Karnataka Times
Trending Stories, Viral News, Gossips & Everything in Kannada

Indian Railways: ರೈಲ್ವೆ ಪ್ರಯಾಣಿಕರಿಗೆ ಉಚಿತ ಆಹಾರ, ರೈಲ್ವೆ ಇಲಾಖೆಯ ಹೊಸ ನಿಯಮ ತಿಳಿಯಿರಿ!

advertisement

ಭಾರತೀಯ ರೈಲ್ವೆ (Indian Railways), ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿಕೊಡಲು ಮುಂದಾಗಿದೆ. ಪ್ರೀಮಿಯಂ ರೈಲುಗಳಲ್ಲಿ ಉಚಿತ ಊಟ (Free Food) ಹಾಗೂ ಪಾನೀಯಗಳು ಸಿಗಲಿದೆ ಇನ್ನು ಮುಂದೆ ಪ್ರಯಾಣಿಕರು ರೈಲಿನ ಪ್ರಯಾಣವನ್ನು ಇನ್ನಷ್ಟು ವಿಶೇಷವಾಗಿಸಿಕೊಳ್ಳಬಹುದು.

ಯಾವ ಟ್ರೈನ್ ನಲ್ಲಿ ಸಿಗಲಿದೆ ಉಚಿತ ಆಹಾರ:

ಎಲ್ಲರಿಗೂ ಗೊತ್ತಿರುವ ಹಾಗೆ ರೈಲಿನಲ್ಲಿ ಪ್ರಯಾಣಿಸುವಾಗ ಆಹಾರ ಉಚಿತವಾಗಿ ಸಿಗುವುದಿಲ್ಲ. ನೀವು ಟಿಕೆಟ್ (Ticket) ಖರೀದಿಸುವಾಗ ಆಹಾರ ಬೇಕು ಎಂದಿದ್ದರೆ ಟಿಕೆಟ್ ಖರೀದಿಸುವಾಗಲೇ ಅದನ್ನು ನಮೂದಿಸಿದರೆ ನಿಮ್ಮ ಪ್ರಯಾಣದ ಸಮಯದಲ್ಲಿ ಆಹಾರವನ್ನು ಪಡೆಯಬಹುದು. ಈಗ ಉಚಿತವಾಗಿಯೇ  ಊಟ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಹೌದು ಪ್ರೀಮಿಯಂ ರೈಲುಗಳಲ್ಲಿ (Premium Trains) ಉಚಿತ ಊಟ ಹಾಗೂ ಪಾನೀಯವನ್ನು (Free Food And Drink) ಪಡೆದುಕೊಳ್ಳಬಹುದು. ಹೊಸ ನಿಯಮವನ್ನು ಭಾರತೀಯ ರೈಲ್ವೆ (Indian Railways) ಘೋಷಿಸಿದ್ದು ಇನ್ನು ಮುಂದೆ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಈ ಉತ್ತಮ ಸೌಲಭ್ಯ ಲಭ್ಯವಾಗಲಿದೆ.

 

ರೈಲು ತಡವಾಗಿ ಬಂದರೆ ಸಿಗಲಿದೆ ಈ ಸೌಲಭ್ಯ:

advertisement

ಇನ್ನು ಯಾವ ಸಂದರ್ಭದಲ್ಲಿ ನಿಮಗೆ ಉಚಿತ ಆಹಾರ ಮತ್ತು ಪಾನಿಯ (Free Food and Drink) ನೀಡಲಾಗುತ್ತದೆ ಎಂದರೆ, ಪ್ರೀಮಿಯಂ ರೈಲುಗಳು (Premium Trains) ಎರಡು ಗಂಟೆಗಿಂತ ಹೆಚ್ಚು ಸಮಯ ತಡವಾಗಿ ಸ್ಟೇಷನ್ ತಲುಪಿದರೆ ಮಾತ್ರ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಎಷ್ಟೋ ಬಾರಿ ಅತಿಯಾದ ಮಂಜು ಅಥವಾ ರೈಲ್ವೆ ಹಳಿ ಸರಿಯಾಗಿ ಕಾಣದೇ ಇರುವ ಸಂದರ್ಭದಲ್ಲಿ ಅಥವಾ ರೈಲ್ವೆ ಹಳಿಗಳ ಕಾಮಗಾರಿ ಸಂದರ್ಭದಲ್ಲಿ ರೈಲು ಬರುವುದು ವಿಳಂಬವಾಗಬಹುದು. ಇದರಿಂದ ಪ್ರಯಾಣಿಕರು ಸಾಕಷ್ಟು ಸಮಯ ಸ್ಟೇಷನ್ ನಲ್ಲಿಯೇ ಕಾಯಬೇಕಾಗುತ್ತದೆ. ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ರೈಲ್ವೆ ಇಲಾಖೆ, ಈ ಉಚಿತ ಆಹಾರದ ಸೌಲಭ್ಯವನ್ನು ಒದಗಿಸುತ್ತಿದೆ.

