Karnataka Times
Trending Stories, Viral News, Gossips & Everything in Kannada

Ind vs Pak T20: ಪಾಕಿಸ್ತಾನದೆದುರು ಇಂದು ಸಿಡಿದೇಳಲಿದ್ದಾರೆ ಈ ಇಬ್ಬರು ಆಟಗಾರರು! ಬಾಬರ್ ಗೆ ಆತಂಕ ಶುರು

advertisement

India vs Pakistan live, T20 World Cup 2024: ಸ್ನೇಹಿತರೆ ಕೊನೆಗೂ ಆ ಗಳಿಗೆ ಬಂದೆ ಬಿಟ್ಟಿದೆ. ಹೌದು ಕ್ರಿಕೆಟ್ ಇತಿಹಾಸದಲ್ಲಿ ಸಾಂಪ್ರದಾಯಿಕ ಎದುರಾಳಿಗಳೆಂಬುದಾಗಿ ಕರೆಸಿಕೊಳ್ಳುವಂತಹ ಪಾಕಿಸ್ತಾನ ಹಾಗೂ ಭಾರತ ದೇಶಗಳ ನಡುವಿನ ಕ್ರಿಕೆಟ್ ಪಂದ್ಯಾಟ ಇಂದು ನಡೆಯಲಿದೆ. ವಿಶ್ವಕಪ್ ನಲ್ಲಿ ಭಾರತ ಯಾವತ್ತೂ ಕೂಡ ಪಾಕಿಸ್ತಾನ ಕ್ರಿಕೆಟ್ ತಂಡದ ಎದುರು ಸೋತಿರಲಿಲ್ಲ ಆದರೆ 2022 ರಲ್ಲಿ ನಡೆದಿರುವಂತಹ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧವಾಗಿ ಭಾರತೀಯ ಕ್ರಿಕೆಟ್ ತಂಡ ಸೋತು ಹೋಗಿತ್ತು.

WhatsApp Join Now
Telegram Join Now

ಈ ಮೂಲಕ ಸಾಕಷ್ಟು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ರೆಕಾರ್ಡ್ ಅನ್ನು ಭಾರತೀಯ ಕ್ರಿಕೆಟ್ ತಂಡ ಕಳೆದುಕೊಂಡಿತು ಎಂದು ಹೇಳಬಹುದಾಗಿದೆ. ಆದರೆ ಅದಾದ ನಂತರ ನಡೆದಿರುವಂತಹ ಏಷ್ಯಾ ಕಪ್ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಮತ್ತೆ ಟೀಮ್ ಇಂಡಿಯಾ ಅಧಿಕಾರಯುತವಾದ ಕಮ್ ಬ್ಯಾಕ್ ಮಾಡಿದೆ ಎಂದು ಹೇಳಬಹುದಾಗಿದೆ.

ಇನ್ನು, ಇವತ್ತು ನಡೆಯುವಂತಹ ಟಿ ಟ್ವೆಂಟಿ ವಿಶ್ವಕಪ್ ನ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕೇವಲ ಎರಡು ದೇಶಗಳ ಅಭಿಮಾನಿಗಳಿಗೆ ಮಾತ್ರವಲ್ಲದೆ ಅಮೆರಿಕದಲ್ಲಿ ಈ ಬಾರಿ ಮೊದಲ ಬಾರಿಗೆ ಕಾಣಿಸಿಕೊಂಡಿರುವಂತಹ ಕ್ರಿಕೆಟ್ ವಿಶ್ವಕಪ್ ಗೆ ಇನ್ನಷ್ಟು ಹೆಚ್ಚಿನ ಜನಪ್ರಿಯತೆ ಹಾಗೂ ಹೆಚ್ಚಿನ ಅಮೆರಿಕನ್ ಜನರಲ್ಲಿ ಕ್ರಿಕೆಟ್ ಬಗ್ಗೆ ಜ್ಞಾನ ಮೂಡಿಸುವುದಕ್ಕೆ ಇದು ಸಹಾಯಕವಾಗುತ್ತದೆ ಎಂದು ಹೇಳಬಹುದು. ಕ್ರಿಕೆಟ್ ಅಮೆರಿಕದಲ್ಲಿ ಬೆಳೆದರೆ ಖಂಡಿತವಾಗಿ ಯುರೋಪ್ ದೇಶಗಳಲ್ಲಿ ಕೂಡ ಇದು ಇನ್ನಷ್ಟು ಹೆಚ್ಚಿನ ಪ್ರಭಾವವನ್ನು ಬೀರುತ್ತದೆ ಎಂದು ಹೇಳಬಹುದಾಗಿದೆ.

