Karnataka Times
Trending Stories, Viral News, Gossips & Everything in Kannada

Smartphone: ಐ ಫೋನ್ ಗೆ ಟಕ್ಕರ್ ಕೊಡುವಂತಹ ಸ್ಮಾರ್ಟ್ ಫೋನ್ ಖರೀದಿಸಿ ಕೇವಲ 6,999 ರೂಪಾಯಿಗೆ!

advertisement

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (Smartphone) ಗಳ ಮಾರಾಟ ಜಾಸ್ತಿ ಆಗುತ್ತಿದೆ. ಅದರಲ್ಲೂ ಸಾಕಷ್ಟು ವಿಶೇಷವಾದ ಫೀಚರ್ಸ್ ಗಳನ್ನು ಹೊಂದಿರುವಂತಹ ಸ್ಮಾರ್ಟ್ ಫೋನ್ ಗಳು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ ಎಂದುಕೊಂಡಿರುವವರಿಗೆ ಇಂತಹ ಫೋನ್ಗಳು ಅತ್ಯುತ್ತಮ ಸ್ಪರ್ಧೆ ನೀಡಲಿದೆ. ಇನ್ನೇನು ಒಂದು ತಿಂಗಳಲ್ಲಿ 2024 ಅಂದ್ರೆ ಹೊಸ ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು ಈ ಫೋನ್ ಗಳ ಬೆಲೆ ಕೂಡ ಕಡಿಮೆ.

ಟೆಕ್ನೋ ಸ್ಪಾರ್ಕ್ ಗೋ 2024

ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಟೆಕ್ನೋ ಸ್ಪಾರ್ಕ್ ಗೋ 2024 (Tecno Spark Go 2024) ಫೋನ್ ಅತಿ ಅಗ್ಗದ ಬೆಲೆಗೆ ಲಭ್ಯವಿದೆ. ಅಮೆಜಾನ್, ಫ್ಲಿಪ್ಕಾರ್ಟ್ ಮಾತ್ರವಲ್ಲದೆ ಮೊಬೈಲ್ ಶಾಪ್ ಗಳಲ್ಲಿಯೂ ಕೂಡ ಈ ಫೋನ್ ಖರೀದಿಸಬಹುದು.

ಟೆಕ್ನೋ ಸ್ಪಾರ್ಕ್ ಗೋ 2024 ಫೋನ್ ನ ವೈಶಿಷ್ಟ್ಯತೆ!

ಟೆಕ್ನೋ ಸ್ಪಾರ್ಕ್ ಗೋ 2024 ಫೋನ್ ಅತಿ ಕಡಿಮೆ ಬೆಲೆಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್ ಫೋನ್ ಬಗ್ಗೆ ಹೇಳುವುದಾದರೆ 6.56 ಇಂಚಿನ HD+IPS ಡಿಸ್ಪ್ಲೇ ಯೊಂದಿಗೆ ಬರುತ್ತದೆ 720 *8,612 ಪಿಕ್ಸೆಲ್ ಗಳನ್ನು ಹೊಂದಿರುವ ಫೋನ್ ಇದಾಗಿದೆ. ಜೊತೆಗೆ 90Hz ರಿ ಫ್ರೆಶ್ ದರದೊಂದಿಗೆ ಅಕ್ವಾ ಕೋರ್ (AquaCore) ಯುನಿಸಾಕ್ T 606 (UNISOC T606) ಚಿಪ್ ಸೆಟ್ ನೊಂದಿಗೆ ಬರುತ್ತದೆ, ಆಂಡ್ರಾಯ್ಡ್ 13 ಅನ್ನು ಬೆಂಬಲಿಸುವ ಫೋನ್ ಇದಾಗಿದ್ದು ಉತ್ತಮ ಕಾರ್ಯಕ್ಷಮತೆ ಹೊಂದಿದೆ.