ಪ್ರಯಾಣಿಕರು ಪ್ರಯಾಣಿಸುವ ರೈಲು ತಡವಾಗಿ ಬಂದರೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಈ ಮೂರನ್ನು ಒದಗಿಸಲಾಗುತ್ತದೆ. ಪ್ರಯಾಣಿಕರು ತಮಗೆ ಬೇಕಾದ ಸಮಯದ ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಮುಖ್ಯವಾದ ವಿಚಾರ ಅಂದರೆ ಇದರಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಎರಡು ಆಯ್ಕೆಗಳನ್ನು ನೀಡಲಾಗಿದ್ದು ಪ್ರಯಾಣಿಕರು ತಮಗೆ ಬೇಕಾದ ಆಹಾರವನ್ನು ಆಯ್ದುಕೊಳ್ಳಬಹುದು. ಸಾಕಷ್ಟು ಸಂದರ್ಭದಲ್ಲಿ ರೈಲು ತಡವಾಗಿ ಸ್ಟೇಷನ್ ತಲುಪುತ್ತವೆ. ಹೀಗಾಗಿ ಹಲವು ಪ್ರಯಾಣಿಕರಿಗೆ ಖಂಡಿತವಾಗಿಯೂ ಈ ಹೊಸ ಸೌಲಭ್ಯ ಹೆಚ್ಚು ಅನುಕೂಲವಾಗಬಹುದು.

ಯಾವ ರೈಲಿನಲ್ಲಿ ಸಿಗಲಿದೆ ಈ ಸೌಲಭ್ಯ?

ದೇಶದ ಪ್ರೀಮಿಯಂ ರೈಲುಗಳಾದ ಡುರಂಟೋ (Duronto), ರಾಜಧಾನಿ (Rajdhani), ಶತಾಬ್ದಿ ಎಕ್ಸ್ಪ್ರೆಸ್ (Shatabdi Express) ಮೊದಲಾದ ಪ್ರೀಮಿಯಂ ರೈಲುಗಳಲ್ಲಿ ಮಾತ್ರ ಲಭ್ಯವಿದ್ದು, ಈ ರೈಲುಗಳು ಎರಡು ಗಂಟೆಗಿಂತ ತಡವಾಗಿ ಸ್ಟೇಷನ್ ತಲುಪಿದರೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಆಹಾರ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಈ ಎಲ್ಲಾ ಪ್ರೀಮಿಯಂ ರೈಲುಗಳು ಕೂಡ ಸರಿಯಾದ ಸಮಯಕ್ಕೆ ಡೆಸ್ಟಿನೇಷನ್ ತಲುಪುತ್ತವೆ. ಆದಾಗ್ಯೂ ರೈಲು ತಡವಾಗಿ ಬಂದರೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಆಹಾರ ಸೌಲಭ್ಯ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

ಉಚಿತ ಆಹಾರ ವಿತರಣೆಗೆ ಅಡುಗೆಮನೆಯೂ ಸಿದ್ಧ:

ಇನ್ನು ಐ ಆರ್ ಸಿ ಟಿ ಸಿ (IRCTC) ಉಚಿತ ಆಹಾರ (Free Food) ಹಾಗೂ ಗುಣಮಟ್ಟದ ಆಹಾರ ನೀಡುವುದಕ್ಕಾಗಿ ರೈಲಿನಲ್ಲಿ ಆಹಾರ ತಯಾರಿಸಲು ಅಡುಗೆ ಮನೆಯನ್ನು ನವೀಕರಿಸಲು ಮುಂದಾಗಿದೆ. ರಾಜಧಾನಿ ಮತ್ತು ಡುರಂಟೋ ರೈಲಿನಲ್ಲಿ ಈಗಾಗಲೇ ಜೈವಿಕ ವಿಘಟನೆಯ ವಸ್ತುಗಳಿಂದ ಮಾಡಲಾದ ಆಹಾರ ಟ್ರೈ ಗಳು ಹಾಗೂ ಉತ್ತಮವಾಗಿರುವ ಪ್ಯಾಕ್ ಮಾಡಿರುವ ಉತ್ತಮ ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತಿದೆ. ವಲಯ ರೈಲ್ವೆಗಳು ಸಣ್ಣ ಆಹಾರ ಸ್ಟಾಲ್ ಗಳು, ಮಿಲ್ಕ್ ಸ್ಟಾಲ್, ಟ್ರಾಲಿಗಳು ಮೊದಲಾದ ಸಣ್ಣ ಪುಟ್ಟ ಮಳಿಗೆಗಳನ್ನು ನಿರ್ವಹಿಸುವಂತಹ ಕಿಚನ್ ಘಟಕಗಳನ್ನು ಹೊಂದಿರಬೇಕು.

ಒಟ್ಟಿನಲ್ಲಿ ನೀವು ಮುಂದಿನ ಬಾರಿ ಪ್ರೀಮಿಯಂ ಟ್ರೈನ್ ನಲ್ಲಿ ಪ್ರಯಾಣಿಸುವುದಾದರೆ ಈ ಹೊಸ ನಿಯಮವನ್ನು ನೆನಪಿಟ್ಟುಕೊಳ್ಳಿ. ಒಂದು ವೇಳೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ನೀವು ರೈಲ್ವೆ ಸ್ಟೇಷನ್ ನಲ್ಲಿ ರೈಲಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾದರೆ ನೀವು ಆನ್ಲೈನ್ ಮೂಲಕವೇ ಫುಡ್ ಆರ್ಡರ್ ಮಾಡಬಹುದು ಅದು ಉಚಿತವಾಗಿ!

advertisement

Leave A Reply

Your email address will not be published.