Karnataka Times
Trending Stories, Viral News, Gossips & Everything in Kannada

ATM: ದೇಶದಾದ್ಯಂತ ATM ಮೂಲಕ ಹಣ ತೆಗೆಯುವವರಿಗೆ ಕಹಿ ಸುದ್ದಿ! ಹೊಸ ನಿರ್ಧಾರ

advertisement

ಸ್ನೇಹಿತರೆ ನೀವೇನಾದರೂ ಸತತವಾಗಿ ನಿಮ್ಮ ಎಟಿಎಂ ಕಾರ್ಡ್ ಬಳಸಿ ಎಟಿಎಂ ಮೂಲಕ ಹಣವನ್ನು ತೆಗೆಯುವ ಕೆಲಸ ಮಾಡುತ್ತಿದ್ದೀರಾ? ಹಾಗಾದ್ರೆ ಈ ಪುಟದ ಮುಖಾಂತರ ಬದಲಾಗಲಿರುವ ಎಟಿಎಂನ ನಿಯಮಗಳನ್ನು ಈ ಕೂಡಲೇ ತಿಳಿದುಕೊಳ್ಳಿ. ಭಾರತದತ್ಯಂತ ಇರುವಂತ ಎಟಿಎಂ (ATM) ಗಳನ್ನು ಆಪರೇಟ್ ಮಾಡುವ ಸಲುವಾಗಿ ಎಟಿಎಂ ಆಪರೇಟರ್ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಬಳಿ ಹೆಚ್ಚಿನ ವಿನಿಮಯ ಶುಲ್ಕದ (Interchange Fees) ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಮುಂದಿನ ದಿನಮಾನಗಳಲ್ಲಿ ನೀವೇನಾದರೂ ಎಟಿಎಂನಿಂದ ಹಣವನ್ನು ತೆರೆದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

WhatsApp Join Now
Telegram Join Now

ಇನ್ಮುಂದೆ ಎಟಿಎಂ ವಿನಿಮಯ ಶುಲ್ಕ ಹೆಚ್ಚಳ:

 

Image Source: Scroll.in

 

ಎಟಿಎಂ ತಯಾರಿಕಾ AGS ಟ್ರಾನ್ಸಾಕ್ಟ್ ಟೆಕ್ನಾಲಜಿಯ ಕಾರ್ಯ ನಿರ್ವಾಹಕರಾದ ಸ್ಟ್ಯಾನ್ಲಿ ಜೊನಸ್, ಎಕನಾಮಿಕ್ ಟೈಮ್ಸ್ (Economic Times) ಪತ್ರಿಕೆಯೊಂದಿಗೆ ನಡೆಸಿದ ಸಂದರ್ಶನದಲ್ಲಿ “ಎರಡು ವರ್ಷಗಳ ಹಿಂದೆ ವಿನಿಮಯ ದರವನ್ನು ಹೆಚ್ಚಿಸಲಾಗಿದೆ ನಾವು RBIಯನ್ನು ಸಂಪರ್ಕಿಸುತ್ತಿದ್ದೇವೆ ಮತ್ತು CATIM ಶುಲ್ಕವನ್ನು 21 ರೂಪಾಯಿಗಳವರೆಗೆ ಏರಿಕೆ ಮಾಡುವಂತೆ ಬೆಂಬಲಿಸುತ್ತಿದ್ದೇವೆ. ಆದರೆ ಎಟಿಎಂ (ATM) ತಯಾರಿಕರು ಇದನ್ನು 23 ರೂಪಾಯಿಗಳಿಗೆ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ, ಈ ಬಗ್ಗೆ ಆರ್ ಬಿ ಐ (RBI) ಅಧಿಕೃತವಾಗಿ ಏನನ್ನು ಹೇಳಿಲ್ಲ, ಮುಂದಿನ ದಿನಮಾನಗಳಲ್ಲಿ ಈ ಕುರಿತು ಅಧಿಕೃತ ಪ್ರಕಟಣೆಯನ್ನು ಜನರಿಗೆ ತಿಳಿಸುತ್ತೇವೆ” ಎಂದಿದ್ದಾರೆ.

advertisement

2021ರಲ್ಲಿ ಏರಿಕೆಯಾದ ಎಟಿಎಂ ವಿನಿಮಯ ಶುಲ್ಕ:

 

Image Source: The Hindu

 

ಮಾಹಿತಿಯ ಪ್ರಕಾರ 2021ರ ಸಮಯದಲ್ಲಿ ಎಟಿಎಂ ಉತ್ಪಾದನಾ ಕಂಪನಿಗಳು, ಎಟಿಎಂ (ATM) ಬಳಸುವಿಕೆಯ ಶುಲ್ಕವನ್ನು 15 ರಿಂದ 17 ರೂಪಾಯಿಗಳಿಗೆ ಏರಿಕೆ ಮಾಡಿದರು. ಸದ್ಯದ ದಿನಮಾನಗಳಲ್ಲಿ ವಿನಿಮಯದ ಶುಲ್ಕವನ್ನು 21 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇನ್ನು ಮುಂದಿನ ದಿನಮಾನಗಳಲ್ಲಿ ಈ ಶುಲ್ಕವನ್ನು ಏರಿಕೆ ಮಾಡಲು ಚರ್ಚೆ ನಡೆಸಲಾಗುತ್ತಿದ್ದು, ಆರ್ಬಿಐನಿಂದ ಅನುಮತಿ ದೊರೆತರೆ, 23 ರೂಪಾಯಿಗಳಿಗೆ ಏರಿಕೆ (Increased ₹23) ಮಾಡಲಾಗುತ್ತದೆ.

ಈ ಖಾತೆಯನ್ನು ಹೊಂದಿರುವವರು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಎಟಿಎಂ ಬಳಸಬಹುದು:

ಉಳಿತಾಯ ಖಾತೆಯನ್ನು ಹೊಂದಿರುವವರು ಪ್ರತಿ ತಿಂಗಳು 5 ಬಾರಿ ಉಚಿತವಾಗಿ ಎಟಿಎಂ ಕಾರ್ಡನ್ನು (Free Usage of ATM Card) ಯಾವುದೇ ಶುಲ್ಕವಿಲ್ಲದೆ ಉಪಯೋಗಿಸಬಹುದು. ಇನ್ನು ಕೆಲ ಬ್ಯಾಂಕುಗಳಲ್ಲಿ ಮೂರು ಉಚಿತ ATM ವಿನಿಮಯದ ಅವಕಾಶವನ್ನು ನೀಡಿರುತ್ತಾರೆ. ಹೀಗೆ ಒಂದೊಂದು ಬ್ಯಾಂಕ್ ನಲ್ಲಿ ಎಟಿಎಂ ವಿನಿಮಯದ ಕೊಡುಗೆಯು ವಿಭಿನ್ನವಾಗಿರುತ್ತದೆ.

advertisement

Leave A Reply

Your email address will not be published.