Karnataka Times
Trending Stories, Viral News, Gossips & Everything in Kannada

Tata Electric Car: ಟಾಟಾ ಕಂಪನಿಯ‌ ಹೊಸ ಎಲೆಕ್ಟ್ರಿಕ್ ಕಾರು, ಕಡಿಮೆ ಬೆಲೆ ಹಾಗೂ 500Km ರೇಂಜ್!

advertisement

ಇಂದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿದೆ. ಎಲ್ಲಿ ನೋಡಿದ್ರೂ ಎಲೆಕ್ಟ್ರಿಕ್ ವಾಹನಗಳ ಓಡಾಟ ಹೆಚ್ಚಳ ವಾಗಿದೆ. ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದು, ಅದಕ್ಕೆ ಪರ್ಯಾಯ ಎಂಬಂತೆ ಇದೀಗ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ದಿನಕ್ಕೊಂದು ಮಾಡೆಲ್ ನ ವಾಹನಗಳು ಗ್ರಾಹಕರನ್ನು ಸೆಳೆಯುತ್ತಿದ್ದು ಇದೀಗ ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಗೆ ಬರಲಿದೆ.

ಹೊಸ ರೂಪಾಂತರ ಬಿಡುಗಡೆ

ಟಾಟಾ ಮೋಟಾರ್ಸ್ ಇದೀಗ ಮತ್ತಷ್ಟು ಉತ್ಪಾದನೆಯನ್ನು ಹೆಚ್ಚು ಮಾಡಿದ್ದು ಹೊಸ ರೂಪಾಂತರ ವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಟಾಟಾ ಮೋಟಾರ್ಸ್ ನ ಈ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡುವ ವಾಹನ ಪ್ರೀಯರಿಗೆ ಕ್ಯುರಾಸಿಟಿ ಹೆಚ್ಚಾಗಿದೆ.

2024 ರಲ್ಲಿ ಮಾರುಕಟ್ಟೆಗೆ ಬರಲಿದೆ

Tata Curvv EV ಕಾರು ವಾಹನ‌ ಪ್ರೀಯರನ್ನು ಬಹಳಷ್ಟು ಸೆಳೆಯುತ್ತಿದ್ದು, ಈ ಕಾರು ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು ಇದರ ವೈಶಿಷ್ಟ್ಯ ಉತ್ತಮವಾಗಿ ಇರಲಿದೆ. ಎಪ್ರಿಲ್ 2024 ರಲ್ಲಿ ಮಾರುಕಟ್ಟೆ ಗೆ ಬರಲಿದೆ.

advertisement

ವಿನ್ಯಾಸ ಹೇಗಿದೆ?

ಟಾಟಾ Curvv EV ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಆರಾಮದಾಯಕ ಅನುಭವ ವನ್ನು ನೀಡಲಿದೆ. ಸನ್‌ರೂಫ್ (Sunroof), ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್‌ (Multifunctional Steering Wheel), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡಲಿದೆ. ಅದರೊಂದಿದೆ‌ LED ಬಾರ್‌ಗಳು, ಸ್ಪ್ಲಿಟ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಇರಲಿದೆ. ಪ್ರಯಾಣಿಕರ ಸುರಕ್ಷತೆಗಾಗಿ Curvv EV 6 ಏರ್‌ಬ್ಯಾಗ್‌ಗಳು ಇರಲಿದ್ದು, ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಚಾರ್ಜಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, DRL ಮತ್ತು ತ್ರಿಕೋನ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ.

ಬೆಲೆ ಹೇಗಿದೆ?

ಈ ಕಾರು ನೋಡಲು ಕೂಡ ಬಹಳ ಆಕರ್ಷಕ ವಾಗಿದ್ದು, ಜಿಪ್ಟ್ರಾನ್ ತಂತ್ರಜ್ಞಾನದೊಂದಿಗೆ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.ಇದರ ಬೆಲೆಯು ರೂ 10.50 ಲಕ್ಷ ಆಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಇದು 400 ರಿಂದ 550 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಡ್ರೈವ್ ಮಾಡಬಹುದಾಗಿದ್ದು ವಾಹನ ಖರೀದಿ ಮಾಡಬೇಕು ಅನ್ನೋರಿಗೆ ಸೂಕ್ತ ಆಯ್ಕೆ ಆಗಿದೆ.

advertisement

Leave A Reply

Your email address will not be published.