Karnataka Times
Trending Stories, Viral News, Gossips & Everything in Kannada

Kannada Board: ರಾಜಧಾನಿಯಲ್ಲಿ ಕಡ್ಡಾಯ ಕನ್ನಡ ಬೋರ್ಡ್ ಗೆ ಕೊನೆ ದಿನಾಂಕ ನಿಗಧಿ, ಅಂಗಡಿ ಮಾಲೀಕರಿಗೆ ಎಚ್ಚರಿಕೆ!

advertisement

ಕರ್ನಾಟಕದಲ್ಲಿದ್ದು ಕನ್ನಡ ಬರೊಲ್ಲ ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಇಲ್ಲೇ ಹುಟ್ಟಿ ಬೆಳೆದವರ ನಿರ್ಲಕ್ಷ್ಯ ಭಾವವಾದರೆ ಇನ್ನೊಂದೆಡೆ ಪರಕಿಯರು ಇಲ್ಲಿಗೆ ಬಂದು ತಮ್ಮ ಭಾಷೆ ಹೇರಿಕೆ ಮಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಹೋರಾಟ ಅನೇಕ ವರ್ಷಗಳಿಂದ ನಡೆದು ಬಂದದ್ದೇ ಆಗಿದ್ದು ಭಾಷೆ, ಸಂಸ್ಕ್ರತಿಯ ಉಳಿವಿಗಾಗಿ ಹೋರಾಡಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಅನ್ಯ ರಾಜ್ಯ ನಿವಾಸಿಗಳು ಅಧಿಕವಾಗೇ ಇದ್ದಾರೆ.

ಉದ್ಯೋಗ (Employment), ಶಿಕ್ಷಣ (Education), ಸ್ವೋ ಉದ್ಯೋಗ (Self Employment) ಎಂಬ ಅನೇಕ ಕಾರಣದಿಂದ ಕೂಡ ಹಳ್ಳಿಯಿಂದ ಬೆಂಗಳೂರಿನತ್ತ ಪಯಣ ಬೆಳೆಸಿದ್ದ ಅನೇಕರನ್ನು ನಾವು ಕಾಣಬಹುದು. ಈ ನಡುವೆ ಅಂಗಡಿ, ಮಳಿಗೆ, ಇನ್ನಿತರ ಕಂಪೆನಿಗಳ ಹೆಸರು ಆಂಗ್ಲ ಭಾಷೆ ಮತ್ತು ಇತರ ಅನ್ಯ ಭಾಷೆಯಲ್ಲಿ ಇರುತ್ತಿದ್ದು ಇದಕ್ಕೆ ಕೂಡ ಕನ್ನಡ ಪರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ಇತ್ತೀಚೆಗಷ್ಟೇ ಹೋರಾಟ ಕೂಡ ಮಾಡಿದೆ. ಇದೀಗ ಬೃಹತ್ ಬೆಂಗಳೂರಿ ಮಹಾನಗರ ಪಾಲಿಕೆ (BBMP) ಯಿಂದ ಡೆಡ್ ಲೈನ್ (Deadline) ಅನ್ನು ಸಹ ನೀಡಲಾಗಿದೆ.