Image Source: Business Recorder

advertisement

ಅವೆಲ್ಲದಕ್ಕಿಂತ ಮಿಗಿಲಾಗಿ ಈ ಬಾರಿ ಕೂಡ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡ ಗೆಲುವನ್ನು ಸಾಧಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಈ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಮತ್ತೊಂದು ವಿಶ್ವ ಕಪ್ ನಲ್ಲಿ ಕಾಣಿಸಿಕೊಳ್ಳುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಹೀಗಾಗಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ನೆಲದಲ್ಲಿ ನಡೆಯುತ್ತಿರುವಂತಹ ಈ ವಿಶ್ವಕಪ್ ಅನ್ನು ಗೆಲ್ಲುವುದು ಟೀಮ್ ಇಂಡಿಯಾಗೆ ಸಾಕಷ್ಟು ರೀತಿಯಲ್ಲಿ ಪ್ರಮುಖವಾಗಿದೆ. ಇನ್ನು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಈ ಇಬ್ಬರು ಭಾರತೀಯ ಆಟಗಾರರು ಮಿಂಚಿದರೆ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಗೆಲುವನ್ನು ಸಾಧಿಸಬಹುದಾಗಿದೆ ಎಂದು ಹೇಳಬಹುದು. ಹಾಗಿದ್ದರೆ ಆಟಗಾರರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ.

ಈ ಇಬ್ಬರು ಆಟಗಾರರು ಪಾಕಿಸ್ತಾನದ ಸೋಲಿಗೆ ಕಾರಣವಾಗುತ್ತಾರೆ!

ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಪಾಕಿಸ್ತಾನದ ವಿರುದ್ಧ ಪ್ರತಿಯೊಂದು ಪಂದ್ಯದಲ್ಲಿ ಕೂಡ ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸುವಂತಹ ಆಟಗಾರ ಅಂದ್ರೆ ಅದು ಯಾವುದೇ ಅನುಮಾನವಿಲ್ಲದೆ ವಿರಾಟ್ ಕೊಹ್ಲಿ ಎಂದು ಹೇಳಬಹುದಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ತಂಡದ ವಿರುದ್ಧ ಖಂಡಿತವಾಗಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರ್ಪಡಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅವರು ಬ್ಯಾಟಿಂಗ್ ವಿಭಾಗದಲ್ಲಿ ಆರ್ಭಟಿಸಿದ್ರೆ ಭಾರತೀಯ ಕ್ರಿಕೆಟ್ ತಂಡ ಸುಲಭವಾಗಿ ಪಾಕಿಸ್ತಾನ ತಂಡದ ವಿರುದ್ಧ ಗೆಲುವನ್ನು ದಾಖಲಿಸಬಹುದಾಗಿದೆ.

ಇನ್ನೊಂದು ಕಡೆಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಸಾಕಷ್ಟು ಸಮಯಗಳ ನಂತರ ಟಿ ಟ್ವೆಂಟಿ ವಿಶ್ವ ಕಪ್ ಗೆ ಕಮ್ ಬ್ಯಾಕ್ ಮಾಡುತ್ತಿದ್ದು ಖಂಡಿತವಾಗಿ ಈ ಬಾರಿ ಅವರು ಪಾಕಿಸ್ತಾನ ತಂಡದ ವಿರುದ್ಧ ತಮ್ಮ ಅತ್ಯಂತ ಬೆಸ್ಟ್ ಬೌಲಿಂಗ್ ಪ್ರದರ್ಶನವನ್ನು ತೋರ್ಪಡಿಸಬಹುದೆಂಬುದಾಗಿ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಭೂಮ್ರ ಖಂಡಿತವಾಗಿ ಮ್ಯಾಚ್ ವಿನ್ನರ್ ಪರ್ಫಾರ್ಮೆನ್ಸ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಅಂದಾಜು ಹಾಕಲಾಗಿದೆ.

advertisement

Leave A Reply

Your email address will not be published.