka Times
Trending Stories, Viral News, Gossips & Everything in Kannada

Educational Loan: ಎಜುಕೇಶನ್ ಲೋನ್ ಬಾಕಿ ಇರಿಸಿಕೊಂಡ ಎಲ್ಲರಿಗೂ ಬಿಗ್ ನ್ಯೂಸ್! ಸರ್ಕಾರದ ಹೊಸ ಅಪ್ಡೇಟ್

advertisement

ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದಲೂ ಕೂಡ ತಾವು ಘೋಷಣೆ ಮಾಡಿರುವಂತಹ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದೆ.

WhatsApp Join Now
Telegram Join Now

5 ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿ ಹಣವನ್ನು ನೀಡುವ ಮೂಲಕ ಅನ್ನ ಭಾಗ್ಯ ಯೋಜನೆ (Anna Bhagya Yojana) ಯನ್ನು ನೀಡುವಂತಹ ಕೆಲಸ ಹಾಗೂ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ (Free Bus Travel) ವನ್ನು ನೀಡುವಂತಹ ಕೆಲಸ, ಗ್ರಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (Free Electricity) ಮತ್ತು ಗ್ರಹಲಕ್ಷ್ಮಿ ಯೋಜನೆ (Gruha Lakshmi Yojana) ಅಡಿಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳ 2000 ಗಳ ಸಹಾಯಧನವನ್ನು ನೀಡುವಂತಹ ಯೋಜನೆಯನ್ನು ಕೂಡ ಸರಕಾರ ತಾನು ಅಧಿಕಾರಕ್ಕೆ ಬಂದ ಸಂದರ್ಭದಿಂದಲೂ ಕೂಡ ಮಾಡಿಕೊಂಡು ಬಂದಿದೆ.

ಇನ್ನು ಈಗ ಇತ್ತೀಚಿಗಷ್ಟೇ ರಾಜ್ಯದ ಗೃಹ ಸಚಿವರಾಗಿರುವಂತಹ ಜಿ ಪರಮೇಶ್ವರ್ (G. Parameshwar) ಅವರು ಮತ್ತೊಂದು ಆಶ್ವಾಸನೆಯನ್ನು ನೀಡಿರುವುದು ಈಗ ವಿದ್ಯಾರ್ಥಿಗಳಿಗೆ ಖುಷಿ ಕೊಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಅಷ್ಟಕ್ಕೂ ಆ ಹೊಸ ಯೋಜನೆ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವಿದ್ಯಾರ್ಥಿಗಳ ಸಾಲ ಮನ್ನಾ:

 

Image Source: EducationWorld

 

advertisement

ಪ್ರತಿಯೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಕೂಡ ತನಗೆ ಉತ್ತಮವಾಗಿ ಕಲಿಯುವುದಕ್ಕೆ ಸಾಧ್ಯತೆ ಇದೆ ಅಂತ ಅಂದಾಕ್ಷಣ ಆತ ಇನ್ನಷ್ಟು ಉನ್ನತ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವುದಕ್ಕಾಗಿ ಬ್ಯಾಂಕಿನಿಂದ ಲೋನ್ (Loan) ಪಡೆದುಕೊಳ್ಳುತ್ತಾನೆ. ನಂತರ ಕೆಲವೊಮ್ಮೆ ಆತನಿಗೆ ಅದನ್ನು ಕಟ್ಟಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಬಹುದಾಗಿದೆ.

ಇನ್ನು ಇದೇ ವಿಚಾರದ ಬಗ್ಗೆ ಈಗ ರಾಜ್ಯದ ಗೃಹಮಂತ್ರಿಗಳಾಗಿರುವಂತಹ ಜಿ ಪರಮೇಶ್ವರ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳ ಎಜುಕೇಶನ್ ಲೋನ್ (Educational Loan) ಅನ್ನು ಮನ್ನಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ಹೌದು ಇತ್ತೀಚಿಗಷ್ಟೇ ಈ ಮಾತನ್ನು ಅವರು ಒಂದು ಕಾರ್ಯಕ್ರಮದ ವೇದಿಕೆಯ ಮೇಲೆ ಖುದ್ದಾಗಿ ತಾವೇ ಆಡಿದ್ದಾರೆ.

2024ರ ಮಾರ್ಚ್ 15ರವರೆಗೂ ಯಾರೆಲ್ಲ ಶಿಕ್ಷಣದ ಲೋನ್ ಪಡೆದುಕೊಂಡಿದ್ದಾರೆ ಅವರ ಎಜುಕೇಶನ್ ಲೋನ್ (Educational Loan) ಜೊತೆಗೆ ಅವರ ಬಡ್ಡಿ ಸೇರಿದಂತೆ ಸಾಲ ಮನ್ನಾ ಮಾಡುತ್ತೇವೆ ಎಂಬುದಾಗಿ ಖುದ್ದಾಗಿ ಅವರೇ ಘೋಷಣೆ ಮಾಡಿರೋದು ವಿದ್ಯಾರ್ಥಿಗಳ ಕುಟುಂಬಕ್ಕೆ ಸಂತೋಷವನ್ನು ತಂದಿದೆ.

 

Image Source: Shutterstock

 

ಖಂಡಿತವಾಗಿ ಇದು ಇಂದಿನ ಯುವಜನತೆಯ ದೊಡ್ಡ ಮಟ್ಟದ ಭಾರವನ್ನು ಇಳಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಮಾಡುತ್ತಾ ಇಲ್ವಾ ಅನ್ನೋದೇ ಮುಂದಿನ ಕಾಲ ನೀಡಬೇಕಾಗಿರುವ ಉತ್ತರವಾಗಿದೆ. ಒಂದು ವೇಳೆ ಈ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದೆ ಆದಲ್ಲಿ ಖಂಡಿತವಾಗಿ ಇದು ಗೇಮ್ ಚೇಂಜರ್ ಆಗಿರಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.