Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ತಿದ್ದುಪಡಿ ಹೆಸರು ಸೇರ್ಪಡೆ, ಈ ಕೇಂದ್ರಗಳಲ್ಲಿ ಪ್ರಕ್ರಿಯೆ ಆರಂಭ

advertisement

ಇಂದು ಪ್ರತಿಯೊಂದು ವ್ಯಕ್ತಿಗೂ ರೇಷನ್ ಕಾರ್ಡ್ ಅನ್ನೋದು ಅತೀ ಅಗತ್ಯವಾದ ದಾಖಲೆ ಯಾಗಿದ್ದು ಸರಕಾರದ ಯಾವುದೇ ಸೌಲಭ್ಯ ಸಿಗಬೇಕಾದರೂ ರೇಷನ್ ಕಾರ್ಡ್ (Ration Card) ಅತೀ ಅಗತ್ಯವಾಗಿ ಬೇಕಾಗಿದೆ.ಅದೇ ರೀತಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯಲು ರೇಷನ್ ಕಾರ್ಡ್ ಕಡ್ಡಾಯ ದಾಖಲೆಯಾಗಿದ್ದು ಇತರ ದಾಖಲೆಯಾದ ‌ ಆದಾಯ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಕಾರ್ಡ್‌ (PAN Card) ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಕೇಳಲಾಗುತ್ತದೆ.

WhatsApp Join Now
Telegram Join Now

ಹೊಸ ಕಾರ್ಡ್:

 

Image Source: DNA India

 

ಈಗಾಗಲೇ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಲವಾರು ಜನರು ಕಾದುಕುಳಿತಿದ್ದಾರೆ‌.ಇವರಿಗೆ ಆಹಾರ ಇಲಾಖೆಯು ಗುಡ್ ನ್ಯೂಸ್ ನೀಡಿದ್ದು ಈ ಬಗ್ಗೆ ಅಪ್ಡೇಟ್ ಮಾಹಿತಿ ಇಲ್ಲಿದೆ.ಇಂದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಕೂಡ ರೇಷನ್ ಕಾರ್ಡ್ (Ration Card) ಅಗತ್ಯವಾಗಿ ಬೇಕಾಗಿದೆ.ಸರಕಾರದಿಂದ ಅನೇಕ ಯೋಜನೆಗಳು ಇದ್ದರೂ ಕೂಡ ರೇಷನ್ ಕಾರ್ಡ್ ಇಲ್ಲದೆ ಕೆಲವರು ಈ ಸೌಲಭ್ಯ ಗಳಿಂದ ವಂಚಿತ ರಾಗಿದ್ದಾರೆ. ಹಾಗಾಗಿ ಅಗತ್ಯ ಇದ್ದವರು ಚೀಟಿ ತಿದ್ದುಪಡಿ ಮತ್ತು ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು ಇತರೆ ಪ್ರಕ್ರಿಯೆ ಗೆ ಕಾಯುತ್ತಿದ್ದು ಇದೀಗ ಅರ್ಜಿ ಸಲ್ಲಿಕೆಗೆ ಅವಕಾಶ ಸಿಕ್ಕಿದೆ

ತಿದ್ದುಪಡಿ ಯಾವಾಗ?

advertisement

ಇಂದು‌ ಹಲವು ಜನರಿಗೆ ಪಡಿತರ ಚೀಟಿ ತಿದ್ದುಪಡಿ (Ration Card Update) ಮಾಡಿಸಲು ಸಹ ಬಾಕಿ ಇದ್ದು 21-05-2024 ರಲ್ಲಿ ಕಾಲಾವಕಾಶ ‌ನೀಡಲಾಗಿತ್ತು. ಇನ್ನು ಚುನಾವಣೆಯ ಫಲಿತಾಂಶ ಬಂದ ನಂತರ ಮತ್ತೆ ತಿದ್ದುಪಡಿ ಮಾಡಲು ಮತ್ತು ಹೊಸದಾಗಿ ‌ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಇರಬಹುದು.

ಇಲ್ಲಿ‌ ತಿದ್ದುಪಡಿ ಮಾಡಿ:

ಖಾಸಗಿ ಸೈಬರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವುದನ್ನು ಬಿಟ್ಟು ಹತ್ತಿರದ ಗ್ರಾಮ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌, CSC ಕೇಂದ್ರ ಅಥವಾ ಇತರ ಆನ್‌ಲೈನ್‌ ಕೇಂದ್ರಗಳಿಗೆ ಭೇಟಿ ನೀಡಿ ಪಡಿತರ ಚೀಟಿ ತಿದ್ದುಪಡಿ ಕೂಡ ಮಾಡಿಸಬಹುದು.

ಈ ದಾಖಲೆ ಬೇಕು:

  • ವೋಟರ್ ಐಡಿ
  • ಆಧಾರ್ ಕಾರ್ಡ್
  • ವಯಸ್ಸಿನ ಪ್ರಮಾಣ ಪತ್ರ
  • ಡ್ರೈವಿಂಗ್ ಲೈಸೆನ್ಸ್
  • ಪೊಟೋ
  • ಮೊಬೈಲ್ ಸಂಖ್ಯೆ

ರಾಜ್ಯದ ನಾಗರೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ahara.kar.nic.in ಮೂಲಕ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.