Karnataka Times
Trending Stories, Viral News, Gossips & Everything in Kannada

Mark Zuckerberg: ಫೇಸ್ಬುಕ್ ಸಿಇಒ ಜುಕರ್ ಬರ್ಗ್ ಬೆಳಗ್ಗೆ ಎದ್ದ ತಕ್ಷಣ ಫೋನ್ ನಲ್ಲಿ ಏನಂತ ಚೆಕ್ ಮಾಡ್ತಾರೆ ಗೊತ್ತಾ?

advertisement

ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್ (Facebook) ಇಂದು ದೈತ್ಯ ಆ್ಯಪ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಆಧುನಿಕ ತಂತ್ರಜ್ಞಾನ ಆವಿಷ್ಕಾರದ ಮೂಲಕ ಜನರಿಗೆ ಮನೋರಂಜನೆ ಮತ್ತು ಮಾಹಿತಿ ನೀಡುವ ವ್ಯವಸ್ಥೆಯಲ್ಲಿ ಫೇಸ್ ಬುಕ್ ಆ್ಯಪ್ ಅಗ್ರ ಸ್ಥಾನದಲ್ಲಿದೆ. ಮೇಟಾ ಕಂಪೆನಿಯ ಅಧೀನದಲ್ಲಿ ಫೇಸ್ ಬುಕ್ ಸ್ಮಾರ್ಟ್ ಕೌಶಲ್ಯ ಮೆರೆಸಿದ ಕೀರ್ತಿ ಮಾರ್ಕ್ ಜುಕರ್ ಬರ್ಗ್ (Mark Zuckerberg) ಅವರಿಗೆ ಸಲ್ಲುತ್ತದೆ. ಈ ಮೂಲಕ ಫೇಸ್ ಬುಕ್ ಕಂಪೆನಿ ಸಿಇಒ ಅವರು ಸಂದರ್ಶನ ವೊಂದರಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬಹುತೇಕರಿಗೆ ಹವ್ಯಾಸ ಇದ್ದೇ ಇರುತ್ತದೆ. ಹಿಂದೆಲ್ಲ ಸೂರ್ಯ ನಮಸ್ಕಾರ, ಕರಾಗ್ರೆ ವಸತೆ ಲಕ್ಷ್ಮೀ ಎಂದು ಆರಂಭ ಆಗುತ್ತಿದ್ದ ದಿನಚರಿ ಈಗ ಬದಲಾಗಿದೆ. ಈಗ ಏನಿದ್ದರೂ ವಾಟ್ಸ್ ಆ್ಯಪ್ (WhatsApp)ನಲ್ಲಿ ಏನಿದೆ? ಫೇಸ್ ಬುಕ್ ಅಪ್ಡೇಟ್ ಏನು ಬಂದಿದೆ? ಎಂದು ಹುಡುಕುವ ಪ್ರವೃತ್ತಿ ಬಂದಿದೆ. ಅದೇ ರೀತಿ ಫೇಸ್ ಬುಕ್ ಸಿಇಒ (CEO) ಜುಕರ್ ಬರ್ಗ್ ಅವರು ಕೂಡ ತಮ್ಮ ದೈನಿಕ ಆರಂಭದ ಬಗ್ಗೆ ತಿಳಿಸಿದ್ದ ಮಾಹಿತಿ ಸದ್ಯ ವೈರಲ್ ಆಗಿದೆ.

ಯಾವ ರೀತಿ ಇದೆ?

ಮಾರ್ಕ್ ಜುಕರ್ ಬರ್ಗ್ (Mark Zuckerberg) ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಆ ಪ್ರಕಾರ ಅವರ ದಿನ ಆರಂಭ ಆಗುವುದು ಮೊಬೈಲ್ ಮೂಲಕ ಎಂದು ತಿಳಿಸಿದ್ದಾರೆ. ಜಗತ್ತಿನ ಪ್ರಸ್ತುತ ಆಗು ಹೋಗುಗಳನ್ನು ಅವರು ಅರಿಯಲು ಫೇಸ್ಬುಕ್ ಅನ್ನು ಚೆಕ್ ಮಾಡುತ್ತಾರಂತೆ. ಎಂತಹ ಸಂಕಷ್ಟ ಬಂದರೂ ಸಂಪರ್ಕ ಸಿಗದೇ ಹೋದರೂ ಕೂಡ ಈ ಪ್ರಕ್ರಿಯೆ ಇಂದಿಗೂ ಮುಂದುವರಿಸುವುದಾಗಿ ಅವರು ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

advertisement

ಏನನ್ನು ನೋಡ್ತಾರೆ?

