Karnataka Times
Trending Stories, Viral News, Gossips & Everything in Kannada

Car Loan: ಸುಲಭವಾಗಿ ಕಾರ್ ಲೋನ್ ಪಡೆಯಲು ಆಧಾರ ಕಾರ್ಡ್ ಸಂಬಂಧಿತ ಈ ಕೆಲಸ ಇಂದೇ ಪೂರ್ಣಗೊಳಿಸಿ!

advertisement

ನೀವು ಹೊಸದಾಗಿ ಕಾರ್ ಖರೀದಿ ಮಾಡಲು ಬಯಸಿದರೆ ಅದಕ್ಕೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳುತ್ತೀರಿ. ಅಂದಮೇಲೆ ಇದಕ್ಕೆ ಮುಖ್ಯವಾಗಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಮುಖ್ಯವಾಗಿರುವ ದಾಖಲೆಗಳು ಅಂದ್ರೆ ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್ (PAN Card).

ಕಾರ್ ಲೋನ್ ಗೆ ಈ ದಾಖಲೆಗಳು ಮುಖ್ಯ:

ಸುಲಭವಾಗಿ ಕಾರ್ ಲೋನ್ (Car Loan) ಪಡೆದುಕೊಳ್ಳಬೇಕು ಅಂದ್ರೆ ಆಧಾರ್ ಕಾರ್ಡ್ (Aadhaar Card) ನೊಂದಿಗೆ ಪ್ಯಾನ್ ಕಾರ್ಡ್ (PAN Card) ಲಿಂಕ್ ಮಾಡಿಕೊಳ್ಳುವುದು ಬಹಳ ಮುಖ್ಯ ಹಾಗೂ ಆಧಾರ್ ಗೆ ಲಿಂಕ್ ಆಗಿರುವ ಪ್ಯಾನ್ ಕಾರ್ಡ್ ಅನ್ನು ಬ್ಯಾಂಕ್ ಗೆ ನೀಡಿದರೆ ನಿಮಗೆ ಸುಲಭವಾಗಿ ಹಣಕಾಸಿನ ಸೌಲಭ್ಯ ದೊರೆಯುತ್ತದೆ. ಗ್ರಾಹಕರು ಬೇರೆ ಯಾವುದೇ ದಾಖಲೆಯನ್ನೂ ನೀಡದೆ ಸುಲಭವಾಗಿ ಆಧಾರ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಪ್ಯಾನ್ ಕಾರ್ಡ್ ನೀಡಿ, ಕಡಿಮೆ ಬಡ್ಡಿ ದರಕ್ಕೆ ಕಾರ್ ಲೋನ್ ಪಡೆದುಕೊಳ್ಳಬಹುದು.

ಕಡಿಮೆ ಬಡ್ಡಿ ದರಕ್ಕೆ ಕಾರ್ ಲೋನ್:

 

 

ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡರೆ ಕಾರ್ ಲೋನ್ (Car Loan) ಗೆ ಇರುವ ಬಡ್ಡಿ ದರವು ಕೂಡ ಕಡಿಮೆ ಆಗುತ್ತದೆ. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಪ್ಯಾನ್ ಕಾರ್ಡ್ ಜೊತೆಗೆ ಸಾಲ ತೆಗೆದುಕೊಂಡರೆ ಬಡ್ಡಿದರ ಯಾಕೆ ಕಡಿಮೆ ಆಗಬಹುದು. ಮೊಟ್ಟಮೊದಲನೆಯದಾಗಿ ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ಪಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಂಡಿದ್ದರೆ ಆ ವ್ಯಕ್ತಿ ಸಾಲ ತೀರಿಸಲು ಸಮರ್ಥನಾಗಿದ್ದಾನೆ ಹಾಗೂ ಸರಿಯಾದ ವಿಳಾಸ ಕೂಡ ಹೊಂದಿದ್ದಾನೆ ಎಂಬುದು ಅರ್ಥವಾಗುತ್ತದೆ ಹೀಗಾಗಿ ಆತನಿಗೆ ಸಾಲ ನೀಡಲು ಬ್ಯಾಂಕ್ ಕೂಡ ಹಿಂಜರಿಯುವುದಿಲ್ಲ.

