Karnataka Times
Trending Stories, Viral News, Gossips & Everything in Kannada

Anna Bhagya Yojana: ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಬಂದಿಲ್ವಾ. ಹಾಗದರೇ ಈ‌ ಕೆಲಸ ತಕ್ಷಣ ಮಾಡಿ

advertisement

ಬಡವರ್ಗದ ಜನೆತೆಯ ಹಸಿವನ್ನು‌ ನೀಗಿಸಲು ಆಹಾರ ಇಲಾಖೆಯು ಆಹಾರ ಧಾನ್ಯಗಳನ್ನು‌ವಿತರಣೆ ಮಾಡುತ್ತಿದೆ‌. ಈಗಾಗಲೇ ಪಡಿತರ ದಾರರು ಉಚಿತ ರೇಷನ್ (Free Ration) ಅನ್ನು ಪಡೆಯುವ ಜೊತೆಗೆ ಕೆಲವು ಇತರ ಸೌಲಭ್ಯ ಗಳನ್ನು ಕೂಡ ಪಡೆಯುತ್ತಿದ್ದಾರೆ. ಉಚಿತ ರೇಷನ್ ಪಡೆಯಲು ರೇಷನ್ ಕಾರ್ಡ್ (Ration Card) ಬಹಳಷ್ಟು ಅಗತ್ಯವಾಗಿ ಬೇಕಾಗಿದೆ.‌ ಈಗಾಗಲೇ ಈ ಕಾರ್ಡ್ ಅನ್ನು ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದಾರೆ. ಅದೇ ರೀತಿ‌ ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ ಗೆ ಕೂಡ ಅರ್ಜಿ ಹಾಕಬಹುದಾಗಿದೆ.

WhatsApp Join Now
Telegram Join Now

ಅನ್ನಭಾಗ್ಯ ಹಣ:

 

Image Source: Gizbot Kannada

 

ಪಡಿತರ ಜೊತೆಗೆ ಸರಕಾರವು ಅನ್ನಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಖಾತೆಗೆ ಹಣವನ್ನು ಕೂಡ ವಿತರಣೆ ಮಾಡುತ್ತಿದೆ. ರಾಜ್ಯ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಉಚಿತ ಅಕ್ಕಿ ಒದಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಕ್ಕಿ ಕೊರತೆ ನಿವಾರಣೆ ಆದ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಉಚಿತ ಅಕ್ಕಿ ವಿತರಣೆ ಮಾಡಲಿದೆ.

ಹೌದು ಹೆಚ್ಚುವರಿ ಅಕ್ಕಿಯ ಬದಲಾಗಿ ಕುಟುಂಬ ಮುಖ್ಯಸ್ಥರ ಖಾತೆಗೆ ಒಂದು ಕೆಜಿ ಅಕ್ಕಿಗೆ 36 ರೂಪಾಯಿ ಅಂತೆ ತಲಾ ಐದು ಕೆಜಿ ಅಂತೆ ಕುಟುಂಬ ಸದಸ್ಯರ ಒಟ್ಟು ಹಣವು ಖಾತೆಗೆ ಜಮೆಯಾಗಲಿದೆ. ಈಗಾಗಲೇ ಖಾತೆಗೆ ಹಣ ಜಮೆ ಮಾಡುತ್ತಿದ್ದು ಹೆಚ್ಚಿನ ಜನರು ಈ ಸೌಲಭ್ಯ ವನ್ನು ಪಡೆದು ಕೊಳ್ಳುತ್ತಿದ್ದಾರೆ‌.

advertisement

ಮೇ ತಿಂಗಳ ಹಣ?

ಈಗಾಗಲೇ ಮೇ ತಿಂಗಳ ವರೆಗೆ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣವನ್ನು ಸರಕಾರ ಬಿಡುಗಡೆ ಮಾಡಿದ್ದು ಮೇ ತಿಂಗಳ ಹಣ ಕೆಲವು ಫಲಾನುಭವಿಗಳಿಗೆ ಇನ್ನು ಕೂಡ ಖಾತೆಗೆ ಬಂದಿಲ್ಲ. ಇದಕ್ಕಾಗಿ ಕೆಲವು ಕಾರಣ ಗಳಿದ್ದು ಏನು ಎಂಬುದನ್ನು‌ ತಿಳಿದುಕೊಳ್ಳಿ

ಯಾಕೆ ಹಣ ಬಂದಿಲ್ಲ?

ಅಕ್ಕಿ ಹಣವೂ ಖಾತೆಗೆ ಜಮೆಯಾಗದಿರಲು ಕಾರಣ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್ (Aadhaar Card) ಅಪ್ಡೇಟ್ ಆಗದೇ ಇರುವುದು ಕೂಡ ಕಾರಣವಾಗಿದ್ದು ನೀವು ಈ ಕೆಲಸ ಮೊದಲು ಮಾಡಬೇಕು. ಮತ್ತು ಪಡಿತರ ಚೀಟಿಯ ಈಕೆ ವೈಸಿ ಆಗದೆ ಇರುವುದು ಹಣ ಬಾರದೇ ಇರಲು ಮುಖ್ಯ ಕಾರಣ ವಾಗಿದೆ. ಹಾಗಾಗಿ ಮೊದಲು ಪಡಿತರ ಚೀಟಿ ಅಪ್ಡೇಟ್ ಮಾಡಿ. ಹೀಗೆ ಮಾಡಿದ್ದಲ್ಲಿ ಖಾತೆಗೆ ಹಣ ಜಮೆಯಾಗಲಿದೆ.

ಹಣ ಜಮೆ ಯಾಗಿದೇಯೇ ಎಂದು ತಿಳಿದು ಕೊಳ್ಳಲು ಕರ್ನಾಟಕ ಸರ್ಕಾರದ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

advertisement

Leave A Reply

Your email address will not be published.