Karnataka Times
Trending Stories, Viral News, Gossips & Everything in Kannada

AB de Villiers: ಅನುಮಾನದ ಸೂರ್ಯಕುಮಾರ್ ಕ್ಯಾಚ್ ಬಗ್ಗೆ ತನ್ನ ಅಂತಿಮ ಅಭಿಪ್ರಾಯ ತಿಳಿಸಿದ ಡಿ ವಿಲಿಯರ್ಸ್

advertisement

ಭಾರತ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೌತ್ ಆಫ್ರಿಕಾದ ವಿರುದ್ಧ ಕೊನೆಯ ಓವರ್ನಲ್ಲಿ ವಿರೋಚಿತವಾಗಿ ಟಿ 20 ವಿಶ್ವಕಪ್ ನ ಫೈನಲ್ ನಲ್ಲಿ ಗೆದ್ದು 17 ವರ್ಷಗಳ ನಂತರ ಟಿ 20 ವಿಶ್ವಕಪ್ (T20 World Cup) ಗೆದ್ದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

WhatsApp Join Now
Telegram Join Now

ಇನ್ನು ಈಗ ನಾವು ಮಾತನಾಡಲು ಹೊರಟಿರೋದು ಫೈನಲ್ ಪಂದ್ಯಾಟದಲ್ಲಿ ನಡೆದಿರುವಂತಹ ಒಂದು ಘಟನೆಯ ಬಗ್ಗೆ ಅದು ಕೂಡ ಈ ಬಗ್ಗೆ ಮಾತನಾಡುತ್ತಿರುವುದು ನಾವಲ್ಲ ಬದಲಾಗಿ ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವಂತಹ ಎಬಿ ಡಿವಿಲಿಯರ್ಸ್ (AB de Villiers) ರವರು.

ಸೂರ್ಯ ಕುಮಾರ್ ಯಾದವ್ ಕ್ಯಾಚ್ ಬಗ್ಗೆ ಎಬಿ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ?

 

Image Source: Update Bharat

 

ಒಂದು ಹಂತದಲ್ಲಿ ಫೈನಲ್ ಪಂದ್ಯವನ್ನ ಪ್ರಾರಂಭಿಕ ಸಮಯದಿಂದಲೂ ನೋಡಿಕೊಂಡು ಬಂದರೆ ಭಾರತ ಗೆಲ್ಲುವಂತಹ ಸಾಧ್ಯತೆ ಸಂಪೂರ್ಣವಾಗಿ ಕ್ಷೀಣವಾಗಿತ್ತು ಎಂದು ಹೇಳಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ಬೌಲಿಂಗ್ ಗೆ ಬಂದ ಬುಮ್ರಾ ಅವರ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ತಂಡ ಕೊನೆ ಕ್ಷಣದಲ್ಲಿ ಮತ್ತೆ ಪಂದ್ಯದಲ್ಲಿ ಕಂಬ್ಯಾಕ್ ಮಾಡೋದಕ್ಕೆ ಸಾಧ್ಯವಾಯಿತು ಎಂದು ಹೇಳಬಹುದಾಗಿದೆ. ಅದಾದ ನಂತರ ಬೌಲಿಂಗ್ ಮಾಡಿದ ಅರ್ಶದೀಪ್ ಸಿಂಗ್ (Arshdeep Singh) ತಂಡಕ್ಕೆ ಇನ್ನಷ್ಟು ಬಲವಾದಂತಹ ಬುನಾದಿಯನ್ನ ಗೆಲುವಿಗೆ ಹಾಕಿ ಕೊಟ್ಟರು ಅಂತ ಹೇಳಬಹುದು.

