Karnataka Times
Trending Stories, Viral News, Gossips & Everything in Kannada

ATM: ಇನ್ಮುಂದೆ ಹಣ ತೆಗೆಯಲು ಎಟಿಎಂ ಗೆ ಹೋಗಬೇಕಾದ ಅಗತ್ಯ ಇಲ್ಲ, ಮನೆಯಲ್ಲಿ ಕುಳಿತಲ್ಲೇ ಹೀಗೆ ಪಡೆದುಕೊಳ್ಳಬಹುದು.

advertisement

ಆಧಾರ್ ಕಾರ್ಡ್ ಎನ್ನುವುದು ಎಷ್ಟೊಂದು ಲಾಭದಾಯಕವಾಗುತ್ತಿದೆ ಅನ್ನೋದನ್ನ ಇತ್ತೀಚಿನ ದಿನಗಳಲ್ಲಿ ಮುಂದುವರೆದಿರುವ ಟೆಕ್ನಾಲಜಿಯನ್ನು ನೋಡಿ ನೀವೆಲ್ಲರೂ ಅರ್ಥ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿ ಆಧಾರ್ ಕಾರ್ಡ್ (Aadhaar Card) ಎಟಿಎಂ ಮೂಲಕ ನೀವು ಮನೆಯಲ್ಲಿ ಕುಳಿತುಕೊಂಡೆ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡೆ ಆಧಾರ್ ಎಟಿಎಂ (ATM) ಮೂಲಕ ಹಣವನ್ನು ಪಡೆದುಕೊಳ್ಳಬಹುದಾದಂತಹ ಹೊಸ ಟೆಕ್ನಾಲಜಿ ಕೂಡ ಬಂದಿದೆ.

WhatsApp Join Now
Telegram Join Now

ಆಧಾರ್ ಎಟಿಎಂ ಮೂಲಕ ಹಣವನ್ನು ಪಡೆದುಕೊಳ್ಳಿ:

ಇಂಡಿಯಾ ಪೋಸ್ಟ್ ಪೆಮೆಂಟ್ ಬ್ಯಾಂಕ್ (India Post Payment Bank) ಮನೆಯಲ್ಲಿ ಕುಳಿತುಕೊಂಡು ಹಣವನ್ನು ಪಡೆದುಕೊಳ್ಳುವಂತಹ ಆಧಾರ್ ಎಟಿಎಂ (ATM) ಆನ್ಲೈನ್ ಸೇವೆಯನ್ನು ಪ್ರಾರಂಭ ಮಾಡಿರುವುದು ತಿಳಿದು ಬಂದಿದೆ. ಈ ಸೇವೆಯ ಮೂಲಕ ಯಾವುದೇ ಗ್ರಹಕರು ಬ್ಯಾಂಕಿಗೆ ಅಥವಾ ಹತ್ತಿರದಲ್ಲಿರುವಂತಹ ಎಟಿಎಂ ಗೆ ಕೂಡ ಹೋಗಬೇಕಾಗಿಲ್ಲ.

 

Image Source: Jansatta

 

advertisement

ಈ ಹಣವನ್ನು ನಿಮಗೆ ಲೋಕಲ್ ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಬಂದು ತಂದು ನೀಡಲಿದ್ದಾರೆ. ಬಯೋಮೆಟ್ರಿಕ್ ಐಡೆಂಟಿಟಿಯನ್ನು ಬಳಸಿಕೊಂಡು ಆಧಾರ್ ಕಾರ್ಡ್ (Aadhaar Card) ಮೂಲಕ ಹಣವನ್ನು ನೀವು ಪಡೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಗೆ ಲಿಂಕ್ ಆಗಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಇದನ್ನು ಪಡೆದುಕೊಳ್ಳುವ ವಿಧಾನ:

ಇದನ್ನು ನೀವು ಮೊದಲಿಗೆ ಪಡೆದುಕೊಳ್ಳ ಬೇಕಾಗುವುದಕ್ಕೆ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವೆಬ್ಸೈಟ್ ಗೆ ಹೋಗಿ ಅಪ್ಲೈ ಮಾಡಬೇಕು. ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಮೈಕ್ರೋ ಎಟಿಎಂ ತಿಳಿದುಕೊಂಡು ಬರುತ್ತಾರೆ ಹಾಗೂ ನೀವು ಈ ಸಂದರ್ಭದಲ್ಲಿ ಬಯೋಮೆಟ್ರಿಕ್ ಪ್ರೋಸೆಸ್ ಅನ್ನು ಪೂರೈಸ ಬೇಕಾಗಿರುತ್ತದೆ. ನಿಮ್ಮ ಐಡೆಂಟಿಟಿ ಕನ್ಫರ್ಮ್ ಆಗುತ್ತಿದ್ದಂತೆ ನೀವು ಕೇಳಿರುವಂತಹ ಹಣವನ್ನು ನಿಮಗೆ ನೀಡುತ್ತಾರೆ. ಇದಾದ ನಂತರ ನಿಮ್ಮ ಖಾತೆಯಿಂದ ಹಣ ಕಡಿತಗೊಂಡಿರುತ್ತದೆ.

ಯಾವುದೇ ರೀತಿಯ ಹೆಚ್ಚಿನ ಶುಲ್ಕವನ್ನು ಇದಕ್ಕೆ ಕಡಿತಗೊಳಿಸಲಾಗುವುದಿಲ್ಲ. ಈ ಟ್ರಾನ್ಸಾಕ್ಷನ್ ನಲ್ಲಿ ಹತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಗ್ರಾಹಕರು ಸರಿಯಾದ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇನ್ನು ಬ್ಯಾಂಕ್ ಅನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹಾಗೂ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ತಪ್ಪಾಗಿದ್ದರೆ ಟ್ರಾನ್ಸಾಕ್ಷನ್ ಕ್ಯಾನ್ಸಲ್ ಆಗುತ್ತದೆ.

https://ippbonline.com ಇದು ಅಧಿಕೃತ ವೆಬ್ಸೈಟ್ ಆಗಿದ್ದು ಎಲ್ಲಿ ಹೋಗಿ ನೀವು ಅಪ್ಲೈ ಮಾಡಬೇಕಾಗಿರುತ್ತದೆ. ಇಲ್ಲಿ ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿ ಪಿನ್ ಕೋಡ್ ಸೇರಿದಂತೆ ಕೇಳಿದಾಗ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ತುಂಬಬೇಕಾಗುತ್ತದೆ. ಇನ್ನು ಬ್ಯಾಂಕ್ ಅಕೌಂಟ್ ವಿವರವನ್ನು ಕೂಡ ಇಲ್ಲಿ ನೀಡಬೇಕಾಗುತ್ತದೆ. ಇದಾದ ನಂತರ ಕೊನೆಗೆ I Agree ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ ಸಾಕು ಈ ಪ್ರಕ್ರಿಯೆ ಪೂರ್ತಿ ಆದಂತಾಗುತ್ತದೆ.

advertisement

Leave A Reply

Your email address will not be published.