Karnataka Times
Trending Stories, Viral News, Gossips & Everything in Kannada

iPhone 12: 30,000 ರೂ.ಗಿಂತ ಕಡಿಮೆ ಬೆಲೆಗೆ iPhone 12 ಖರೀದಿ ಮಾಡಲು ಇಲ್ಲಿದೆ ಅವಕಾಶ!

advertisement

ಇಂದು ಮೊಬೈಲ್ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಬಹು ಮುಖ್ಯವಾದ ವಸ್ತುವಾಗಿ ಬಿಟ್ಟಿದೆ. ಯಾವುದೇ ಕೆಲಸವನ್ನು ನಾವು ಮೊಬೈಲ್ ಮೂಲಕ ಕೂತಲ್ಲೇ ಮಾಡುತ್ತಿದ್ದೇವೆ. ಅದರ ಜೊತೆ ಡಿಜಿಟಲಿಕರಣ ಕೂಡ ಅಭಿವೃದ್ಧಿ ಯಾಗಿದೆ. ಇಂದು ವಿವಿಧ ಕಂಪನಿಯ ಮೊಬೈಲ್ ಪೋನ್ ಗಳು ಮಾರುಕಟ್ಟೆ ಗೆ ಬಂದಿದ್ದು ಮಾರುಕಟ್ಟೆ ಯಲ್ಲಿ ಬೇಡಿಕೆ ಕೂಡ ಹೆಚ್ಚು ಮಾಡಿಕೊಂಡಿದೆ.

ಮೊಬೈಲ್ ಖರೀದಿ ಮಾಡಬೇಕು ಎಂದು ಅಂದು ಕೊಂಡಾಗ ಅದರ ಫೀಚರ್ , ವೈಶಿಷ್ಟ್ಯ, ಬೆಲೆ ಇತ್ಯಾದಿ ಎಲ್ಲವನ್ನು ಕೂಡ ಪರಿಗಣಿಸುತ್ತೇವೆ. ಇನ್ನು ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ ಅಂತ ಬಂದಾಗ ಐಫೋನ್‌ ಎಂದು ಹೇಳುತ್ತೇವೆ. ಐಪೋನ್ ಖರೀದಿ ಮಾಡುವುದು ಮೊಬೈಲ್ ಪ್ರೀಯರ ಕನಸು ಆಗಿರುತ್ತದೆ. ಪ್ರತಿ ವರ್ಷ ಆಪಲ್ ತನ್ನ ಹೊಸ ಐಫೋನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಐಪೋನ್ ಖರೀದಿ ಮಾಡೋರಿಗೆ ಸಿಹಿ ಸುದ್ದಿ ಇದ್ದು ಖರೀದಿ ಮಾಡಲು ಉತ್ತಮ ಅವಕಾಶ ಇದೆ.

ಐ ಪೋನ್ 12 (iPhone 12)

ಐಫೋನ್ 12 (iPhone 12) ಖರೀದಿ ಮಾಡಬೇಕು ಅನ್ನೋರಿಗೆ ಉತ್ತಮ ಅವಕಾಶ ಒಂದು ಇದೆ. ಇದೀಗ ಫ್ಲಿಪ್‌ಕಾರ್ಟ್ ಈ ಮಾದರಿಯ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡ್ತಾ ಇದ್ದು ಇದರ ಬೆಲೆ ರೂ 30,000 ಕ್ಕಿಂತ ಕಡಿಮೆಯಾಗಿದೆ. ಅಷ್ಟೆ ಅಲ್ಲದೆ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಕೂಡ ಉತ್ತಮ‌ ಅವಕಾಶ ಇದೆ.

ರಿಯಾಯಿತಿ ಇದೆ

advertisement

ಐಫೋನ್ 12 ವಿಶ್ವಾಸಾರ್ಹ ಸಾಧನವಾಗಿ ಗುರುತಿಸಿಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದೀಗ 17 ಪ್ರತಿಶತದಷ್ಟು ರಿಯಾಯಿತಿ ಇದ್ದು, ಇದರ ಬೆಲೆ 49,900 ಇದ್ದು ಈಗ ನೀವು ರೂ 40,999 ರೂಗೆ ಖರೀದಿ ಮಾಡಬಹುದಾಗಿದೆ.

ಈ ಮೊದಲು ಎಷ್ಟಿತ್ತು ಬೆಲೆ?

ಲಾಂಚ್ ಮಾಡಿದ ಸಂದರ್ಭದಲ್ಲಿ Apple iPhone 12 ಅನ್ನು 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಮಾಡೆಲ್‌ಗಳಲ್ಲಿ ಆ್ಯಪಲ್ ಐಫೋನ್‌ 12 ಕೂಡ ಒಂದಾಗಿದೆ.ಈ ಮೊಬೈಲ್ ನಲ್ಲಿ ಉತ್ತಮ ಪೀಚರ್, ವೈಶಿಷ್ಟ್ಯ ಇದ್ದು ಈಗಲೂ ಮೊಬೈಲ್ ಪ್ರೀಯರನ್ನು ಮತ್ತಷ್ಟು ಸೆಳೆಯುತ್ತಿದೆ.

ಮತ್ತಷ್ಟು ರಿಯಾಯಿತಿ

ಇನ್ನೂ ಗ್ರಾಹಕರು ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1000 ರೂ. ರಿಯಾಯಿತಿ ಪಡೆಯಬಹುದಾಗಿದ್ದು ಈ ಹಿನ್ನೆಲೆ ಸ್ಮಾರ್ಟ್‌ಫೋನ್‌ನ ಬೆಲೆಯನ್ನು 40,999 ರೂ.ಗೆ ಕಡಿಮೆಮಾಡಿದೆ.ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಫ್ಲಿಪ್‌ಕಾರ್ಟ್ 39,150 ರೂ . ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.ಒಟ್ಟಿನಲ್ಲಿ ಐ ಪೋನ್ ಖರೀದಿ ಮಾಡಲು ಉತ್ತಮ ಅವಕಾಶ ಇದೀಗ ಬಂದಿದೆ.

advertisement

Leave A Reply

Your email address will not be published.