 

advertisement

 

View this post on Instagram

 

A post shared by ICC (@icc)

 

ಆದರೆ ಎಲ್ಲಾ ನಿರ್ದಾರಿತವಾಗಿದ್ದು ಹಾರ್ದಿಕ್ ಪಾಂಡ್ಯ (Hardik Pandya) ಅವರು ಎಸೆದಂತಹ ಕೊನೆಯ ಓವರ್ ನಲ್ಲಿ ಎಂದು ಹೇಳಬಹುದಾಗಿದೆ ಯಾಕೆಂದರೆ ಸ್ಟ್ರೈಕ್ನಲ್ಲಿ ಇದ್ದಿದ್ದು ಡೇವಿಡ್ ಮಿಲ್ಲರ್ (David Miller) ಹಾಗೂ ಹಾರ್ದಿಕ್ ಪಾಂಡ್ಯ ಅವರು ಸ್ಪೆಷಲಿಸ್ಟ್ ಬೌಲರ್ ಕೂಡ ಆಗಿರಲಿಲ್ಲ ಹಾಗಿದ್ರೂ ಕೂಡ ಒಬ್ಬ ಪರ್ಫೆಕ್ಟ್ ಆಲ್-ರೌಂಡರ್ ಆಗಿ ಈ ಸಂದರ್ಭದಲ್ಲಿ ಮಾಡಬೇಕಾಗಿರುವಂತಹ ಕೆಲಸವನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಮಾಡಿಕೊಟ್ಟರು ಎಂದು ಹೇಳಬಹುದಾಗಿದೆ.

ಆದರೆ ಅದಕ್ಕಿಂತಲೂ ವಿಶೇಷವಾಗಿ ಅವರು ಎಸೆದಂತಹ ಮೊದಲ ಎಸೆದಲ್ಲಿ ಸೂರ್ಯ ಕುಮಾರ್ ಯಾದವ್ (Suryakumar Yadav) ರವರು ಡೇವಿಡ್ ಮಿಲ್ಲರ್ (David Miller) ಅವರ ಕ್ಯಾಚ್ ಅನ್ನು ಬೌಂಡರಿ ಗೆರೆಯಲ್ಲಿ ಜಂಪ್ ಮಾಡಿ ಹಿಡಿದಿದ್ದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಅನ್ನು ಕ್ಯಾಚ್ ಮಾಡುವ ಹಾಗೆ ಮಾಡಿತು. ಆದರೆ ಇದರ ವಿಚಾರವಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಈಗಾಗಲೇ ನಡೆಯುತ್ತಿದ್ದು, ಬೌಂಡರಿ ಗೆರೆಯನ್ನು ಹಿಂದೆ ಸರಿಸಿದ ಕಾರಣಕ್ಕಾಗಿ ಈ ರೀತಿ ಆಯ್ತು ಎಂಬುದಾಗಿ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ.

 

Image Source: Deccan Chronicle

 

ಈ ಬಗ್ಗೆ ಸ್ಟೇಟಮೆಂಟ ನೀಡುವಂತಹ ಕೆಲಸವನ್ನು ಮಾಡಿರುವಂತಹ ಎಬಿಡಿ ವಿಲಿಯರ್ಸ್ (AB de Villiers) ರವರು ಇದಕ್ಕಿಂತಲೂ ಮುಂಚೆ ಮೊದಲನೇ ಇನ್ನಿಂಗ್ಸ್ ನಲ್ಲಿ ಸೌತ್ ಆಫ್ರಿಕಾ ಬೌಲರ್ ಆಗಿರುವಂತಹ ನೋಕಿಯಾ ಬೌಂಡ್ರಿ ಲೈನ್ ನಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಸ್ಲೈಡ್ ಮಾಡಿದ ಕಾರಣದಿಂದಾಗಿಯೇ ಅದು ಗೆರೆಗಿಂತ ಹಿಂದೆ ಹೋಯಿತು ಅನ್ನೋದಾಗಿ ಹೇಳಿದ್ದು ಭಾರತದ ಆಟದ ಬಗ್ಗೆ ಯಾವುದೇ ಪ್ರಶ್ನೆ ಎತ್ತುವ ಅಗತ್ಯವಿಲ್ಲ, ಭಾರತ ಇಲ್ಲಿ ಕ್ವಾಲಿಟಿ ಆಟವನ್ನು ಆಡಿದೆ ಅದೇ ಕಾರಣಕ್ಕಾಗಿ ವಿಶ್ವಕಪ್ ಗೆದ್ದಿದೆ ಎಂಬುದಾಗಿ ಭಾರತದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

advertisement

Leave A Reply

Your email address will not be published.