ಜುಕರ್ ಬರ್ಗ್ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ (Priscilla Chan) ಅವರು ತಮ್ಮ ಪತಿಯ ದೈನಿಕ ಹವ್ಯಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಹೆಚ್ಚಾಗಿ ದೈಹಿಕ ಚಟುವಟಿಕೆ, ವ್ಯಾಯಾಮ ಮಾರ್ಷಲ್ ಆರ್ಟ್ಸ್ ಬಗ್ಗೆ ಅವರಿಗೆ ನೋಡುವ ಹವ್ಯಾಸ ಇದೆ. ಹಾಡಿನ ಸಾಹಿತ್ಯ ಕಲಿಯುವುದು ಸಹ ಇವರ ಆಸಕ್ತಿ ಕ್ಷೇತ್ರವಾಗಿದೆ. ಅಷ್ಟು ಮಾತ್ರವಲ್ಲದೇ ಟೇಲರ್ ಸ್ವಿಫ್ಟ್ (Taylor Swift) ಜೊತೆ ಜುಕರ್ ಫ್ಯಾಮಿಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಪರೂಪ ಕ್ಷಣದ ಪೋಸ್ಟ್ ಅನ್ನು ಇನ್ಟ್ರಾಗ್ರಾಮ್ ನಲ್ಲಿ ಅವರು ಅಪ್ಲೋಡ್ ಮಾಡಿದ್ದಾರೆ.

ಕುಟುಂಬಕ್ಕೆ ವಿಶೇಷ ಸಮಯ ಮೀಸಲು

ತಮ್ಮ ಸಂಸ್ಥೆ ಕಾರ್ಯ ಚಟುವಟಿಕೆ ಜೊತೆಗೆ ಜುಕರ್ ಬರ್ಗ್ ಅವರು ಹೆಚ್ಚಿನ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಡುತ್ತಿದ್ದಾರೆ. ಮಕ್ಕಳಿಗೆ ಹ್ಯಾರಿಪಾಟರ್ ಬಗ್ಗೆ ಮಾಹಿತಿ ನೀಡುವುದು ವಿಶೇಷ ಶಿಕ್ಷಣದ ಬಗ್ಗೆ ತಿಳಿಸುವುದು ಮತ್ತು ಕೋಡಿಂಗ್ ಮಾಡುವ ಪ್ರಕ್ರಿಯೆ ತಿಳಿಸುವುದು ಅವರ ನಿತ್ಯ ಕಾಯಕವಾಗಿದೆ. ಬೆಳಗ್ಗೆ ತಮ್ಮ ಕಂಪೆನಿಯ ಕಾರ್ಯ ಚಟುವಟಿಕೆ ಬಗ್ಗೆ ಮೇಲ್ ಕಳುಹಿಸುವುದು ಮಾಹಿತಿ ಪಡೆಯುವುದು ಸಹ ದೈನಿಕ ಚಟುವಟಿಕೆ ಭಾಗವೇ ಆಗಿದೆ.

ಅಷ್ಟು ಮಾತ್ರವಲ್ಲದೇ ಆರೋಗ್ಯಯುತ ಜೀವನಕ್ಕೆ ಆರೋಗ್ಯ ಯುತ ಆಹಾರ ಸೇವನೆ ಕೂಡ ಇವರ ನಿತ್ಯ ಹವ್ಯಾಸವಾಗಿದೆ. ಈ ಮೂಲಕ ದೊಡ್ಡ ಕಂಪೆನಿಯ ಸಿಇಒ ಆಗಿದ್ದರೂ ದಿನನಿತ್ಯ ಸಾಮಾನ್ಯರಂತೆ ಜೀವಿಸಿ ಕುಟುಂಬಕ್ಕೆ ಅಧಿಕ ಪ್ರಾಮುಖ್ಯತೆ ನೀಡುವ ಇವರ ಜೀವನ ಶೈಲಿ ಬಹುತೇಕರಿಗೆ ಪ್ರೇರಣೆ ಇದ್ದಂತೆ.

advertisement

Leave A Reply

Your email address will not be published.