Karnataka Times
Trending Stories, Viral News, Gossips & Everything in Kannada

Credit Card: ಇಂತವರಿಗೆ ಬ್ಯಾಂಕ್ ಯಾವತ್ತೂ ಕ್ರೆಡಿಟ್ ಕಾರ್ಡ್ ಕೊಡಲ್ಲ, ಬ್ಯಾಂಕ್ ಹೊಸ ರೂಲ್ಸ್!

advertisement

ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರ ಬಹುದು. ಆ ಸಂದರ್ಭದಲ್ಲಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ ನಂತರ ಕೂಡ ನಿಮ್ಮ ಕ್ರೆಡಿಟ್ ಕಾರ್ಡ್ (Credit Card)  ಅರ್ಜಿ ರಿಜೆಕ್ಷನ್ ಆಗುವುದನ್ನು ನೀವು ನೋಡಿರಬಹುದು. ಬ್ಯಾಂಕು ನಿಮಗೆ ಕ್ರೆಡಿಟ್ ಕಾರ್ಡ್ ನೀಡುವುದಕ್ಕಿಂತ ಮುಂಚೆ ಸಾಕಷ್ಟು ವಿಚಾರಗಳನ್ನ ಗಮನವಹಿಸುತ್ತದೆ. ಆ ವಿಚಾರಗಳು ನಿಯಮಗಳ ಅನ್ವಯ ಇರದೆ ಹೋದಲ್ಲಿ ನಿಮಗೆ ಕ್ರೆಡಿಟ್ ಕಾರ್ಡ್ ಅನ್ನು ನೀಡೋದಿಲ್ಲ. ಬನ್ನಿ ಆ ವಿಚಾರಗಳ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

ಸಾಮಾನ್ಯವಾಗಿ ಪದೇ ಪದೇ ಕೆಲಸ ಬದಲಾವಣೆ ಮಾಡುತ್ತಿರುವವರಿಗೆ ಕ್ರೆಡಿಟ್ ಕಾರ್ಡ್ ನೀಡುವಂತಹ ಕೆಲಸವನ್ನು ಬ್ಯಾಂಕುಗಳು ಮಾಡುವುದಕ್ಕೆ ಹೋಗುವುದಿಲ್ಲ. ಈ ರೀತಿ ಮಾಡಿದ್ರೆ ಕ್ರೆಡಿಟ್ ಕಾರ್ಡ್ ಅನ್ನು ನೀವು ಎಷ್ಟೇ ಅರ್ಜಿ ಸಲ್ಲಿಸಿದರು ಕೂಡ ಬ್ಯಾಂಕಿನಿಂದ ಪಡೆದುಕೊಳ್ಳುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಕ್ರೆಡಿಟ್ ಸ್ಕೋರ್ ಹಾಳಾದರೆ ಕೂಡ ನಿಮಗೆ ಕ್ರೆಡಿಟ್ ಕಾರ್ಡ್ (Credit Card) ಸಿಗೋದಿಲ್ಲ. ಅಂದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆದರೂ ಕೂಡ ನೀವು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪ್ರಮುಖವಾಗಿ ಒಂದು ವೇಳೆ ನೀವು ಈ ಹಿಂದೆ ಸಾಲವನ್ನು ಪಡೆದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡುತ್ತಿಲ್ಲ ಎಂದಾದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಹಾಳಾಗಿರುತ್ತದೆ ಹಾಗೂ ನೀವು ಡೀಫಾಲ್ಟರ್ ಆಗಿದ್ದರೆ ಆ ಸಂದರ್ಭದಲ್ಲಿ ಕೂಡ ಯಾವುದೇ ಕಾರಣಕ್ಕೂ ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ.

advertisement

ಇನ್ನು ನಾನು ಲೋನ್ ಪಡೆದುಕೊಂಡಿಲ್ಲ ಹಾಗಿದ್ರೂ ಕೂಡ ಕ್ರೆಡಿಟ್ ಹಿಸ್ಟರಿ ಇಲ್ಲದೆ ಇರುವ ಕಾರಣದಿಂದಾಗಿ ಅದು ಕೂಡ ನಿಮಗೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಮುಳುವಾಗಿ ಪರಿಣಮಿಸಬಹುದಾಗಿದೆ ಹೀಗಾಗಿ ನೀವು ಲೋನ್ ಪಡೆದುಕೊಂಡು ಅದನ್ನು ಸರಿಯಾದ ಸಮಯದಲ್ಲಿ ಕಟ್ಟಿದರೆ ಮಾತ್ರ ನಿಮ್ಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಎನ್ನುವುದು ಹೆಚ್ಚಾಗುತ್ತದೆ. ಒಂದು ವೇಳೆ ನೀವು ಯಾವುದೇ ಲೋನ್ ಪಡೆದುಕೊಂಡಿಲ್ಲ ಎಂದಾದಲ್ಲಿ ನೀವು ಎಲ್ಲಿ ಸೇವಿಂಗ್ ಅಕೌಂಟ್ ಅನ್ನು ಓಪನ್ ಮಾಡಿದ್ದೀರೋ ಆ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಅಪ್ಲೈ ಮಾಡಿ ನಿಮ್ಮ ಅಕೌಂಟ್ ಹಿಸ್ಟರಿ ಅನ್ನು ನೋಡಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದರು ಕೂಡ ನೀಡಬಹುದು.

ಹೀಗಾಗಿ ಸಿಬಿಲ್ ಸ್ಕೋರ್ ವಿಚಾರದಲ್ಲಿ ನೀವು ಸರಿಯಾದ ರೀತಿಯಲ್ಲಿ ಪಡೆದುಕೊಂಡಿರುವಂತಹ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟೋದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ. ಹೀಗಾಗಿ ಸಿಬಿಲ್ ಸ್ಕೋರ್ ಚೆನ್ನಾಗಿ ಮೈನ್ಟೈನ್ ಮಾಡುವುದಕ್ಕೆ ನೀವು ಸಾಲವನ್ನ ಸರಿಯಾದ ರೀತಿಯಲ್ಲಿ ಕಟ್ಟಿ ಹಾಗೂ ಉತ್ತಮವಾದ ರೀತಿಯಲ್ಲಿ ನಿಮ್ಮ ಕ್ರೆಡಿಟ್ ಸಿಸ್ಟರಿಯನ್ನ ಮೇಂಟೈನ್ ಮಾಡಿ ಖಂಡಿತವಾಗಿ ನೀವು ಖಾತೆ ಮಾಡಿರುವಂತಹ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.