Karnataka Times
Trending Stories, Viral News, Gossips & Everything in Kannada

7th Pay Commission: 7ನೇ ವೇತನ ಆಯೋಗದ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಸಿದ್ದರಾಮಯ್ಯ!

advertisement

ಬಹಳ ಹಿಂದಿನಿಂದಲೂ ಕೂಡ ಏಳನೇ ವೇತನ ಆಯೋಗದ ಬಗ್ಗೆ ಪರಿಷ್ಕರಣೆ ಆಗುತ್ತಲೇ ಇದೆ. ಸರಕಾರಿ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಈ ಒಂದು ನಿರ್ಣಯದ ಬಗ್ಗೆ ಕೆಲವೊಂದು ಸ್ಪಷ್ಟ ತೀರ್ಮಾನಗಳು ಇದೀಗ ಸಿಕ್ಕಿದೆ ಎಂದು ಹೇಳಬಹುದು. ಬೆಳಗಾವಿಯಲ್ಲಿ ಇದೀಗ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಸರಕಾರಿ ನೌಕರರಿಗೆ ಏಳನೆ ವೇತನ ಆಯೋಗದ (7th Pay Commission) ವಿಚಾರ ಮತ್ತೆ ಈಗ ಚರ್ಚಿತ ವಿಷಯವಾಗುತ್ತಿದೆ.

ಅಧಿವೇಶನದಲ್ಲಿ ಚರ್ಚೆ

ಬೆಳಗಾವಿಯ ಅಧಿವೇಶನದಲ್ಲಿ ಇದೀಗ ಮತ್ತೆ ಏಳನೇ ವೇತನ ಆಯೋಗ ಸುದ್ದಿಯಾಗುತ್ತಿದೆ. ಸರಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ  ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದ್ದಾರೆ. ಈಗ ಇದೇ ವಿಚಾರ ಮತ್ತೆ ಸಿಎಂ ಮುಂದೆ ಬಂದಿದೆ. ಐಹೊಳೆ ಶಾಸಕ ದುರ್ಯೋದನ ಅವರು ವೇತನ ಆಯೋಗದ ಬಗ್ಗೆ ವಿಧಾನಸಭೆಯಲ್ಲಿ ಸಿಎಂ ಅವರಿಗೆ ಪ್ರಶ್ನಿಸಿದ್ದಾರೆ.

ಸಿಎಂ ಗೆ ಪ್ರಶ್ನೆ?

advertisement

ಅವರು ಪ್ರಶ್ನೆ ಮಾಡಿದ್ದಾಗ ರಾಜ್ಯದ ಏಳನೆ ವೇತನ ಆಯೋಗವನ್ನು ಯಾವಾಗ ಜಾರಿಗೆ ಮಾಡ್ತೀರಿ? ಇದನ್ನು ಜಾರಿ ಮಾಡಲು ಸರಕಾರಕ್ಕೆ ತೊಂದರೆ ಇದೆಯೇ? ಸರಕಾರಿ ನೌಕರರಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಸರಕಾರ ಏನು ಮಾಡಿದೆ ಎಂದು ಅನೇಕ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸೂಕ್ತ ಉತ್ತರ ನೀಡುತ್ತಿದ್ದಾರೆ.

ಈ ಬಗ್ಗೆ ಉತ್ತರಿಸಿದ್ದ ಸಿಎಂ ಸಿದ್ದರಾಮಯ್ಯ ಅವರು 2022 ನವೆಂಬರ್ 9 ರಂದು ತ್ರಿಸದಸ್ಯ ಪೀಠವು 7ನೇ ರಾಜ್ಯ ವೇತನ ಆಯೋಗ ರಚಿಸಲು ಆದೇಶವನ್ನು ಆಗಲೇ ನೀಡಲಾಗಿತ್ತು. ಬಳಿಕ ಈ ವರ್ಷದಂದು 2023ನೇ ನವೆಂಬರ್ 6ಕ್ಕೆ ಈ ಆದೇಶದ ಕಾಲಾವಧಿ ವಿಸ್ತರಿಸಲಾಗಿದೆ. ಹಾಗಾಗಿ ರಾಜ್ಯ ಸರಕಾರವು ವೇತನ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ರಾಜ್ಯದ ಏಳನೇ ವೇತನ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ರಾಜ್ಯಪಾಲರ ಆದೇಶದಂತೆ ಸರಕಾರದ ಜಂಟಿ ಕಾರ್ಯದರ್ಶಿ ಅವರು ಆರ್ಥಿಕ ಇಲಾಖೆಗೆ ಕೆಲ ಅಗತ್ಯ ದಾಖಲಾತಿ ನೀಡಿದ್ದಾರೆ. ಈ ಹಿಂದೆ ಇದ್ದ ಸರಕಾರದಲ್ಲಿ ಕೂಡ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ ಆದರೆ ನಮ್ಮ ಅವಧಿಯಲ್ಲಿ ಹಾಗಾಗಲಾರದು ಈ ಬಾರಿ ಏಳನೇ ವೇತನ ಆಯೋಗದ ಬಗ್ಗೆ ರಾಜ್ಯ ಸರಕಾರ ಮೊದಲು ವರದಿ ಸ್ವೀಕಾರ ಮಾಡಲಿದೆ‌. ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ ನಲ್ಲಿ ವಿಸ್ತರಣೆ ಮಾಡಲಾಗುವುದು. ಹಾಗಾಗಿ ಮುಂದಿನ ಬಜೆಟ್ ನಲ್ಲಿ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಬಜೆಟ್ ನಲ್ಲಿ ಹಣ ತೆಗೆದಿಡಲಾಗುವುದು.

ಒಟ್ಟಾರೆಯಾಗಿ ಈ ಒಂದು 7ನೇ ವೇತನ ಆಯೋಗ ಜಾರಿಯಾದರೆ ಆಗ ರಾಜ್ಯ ಸರಕಾರಕ್ಕೆ ಶಿಫಾರಸ್ಸಿನ ಅನ್ವಯ ಹೆಚ್ಚುವರಿ 8ಸಾವಿರ ಕೋಟಿ ಹೆಚ್ಚುವರಿ ಹೊರೆ ಆಗಲಿದೆ. ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಅವರ ಪ್ರಕಾರ ಸದಸ್ಯರ ನಿಯೋಗ ಈ ಬಗ್ಗೆ ಅಂದಾಜು ಲೆಕ್ಕಾಚಾರ ಪಟ್ಟಿಯನ್ನು ಸಿಎಂ ಗೆ ಸಲ್ಲಿಸಲಾಗಿದೆ ಮುಂದಿನ ದಿನದಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರೋದು ಪಕ್ಕ ಎನ್ನಬಹುದು.

advertisement

Leave A Reply

Your email address will not be published.