Credit Score ಕೂಡ ಮುಖ್ಯ:

 

 

ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಸಾಲ ಸೌಲಭ್ಯ ಪಡೆದುಕೊಳ್ಳುವುದಿದ್ದರೆ, ಕ್ರೆಡಿಟ್ ಸ್ಕೋರ್ (Credit Score) ಎನ್ನುವುದು ಬಹಳ ಮುಖ್ಯವಾಗಿರುವ ಅಂಶವಾಗಿರುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಆಗಿದ್ದರು ಕೂಡ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಲ್ಲದೆ ಇದ್ದರೆ ಸಾಲ ಸೌಲಭ್ಯ ಸಿಗುವುದಿಲ್ಲ ಎಂಬುದು ನೆನಪಿನಲ್ಲಿರಲಿ. ಹಾಗಾಗಿ ಸರಿಯಾದ ರೀತಿಯ ಹಣಕಾಸಿನ ವ್ಯವಹಾರದ ಮೂಲಕ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಬಹಳ ಮುಖ್ಯ.

ಕಾರ್ ಲೋನ್ ತೆಗೆದುಕೊಳ್ಳಲು ಈ ಕೆಲವು ಅಂಶಗಳು ನೆನಪಿರಲಿ:

advertisement

ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಸಂಶೋಧನೆ:

ಹೌದು ನೀವು ಕಾರ್ ಲೋನ್ ತೆಗೆದುಕೊಳ್ಳಲು ಬಯಸಿದರೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಕಾರ್ ಲೋನ್ ಗೆ ಇರುವ ಬಡ್ಡಿ ದರ ಹಾಗೂ ಮರುಪಾವತಿ ಮಾಡಲು ಇರುವ ಅವಧಿಯ ಬಗ್ಗೆ ಗಮನಹರಿಸಬೇಕು ಇದಕ್ಕಾಗಿ ಫೈನಾನ್ಸ್ ನಿಂದ ಹಿಡಿದು ಬ್ಯಾಂಕ್ ಗಳವರೆಗೆ ನೀವು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ನಂತರ ಯಾವುದು ಕಡಿಮೆ ಬಡ್ಡಿದರ ಇದೇ ಹಾಗೂ ಹೆಚ್ಚು ಸೌಲಭ್ಯವನ್ನು ಒಳಗೊಂಡಿದೆ ಎಂಬುದನ್ನು ಗಮನಿಸಿ ಆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಬಹುದು.

ಅರ್ಹತೆ ಮುಖ್ಯ..

ಇನ್ನು ನೀವು ಹೊಸದಾಗಿ ಕಾರ್ ಖರೀದಿಸಲು ಸಾಲ ತೆಗೆದುಕೊಳ್ಳಲು ಮುಂದಾಗಿದ್ದರೆ ನಿಮ್ಮ ಅರ್ಹತೆಯ ಬಗ್ಗೆ ನಿಮಗೆ ತಿಳಿದಿರಬೇಕು ಉದಾಹರಣೆಗೆ ಬ್ಯಾಂಕಿನಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು, ಇತರ ಸಾಲಗಳಲ್ಲಿ ಮುಳುಗಿರಬಾರದು, ಉತ್ತಮ ಆದಾಯ ಇದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಕಾರ್ ಲೋನ್ ಗೆ ಅಪ್ಲೈ ಮಾಡಬೇಕು.

ಕಾರ್ ಲೋನ್ ಗೆ ಅರ್ಜಿ:

ಇನ್ನು ನೀವು ಕಾರ್ ಲೋನ್ ಪಡೆದುಕೊಳ್ಳಲು ಕೆಲವು ಪ್ರಮುಖ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಪಾಸ್ಪೋರ್ಟ್ ನಂತರ ಗುರುತಿನ ಚೀಟಿ ನೀಡಬೇಕು. ವಿಳಾಸದ ಪುರಾವೆ ನೀಡಬೇಕು. ನೀವು ಸಂಬಳ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ನಂತಹ ಪುರಾವೆಯನ್ನು ಕೊಡಬೇಕು.

ಕ್ರೆಡಿಟ್ ವರದಿ:

ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನೀವು ಅರ್ಜಿ ಸಲ್ಲಿಸಿದ ನಂತರ ನೀವು ಈ ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿದ್ದೀರೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತದೆ. ನೀವು ಅರ್ಹರಾಗಿದ್ದರೆ ತಕ್ಷಣ ಸಾಲ ಮಂಜೂರಾಗುತ್ತದೆ.

ಸಾಲ ಮರುಪಾವತಿ:

ನೀವು ಪ್ರತಿ ತಿಂಗಳು ಇಎಂಐ ಹಾಕಿಸಿಕೊಂಡು ಇಂತಿಷ್ಟು ವರ್ಷ ಎಂದು ನಿಗದಿತ ಅವಧಿಗೆ ನಿಗದಿತ ಮೊತ್ತವನ್ನು ಮರುಪಾವತಿ ಮಾಡಬೇಕು, ಈ ರೀತಿಯಾಗಿ ಸುಲಭವಾಗಿ ಕಾರ ಲೋನ್ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.