Karnataka Times
Trending Stories, Viral News, Gossips & Everything in Kannada

Gruhajyoti Scheme: ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಮತ್ತೊಂದು ಬಂಪರ್ ಸುದ್ದಿ, ವಿದ್ಯುತ್ ಬಳಕೆ ಹೆಚ್ಚಳ!

advertisement

ಈಗಾಗಲೇ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿದ್ದು ಬಹಳಷ್ಟು ಸುದ್ದಿಯಲ್ಲಿದೆ. ಈಗಾಗಲೇ ಜನರು ಗ್ಯಾರಂಟಿ ಯೋಜನೆಗಳ ಸದುಪಯೋಗ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆಗಳಲ್ಲಿ ಮೊದಲು ಆರಂಭ ಗೊಂಡ ಯೋಜನೆಯೇ ಗೃಹ ಜ್ಯೋತಿ. ಗೃಹ ಜ್ಯೋತಿ ಯೋಜನೆ (Gruhajyoti Scheme)ಯ ಮೂಲಕ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ವಿದ್ಯುತ್‌ ನೀಡಲಾಗುತ್ತದೆ. ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಅಂದರೆ, ಆರ್ಥಿಕ ವರ್ಷ ಆಧಾರದ ಮೂಕ ಯೂನಿಟ್‌ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ನೀಡಲಾಗುತ್ತದೆ.

ಈ ಗುಡ್ ನ್ಯೂಸ್ ನೀಡಿದೆ

ರಾಜ್ಯ ಸರ್ಕಾರವು ಇದೀಗ ಗೃಹಜ್ಯೋತಿ ಸೌಲಭ್ಯ ಪಡೆಯುವ ಜನರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೆಚ್ಚುವರಿ ಶೇ. 10% ಬದಲಾಗಿ, 10 ಯೂನಿಟ್‌ ಉಚಿತ ವಿದ್ಯುತ್‌ ನೀಡಲು ಸಹ ಮುಂದಾಗಿದೆ.

ಹೆಚ್ಚು ವಿದ್ಯುತ್ ಬಳಕೆಯ ಪಾವತಿ

ಉಚಿತ ವಿದ್ಯುತ್ ಪಡೆಯುವ ಕುಟುಂಬವು ತಿಂಗಳಿಗೆ 200 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿದ್ದರೆ ಆ ವಿದ್ಯುತ್ ನ‌ ಹೆಚ್ಚು ವರಿ ಮೊತ್ತವನ್ನು ಕಟ್ಟಬೇಕಾಗುತ್ತದೆ. ಹಾಗಾಗಿ ಬಳಕೆಗೆ ಮಿತಿಯನ್ನು ಸಹ ನಿಗದಿಪಡಿಸಲಾಗಿದೆ.

advertisement

ಶಾಲೆಗಳಿಗೂ ಉಚಿತ ವಿದ್ಯುತ್

ಇದೀಗ ಗೃಹಜ್ಯೋತಿ ಯೋಜನೆಯನ್ನು ಬಡವರ್ಗದ ಜನತೆಗೆ ಮಾತ್ರವಲ್ಲ, ನೇಕಾರರಿಗೆ, ದೇವಾಲಯಗಳಿಗೆ ಅದೇ ರೀತಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್‌ ಸೌಲಭ್ಯವನ್ನು ಒದಗಿಸುತ್ತಿದೆ.

ಹೆಚ್ಚುವರಿ ವಿದ್ಯುತ್

ಹೌದು ವಾರ್ಷಿಕ ವಿದ್ಯುತ್‌ ಬಳಕೆ ಮೂಲಕ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್‌ ಈಗಾಗಲೇ ನೀಡುತ್ತಿದ್ದು ಈಗ 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ನೀಡುವ ಯೋಜನೆ ಹಾಕಿ ಕೊಂಡಿದ್ದು ಕೃಷಿಕರಿಗೆ ಇದರ ಉಪಯುಕ್ತ ಮತ್ತಷ್ಟು ಹೆಚ್ಚಾಗಬಹುದು.

advertisement

Leave A Reply

Your email address will not be published.