Karnataka Times
Trending Stories, Viral News, Gossips & Everything in Kannada

HSRP Number Plate: HSRP ಹಾಕದವರಿಗೆ ಗುಡ್ ನ್ಯೂಸ್ ಕೊಟ್ಟ ಕೋರ್ಟ್! ಇದಕ್ಕಿಂತ ಜಾಸ್ತಿ ದಂಡ ಬೇಡವಂತೆ, ದರ ನಿಗದಿ

advertisement

ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಹೆಚ್ಚಾಗಿದೆ.ಅದೇ ರೀತಿ ರಸ್ತೆ ಸಾರಿಗೆ ನಿಯಮ‌ ಎಷ್ಟೇ ಕಟ್ಟು ನಿಟ್ಟಿನಲ್ಲಿ ಜಾರಿಗೆ‌ ತಂದರೂ ಕೂಡ ನಿಯಮ ಉಲ್ಲಂಘನೆ ಮಾಡುವುದನ್ನು ಬಿಟ್ಟಿಲ್ಲ.‌ಇದಕ್ಕಾಗಿ ಟ್ರಾಫಿಕ್ ನಿಯಮಗಳನ್ನು ಮತ್ತಷ್ಟು ಬಿಗಿ ಗೊಳಿಸಿದೆ‌.ಅದೇ ರೀತಿ ಎಚ್ ಎಸ್ ಅರ್ ಪಿ (HSRP Number Plate) ಅಳವಡಿಕೆ ಬಗ್ಗೆಯು ಸಾರಿಗೆ ಇಲಾಖೆ ಹೊಸ ಕ್ರಮ ಕೈಗೊಂಡಿದ್ದು ಅಳವಡಿಕೆ ಕಡ್ಡಾಯ ಕೂಡ ಮಾಡಿದೆ.‌ಈಗಾಗಲೇ ಇದಕ್ಕೆ ಹಲವಾರು ಭಾರಿ ಅವಕಾಶ ನೀಡಿದರೂ ಅಳವಡಿಕೆ ಮಾಡಿದವರು ಕಡಿಮೆ ಎಂದೇ ಹೇಳಬಹುದು‌.

WhatsApp Join Now
Telegram Join Now

ಕಡ್ಡಾಯ ಮಾಡಬೇಕು:

2019ಕ್ಕೂ ಮುಂಚೆ ನೋಂದಣಿಯಾದ ವಾಹನಗಳು ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ ವಾಗಿದ್ದು ಈ ಬಗ್ಗೆ ಸೂಚನೆ ನೀಡುತ್ತಲೇ ಇದೆ. ಆದರೆ ಅಳವಡಿಸಲು ಬಹಳಷ್ಟು ವಾಹನಗಳು ಬಾಕಿ ಇರಲಿದೆ. ಸುರಕ್ಷಿತ ನಂಬರ್​ ಪ್ಲೇಟ್ ಅಳವಡಿಸಲು ಸುಮಾರು ಅರ್ಧದಷ್ಟು ವಾಹನ ಮಾಲೀಕರಿಗೆ ಇನ್ನೂ ಆಗಿಲ್ಲ. ಹೀಗಾಗಿ ಸಮಯ‌ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಕೋರ್ಟ್​ ಆದೇಶದ ಮೂಲಕ ಮತ್ತಷ್ಟು ಸಮಯ ವಿಸ್ತರಣೆಯಾಗಿದ್ದು ವಾಹನ ಸವಾರರಿಗೆ ಈ ವಿಚಾರ ಖುಷಿ ನೀಡಿದೆ. ಸರ್ಕಾರವೂ ಇದನ್ನು ಇನ್ನಷ್ಟು ಮುಂದುವರಿಸುವ ಸಾಧ್ಯತೆ ಇದೆ.

ಅವಕಾಶ ನೀಡಿದೆ:

 

Image Source: Vistara News

 

ಹಳೆಯ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆಗೆ ಈಗಾಗಲೇ ನೀಡಿದ್ದ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಈ ಮೊದಲು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ (High Court) ಜುಲೈ 4 ರ ತನಕ ವಿಸ್ತರಣೆ ಮಾಡಿದೆ. ಇದರಿಂದಾಗಿ ವಾಹನ ಸವಾರರು ದಂಡ ಪಾವತಿ ಮಾಡುವುದನ್ನು ತಪ್ಪಿಸಿದೆ ಎಂದು ಹೇಳಬಹುದು.

