SBI: ಯಾವುದೇ ಊರಿನಲ್ಲಿ ಸ್ಟೇಟ್ ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ಸೂಚನೆ
![](https://karnatakatimes.com/wp-content/uploads/2024/05/New-notice-for-those-who-have-SBI-account-in-any-city.jpg)
advertisement
ಇತ್ತೀಚಿನ ದಿನದಲ್ಲಿ ಆನ್ಲೈನ್ ಮೋಸದ ಜಾಲ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆ ಎಂದು ಹೇಳಬಹುದು. ಹಣಕಾಸಿನ ಮೋಸ ಮಾಡುವ ಸಂಖ್ಯೆ ಅಧಿಕ ಆದ ಕಾರಣ ಆಗಾಗ ಬ್ಯಾಂಕ್ ಈ ಬಗ್ಗೆ ಜಾಗೃತಿ ಮೂಡಿಸುತ್ತಲೆ ಜನರನ್ನು ಎಚ್ಚರಿಸುತ್ತಲಿರುತ್ತದೆ. ಹಾಗಿದ್ದರು ಹೆಚ್ಚಿನ ಹಣದಾಸೆಗಾಗಿ ಮೋಸ ಹೋಗುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು ಈನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜನರಿಗೆ ಮಹತ್ವದ ಆದೇಶ ನೀಡಿದ್ದುಈ ಆದೇಶ ನಿರ್ಲಕ್ಷ್ಯ ಮಾಡಿದರೆ ಅಪಾರ ನಷ್ಟ ಕೂಡ ಆಗಲಿದೆ.
ಅನಧಿಕೃತ ವೆಬ್ಸೈಟ್:
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಪಾರ ಪ್ರಮಾಣದಲ್ಲಿ ಬ್ಯಾಂಕಿನ ಗ್ರಾಹಕರನ್ನು ಹೊಂದಿದು ಅನೇಕರ ಪಾಲಿನ ನೆಚ್ಚಿನ ಬ್ಯಾಂಕ್ ಎಂಬ ಸ್ಥಾನ ಕೂಡ ಪಡೆದಿದೆ. ಬ್ಯಾಂಕಿನ ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಸೇವೆ ಹಾಗೂ ಬ್ರ್ಯಾಂಚ್ ಸಂಖ್ಯೆ ಕೂಡ ಅಧಿಕ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಅನಧಿಕೃತ ವೆಬ್ಸೈಟ್ ಲಿಂಕ್ ನ ಮೋಸದ ಜಾಲ ಪತ್ತೆ ಆಗಿದ್ದು ಈ ಬಗ್ಗೆ ಸ್ಟೇಟ್ ಬ್ಯಾಂಕ್ ಕೂಡ ತನ್ನ ಆತಂಕ ಹೊರಹಾಕಿದ್ದು ಗ್ರಾಹಕರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದೆ.
ವಾಟ್ಸ್ ಆ್ಯಪ್ ಸಂದೇಶ:
![](https://karnatakatimes.com/wp-content/uploads/2024/05/SBI-Fraud-Whatsapp-Message-300x156.jpg)
advertisement
ಇತ್ತೀಚಿನ ದಿನದಲ್ಲಿ ಕ್ಯಾಶ್ ಬ್ಯಾಕ್ ಹಾಗೂ ಬಹುಮಾನದ ಹೆಸರಿನಲ್ಲಿ ಮೋಸ ಮಾಡುವ ಪ್ರಮಾಣ ಅಧಿಕ ಆಗುತ್ತಿದೆ ಅದೇ ರೀತಿ ಈಗ ಸ್ಟೇಟ್ ಬ್ಯಾಂಕ್ ನ ಹೆಸರಿನಲ್ಲಿ ವಾಟ್ಸ್ ಆ್ಯಪ್ ಸಂದೇಶ ನೀಡಿ ಬಹುಮಾನ ಗೆದ್ದಿದ್ದು ಹಣ ಪಡೆಯಲು ಲಿಂಕ್ ಓಪನ್ ಮಾಡುವಂತೆ ಸೂಚಿಸಲಾಗುತ್ತದೆ. ಹಾಗಾಗಿ ಇಂತಹ ಮೋಸದ ಲಿಂಕ್ ಓಪನ್ ಮಾಡಿದವರು ತಮಗೆ ಅರಿವಿಲ್ಲದೆ ಹಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ SBI ಈ ಬಗ್ಗೆ ತನ್ನ ಗ್ರಾಹಕರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದೆ.
ಸಂದೇಶ ಹೇಗೆ ಇರಲಿದೆ?
ಶುಭಾಶಯಗಳು, ನಿಮ್ಮ SBI ನೆಚ್ಚಿನ ಗ್ರಾಹಕರ ಬಹುಮಾನ ಮೊತ್ತಕ್ಕೆ ಆಯ್ಕೆ ಆಗಿದ್ದೀರಿ. SBI ನಿಂದ 7,250 ರೂಪಾಯಿ ಸಕ್ರಿಯವಾಗಿಸಲಾಗಿದೆ. ಇದನ್ನು ನೀವು ಪಡೆಯಲು ಇಂದು ಕೊನೆ ದಿನಾಂಕ ಆಗಿದ್ದು ಕೂಡಲೇ SBI Reward s Application ಅನ್ನು ಸ್ಥಾಪಿಸಿ,ಆಗ ನಿಮ್ಮ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಮೋಸದ ಸಂದೇಶದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ SBI YONO.apk ಎಂಬ ಅಪ್ಲಿಕೇಶನ್ ಸಹ ವಾಟ್ಸ್ ಆ್ಯಪ್ ನಲ್ಲಿ ಬಿಡುಗಡೆ ಮಾಡಲಾಗಿದೆ.
SBI ಸ್ಪಷ್ಟನೆ:
ಈ ಬಗ್ಗೆ ಸ್ವತಃ SBI ಸ್ಪಷ್ಟನೆ ನೀಡಿದ್ದು SBI ಗ್ರಾಹಕರ ಸುರಕ್ಷತೆಗೆ ಅಧಿಕ ಆದ್ಯತೆ ನೀಡಲಿದ್ದು ಇದುವರೆಗೆ ಯಾವುದೆ ರಿವಾರ್ಡ್ ಪಾಂಯ್ಟ್ ಮೊತ್ತ ಪಡೆಯಲು ಆದೇಶ ನೀಡಲಿಲ್ಲ. ಎಪಿಕೆ ಅಪ್ಲಿಕೇಶನ್ ಬಳಸುವಂತೆ ಹಾಗೂ ವಾಟ್ಸ್ ಆ್ಯಪ್, SMS ಸಂದೇಶ ಸಹ ನೀಡಲಿಲ್ಲ. ಇಂತಹ ಅನಧಿಕೃತ ಲಿಂಕ್ ಹಾಗೂ ಅಪ್ಲಿಕೇಶನ್ ಬಳಸಿ ಮೋಸ ಹೋಗಬೇಡಿ ಎಂದು ಸ್ಪಷ್ಟನೆ ನೀಡಿ ಗ್ರಾಹಕರನ್ನು ಕೂಡ ಎಚ್ಚರಿಸಿದೆ.
advertisement