Karnataka Times
Trending Stories, Viral News, Gossips & Everything in Kannada

Credit Card: ಈ 4 ವಿಧಾನದಿಂದ ಕ್ರೆಡಿಟ್ ಕಾರ್ಡ್‌ನಿಂದ ಬ್ಯಾಂಕ್ ಖಾತೆಗೆ ಸುಲಭವಾಗಿ ಹಣ ವರ್ಗಾಯಿಸಬಹುದು!

advertisement

ಮೊದಲಿಗಿಂತ ಈಗ ಕ್ರೆಡಿಟ್‌ ಕಾರ್ಡ್‌ (Credit Card) ಬಳಕೆ ಹೆಚ್ಚಾಗಿದೆ. ಮಧ್ಯಮ ವರ್ಗದವರೂ ಸಹ ಈಗ ಹೆಚ್ಚಾಗಿ ಬಹುತೇಕ ಎಲ್ಲದಕ್ಕೂ ಕ್ರೆಡಿಟ್‌ ಕಾರ್ಡ್‌ ಅನ್ನೇ ಬಳಸುತ್ತಾರೆ. ಆದರೆ, ಕೆಲವೊಮ್ಮೆ ನಗದು ಅಥವಾ ಬ್ಯಾಂಕ್‌ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್‌ (Money Transfer) ಮಾಡಲು ಸರಿಯಾದ ವಿಧಾನ ಗೊತ್ತಿಲ್ಲದೆ ಪರದಾಡುತ್ತಾರೆ.

ಇಷ್ಟದ ವಸ್ತುಗಳನ್ನು ಇಲ್ಲವೇ ಬಟ್ಟೆ, ಆಹಾರವನ್ನು ಖರೀದಿ ಮಾಡಲು ಮತ್ತು ಪೇಮೆಂಟ್ (Payment) ಮಾಡುವಾಗ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಅನುಕೂಲಕರವಾಗಿದೆ . ಆದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದೇ ಎಂಬ ಕುರಿತಾಗಿ ಅನೇಕರಿಗೆ ಗೊತ್ತಿಲ್ಲ. ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಹೇಗೆ ವರ್ಗಾಯಿಸುವುದು, ಹಾಗೆ ವರ್ಗಾಯಿಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಾವವು ಬನ್ನಿ ನೋಡೋಣ.

ಕ್ರೆಡಿಟ್ ಕಾರ್ಡ್‌ (Credit Card) ನಿಂದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದೇಕೆ?

 

 

ಜೀವ ವಿಮಾ ಪಾವತಿಗಳು ಅಥವಾ ಸಾಲ (Loan) ಅಡಮಾನ ಪಾವತಿಗಳಂತಹ ಕೆಲವು ಹಣಕಾಸಿನ ವಹಿವಾಟುಗಳನ್ನು ಕ್ರೆಡಿಟ್ ಕಾರ್ಡ್‌ ಬಳಸಿಕೊಂಡು ಮಾಡಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು ಮತ್ತು ನಂತರದ ವಹಿವಾಟುಗಳನ್ನು ಸುಲಭವಾಗಿ ಮುಂದುವರಿಸಬಹುದು. ಹಾಗಾದ್ರೆ, ಕ್ರೆಡಿಟ್ ಕಾರ್ಡ್‌ನಿಂದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸೋದೇಗೆ ಎಂಬ ಪ್ರಶ್ನೆ ಕೆಲವರನ್ನು ಕಾಡಿರಬಹುದು. ಸಾಮಾನ್ಯವಾಗಿ 4 ಮಾರ್ಗಗಳ ಮೂಲಕ ಹಣವನ್ನು ವರ್ಗಾಯಿಸಬಹುದಾಗಿದೆ.