ಈ ಬಗ್ಗೆ ಗಮನಿಸಿ:

advertisement

ಆದರೆ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕೆಲವರು ಹೆಚ್ಚು ಹಣ ಪಾವತಿ ಮಾಡುವ ಮೂಲಕ ಸುಖ ಸುಮ್ಮನೆ ಮೋಸ ಆಗುತ್ತಿದ್ದಾರೆ. ಅದಕ್ಕಾಗಿ ಯಾವ ವಾಹನಕ್ಕೆ ಎಷ್ಟು ಮೊತ್ತ ಎಂದು ಮೊದಲೇ ತಿಳಿದು ಕೊಳ್ಳಿ. ಆಟೋ ಅಥವಾ ಮೂರು ಚಕ್ರದ ವಾಹನಗಳಿಗೆ 450 ರೂ.ಗಳಿಂದ 550 ರೂ.ಗಳವರೆಗೆ ಇರಲಿದ್ದು ಕಾರು ಅಥವಾ 4 ಚಕ್ರದ ವಾಹನಗಳಿಗೆ 650 ರೂ.ಗಳಿಂದ 85೦ ರೂ.ಗಳ ವರೆಗೆ, ಲಾರಿ, ಬಸ್ಸು ಮತ್ತು 10 ಚಕ್ರದ ವಾಹನಗಳಿಗೆ 650 ರೂ.ಗಳಿಂದ 800 ರೂಪಾಯಿವರೆಗೆ ಮೊತ್ತ ಇರಲಿದೆ.

ದಂಡ‌ ಇರಲಿದೆ:

 

Image Source: Siasat.com

 

ಈಗಾಗಲೇ ಎಚ್ ಎಸ್ ಅರ್ ಪಿ (HSRP) ಅಳವಡಿಕೆ ಮಾಡಲು ಕಳೆದ ವರ್ಷವೇ ಸೂಚನೆ ನೀಡಿದ್ದು ಈಗ ಮತ್ತಷ್ಟು ಭಾರಿ ಅವಕಾಶ ನೀಡಿದೆ. ಆದರೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ (HSRP Number Plate) ಬದಲಾವಣೆ ಮಾಡಿಕೊಳ್ಳದೆ ಇದ್ದರೆ 500-1000 ರೂಪಾಯಿ ದಂಡ ವಿಧಿಸುವ ಸಾದ್ಯತೆ ಇರಲಿದೆ. ಹಾಗಾಗಿ ಈ ಬಗ್ಗೆ ಗಮನ ವಹಿಸಿ.

ನೊಂದಣಿ ಮಾಡಿ:

ನಂಬರ್ ಪ್ಲೇಟ್ ಗೆ Apply ಮಾಡಲು ಮೊದಲಿಗೆ https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ಆಪ್ಚನ್ ಇರಲಿದ್ದು ಅದಕ್ಕೆ ಕ್ಲಿಕ್ ಮಾಡಿ.ನಂತರ‌ ನಿಮ್ಮ ವಾಹನದ ಮೂಲ ವಿವರ ಮಾಹಿತಿ ನೀಡಿ. ಬಳಿಕ ಡೀಲರ್ ಸ್ಥಳವನ್ನು ಆಯ್ಕೆಮಾಡಿ, ಹೆಚ್.ಎಸ್.ಆರ್.ಪಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಬಳಿಕ ನಿಮಗೆ ತಕ್ಕಂತೆ ಹೆಚ್.ಎಸ್.ಆರ್.ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.

ನಿಮ್ಮ ವಾಹನದ ಯಾವುದೇ ತಯಾರಿಕ ಸ್ಥಳಕ್ಕೆ ಭೇಟಿ ನೀಡಿ.ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಅರ್ಜಿ ಸಲ್ಲಿಸಿದ ಬಳಿಕ ನಿಗದಿಪಡಿಸಿದ ದಿನದಂದು ಅಳವಡಿಸಲು ಸಾಧ್ಯವಾಗದೆ ಇದ್ದರೆ ಮತ್ತೆ ಹೊಸ ದಿನಾಂಕಕ್ಕೆ ರಿ ಶೆಡ್ಯೂಲ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.

advertisement

Leave A Reply

Your email address will not be published.