ಅಂದರೆ ಬೆಂಗಳೂರು ಮಹಾನಗರ ಪಾಲಿಗೆ ಅಧೀನದ ಒಳಗೆ ಬರುವ ಎಲ್ಲ ಅಂಗಡಿ ಮುಂಗಟ್ಟುಗಳಿಗೂ ಕೂಡ ಇಂತಿಷ್ಟು ನಿಗಧಿತ ದಿನಾಂಕದ ಒಳಗಾಗಿ ಕನ್ನಡಲ್ಲಿ ಬೋರ್ಡ್ ಕಡ್ಡಾಯವಾಗಿ ಅಳವಡಿಸಲು ತಿಳಿಸಲಾಗುತ್ತಿದ್ದು ಉಲ್ಲಂಘನೆ ಮಾಡಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಾಗುತ್ತಿದೆ. ಒಟ್ಟಾರೆ ಈಗಾಗಲೇ 34ಸಾವಿರಕ್ಕೂ ಅಧಿಕ ಜನರ ಅಂಗಡಿ ಮುಂಗಟ್ಟಿಗೆ ನೋಟೀಸ್ ನೀಡಲಾಗಿದ್ದು ಫೆಬ್ರವರಿ 28ರ ಒಳಗಾಗಿ ಕಡ್ಡಾಯವಾಗಿ ಕನ್ನಡದ ಬೋರ್ಡ್ (Kannada Board) ಅಳವಡಿಸಲೇ ಬೇಕು ಎಂದು ತಿಳಿಸಲಾಗಿದೆ.

 

advertisement

 

ಈಗಾಗಲೇ ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಪಶ್ಚಿಮ, ಪೂರ್ವ, ರಾಜರಾಜೇಶ್ವರಿ ಭಾಗದಲ್ಲಿ ಅನೇಕರಿಗೆ ನೋಟಿಸ್ ನೀಡಲಾಗಿದ್ದು ಫೆಬ್ರವರಿ 28ಕೊನೆಯ ದಿನವಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ರಾಜ್ಯದ ಜನತೆಗಿಂತ ಅನ್ಯ ರಾಜ್ಯದವರೇ ಅಧಿಕ ಇದ್ದಾರೆ ಹಾಗಾಗಿ ಆಂಗ್ಲ ಅಥವಾ ಇತರ ಭಾಷೆ ಬೋರ್ಡ್ ಅಳವಡಿಕೆಗೆ ಅನುಮತಿಸಲು ಹಾಗೂ ಈಗಷ್ಟೇ ಲಕ್ಷಾಂತರ ರೂಪಾಯಿ ವ್ಯಯಿಸಿದ್ದ ಬೋರ್ಡ್ ಬಳಸಲು ಮನವಿ ಬಂದ ಹಿನ್ನೆಲೆ ಕೆಲ ಅಗತ್ಯ ಸೂಚನೆ ಸಹ ಮಹಾನಗರ ಪಾಲಿಕೆ ಮುಖೇನ ನೀಡಲಾಗಿದೆ.

ಯಾವುದೇ ಇತರ ಭಾಷೆಯನ್ನು ನಾಮಫಲಕದಲ್ಲಿ ಬಳಸುವಾಗ ಕಡ್ಡಾಯವಾಗಿ 60%ನಷ್ಟಾದರೂ ಕನ್ನಡ ಬಳಕೆ ಆಗಲೇ ಬೇಕು ಎಂದು ಸೂಚನೆ ಮೂಲಕ ತಿಳಿಸಲಾಗಿದೆ. ಆದರೆ ಹೊಸ ಬೋರ್ಡ್ ಹಾಕಿದ್ದರೂ ಕೂಡ ಕನ್ನಡ ಇಲ್ಲದಿದ್ದರೆ ಅದನ್ನು ತೆಗೆಯಬೇಕು ಇಲ್ಲ ಆಯಾ ಅಂಗಡಿ ಮುಂಗಟ್ಟಿನವರು ಪ್ರತ್ಯೇಕ ಕನ್ನಡದ ಬೋರ್ಡ್ ಹಾಕಬೇಕು ಎಂದು ಸಹ ಸೂಚನೆ ನೀಡಿದ್ದಾರೆ. ಈ ಮೂಲಕ ಕೊನೆಯ ದಿನಾಂಕದ ಗಡುವನ್ನು ನೀಡಲಾಗಿದ್ದು ರಾಜಧಾನಿಯಲ್ಲಿ ದೊಡ್ಡ ಸುದ್ದಿಯಾಗಿದೆ.

advertisement

Leave A Reply

Your email address will not be published.