advertisement

ಟೆಕ್ನೋ ಸ್ಪಾರ್ಕ್ ಗೋ 2024 – ಕ್ಯಾಮೆರಾ

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಮೊಬೈಲ್ ಖರೀದಿ ಮಾಡುವುದಕ್ಕೂ ಮೊದಲು ಕ್ಯಾಮೆರಾ ಕ್ವಾಲಿಟಿ ಹೇಗಿದೆ ಎಂಬುದನ್ನು ನೋಡುತ್ತಾರೆ. ಅದೇ ರೀತಿ ಈ ಟೆಕ್ನೋ ಸ್ಪಾರ್ಕ್ ಕೂಡ ಅತಿ ಉತ್ತಮ ಕ್ಯಾಮೆರಾ ಕ್ಲಾರಿಟಿ ಹೊಂದಿದೆ. ಡುಯಲ್ ಕ್ಯಾಮೆರ ಸೆಟಪ್ ನೀಡಲಾಗಿದ್ದು 13MP ಪ್ರೈಮರಿ ಕ್ಯಾಮೆರಾ, ಡುಯಲ್ ಫ್ಲಾಶ್ ಜೊತೆಗೆ AI ಲೆನ್ಸ್ ಕೊಡಲಾಗಿದೆ. ಅದೇ ರೀತಿ ವಿಡಿಯೋ ಕರೆ ಹಾಗೂ ಸೆಲ್ಫಿಗಾಗಿ 8MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ.

ಇನ್ನು ಈ ಫೋನಿನ ಬ್ಯಾಟರಿ ಬಗ್ಗೆ ಮಾತನಾಡುವುದಾದರೆ 5000mah ಬ್ಯಾಟರಿ ಕೊಡಲಾಗಿದೆ. ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು ಬಹಳ ಬೇಗ ಚಾರ್ಜ್ ಆಗುವ ಕೆಪ್ಯಾಸಿಟಿ ಕೂಡ ಹೊಂದಿದೆ. ಐಫೋನ್ ನ ಡೈನಮಿಕ್ ಐಲ್ಯಾಂಡ್ ವೈಶಿಷ್ಟ್ಯತೆಯಂತೆಯೇ ಈ ಫೋನ್ ನಲ್ಲಿ ಕೂಡ ಟೆಕ್ನೋ ಡೈನಮಿಕ್ ಪೋರ್ಟ್ ಬಳಸಲಾಗಿದೆ.

ಟೆಕ್ನೋ ಸ್ಪಾರ್ಕ್ ಗೋ 2024 3GB RAM ಹಾಗೂ 64 GB ಇಂಟರ್ನಲ್ ಮೆಮೊರಿ ಹೊಂದಿದೆ. ಅದೇ ರೀತಿ ಟೆಕ್ನೋ ಸ್ಪಾರ್ಕ್ ಗೋ 2024 ನಲ್ಲಿ ಇನ್ನು ಎರಡು ರೂಪಾಂತರಗಳನ್ನು ಕೊಡಲಾಗಿದೆ. 8GB RAM+ 64GB ಮತ್ತು 8GB RAM+ 124 GB. ಈ ಎರಡು ರೂಪಾಂತರಗಳ ಬೆಲೆ ಬಹಿರಂಗ ಆಗದೇ ಇದ್ದರೂ ಟೆಕ್ನೋ ಸ್ಪಾರ್ಕ್ ಗೋ 2024 ಫೋನಿನ ಆರಂಭಿಕ ಬೆಲೆ 6,999 ರೂಪಾಯಿಗಳು. ಈ ಫೋನ್ ಅನ್ನು ಫ್ಲಿಪ್ಕಾರ್ಟ್ ಈ – ಕಾಮರ್ಸ್ ಪ್ಲ್ಯಾಟ್ ಫಾರ್ಮ್ ನಲ್ಲಿ ಖರೀದಿಸಬಹುದು, ಕೈಗೆಟ್ಟುವ ಬೆಲೆಯಲ್ಲಿ ಫೋನ್ ಲಭ್ಯವಾಗುವುದು ಮಾತ್ರವಲ್ಲದೆ ಇದಕ್ಕೆ ಇನ್ನಷ್ಟು ಬ್ಯಾಂಕ್ ಆಫರ್ ಗಳು ಕೂಡ ಸಿಗುತ್ತವೆ. ಹಾಗಾಗಿ ತಕ್ಷಣವೇ ನಿಮ್ಮ ಹೊಸ ಫೋನ್ ಬುಕ್ ಮಾಡಿಕೊಳ್ಳಿ.

advertisement

Leave A Reply

Your email address will not be published.