1. Direct Transfer:

ಆನ್‌ಲೈನ್ ಬ್ಯಾಂಕಿಂಗ್ (Online Banking) ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಯನ್ನು ಹಲವು ಬ್ಯಾಂಕ್‌ಗಳು ಅನುಮೋದಿಸುತ್ತವೆ, ಅಂತಹ ವಹಿವಾಟುಗಳಿಗೆ ದೈನಂದಿನ ವರ್ಗಾವಣೆ ಮಿತಿ ಇದೆ ಎಂಬುದನ್ನು ಮುಖ್ಯವಾಗಿ ಗಮನಿಸ ಬೇಕಾಗಿದೆ. ಇದು ಬ್ಯಾಂಕ್‌ಗಳಾದ್ಯಂತ ಬದಲಾಗಬಹುದು. ಆದ್ದರಿಂದ ಹಣ ವರ್ಗಾವಣೆಗೂ ಮೊದಲು ನಿಮ್ಮ ನಿರ್ದಿಷ್ಟ ಬ್ಯಾಂಕ್‌ನೊಂದಿಗೆ ತ್ವರಿತವಾಗಿ ಪರಿಶೀಲನೆ ನಡೆಸಿ ನಂತರದಲ್ಲಿ ಹಣವನ್ನು ವರ್ಗಾಯಿಸಬಹುದಾಗಿದೆ.

2. Net Banking:

ನಿಮ್ಮ ಫೋನ್ ಗಳಲ್ಲಿ ಬ್ಯಾಂಕ್ ನೆಟ್ ಬ್ಯಾಂಕಿಂಗ್ (Net Banking) ಸೇವೆಗಳನ್ನು ನೀಡಿದ್ದರೆ, ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಿ, ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಹಣ ವರ್ಗಾವಣೆ ಎಂಬುದನ್ನು ಆಯ್ಕೆಮಾಡಿ, ಬಯಸಿದ ಮೊತ್ತವನ್ನು ನಮೂದಿಸಿ ಮತ್ತು ವಹಿವಾಟನ್ನು ಪೂರ್ಣಗೊಳಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ ಹಣವನ್ನು ವರ್ಗಾಯಿಸಿಕೊಳ್ಳಬಹುದು.

3. Telephone Call

advertisement

ಕೆಲವು ಕ್ರೆಡಿಟ್ ಕಾರ್ಡ್ ವಿತರಕರು ಫೋನ್ ಕರೆ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯ ನೀಡುತ್ತಾರೆ. ಫೋನ್ ಬ್ಯಾಂಕಿಂಗ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ವಿತರಕರನ್ನು ಸಂಪರ್ಕಿಸಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಅವರನ್ನು ವಿನಂತಿಸಿ ಹಣವನ್ನು ವರ್ಗಾಯಿಸಿ.

4. Check Can be Given:

ನೀವು ಹೆಚ್ಚು ಹಳೆಯ ಹಾಗೂ ಸೇಫ್ ವಿಧಾನ ಬಯಸಿದರೆ, ನೀವೇ ಚೆಕ್ ಬರೆಯಬಹುದು. ಸ್ವೀಕರಿಸುವವರ ಹೆಸರಿನಲ್ಲಿ, ಸ್ವಯಂ ಎಂದು ಬರೆಯಿರಿ, ಅಗತ್ಯವಿರುವ ವಿವರಗಳನ್ನು ಸೇರಿಸಿ ಮತ್ತು ಚೆಕ್ ಅನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಮಾಡಿ. ಹಣವನ್ನು ವರ್ಗಾಯಿಸಿಕೊಳ್ಳಬಹುದು.

ಕ್ರೆಡಿಟ್ ಕಾರ್ಡ್‌ನಿಂದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಮುನ್ನ ಪಾಲಿಸಬೇಕಾದ ಟಿಪ್ಸ್:

ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಸೌಲಭ್ಯವು ಹೆಚ್ಚು ಅನುಕೂಲಕರವಾಗಿದ್ದರೂ, ಪರಿಗಣಿಸಬೇಕಾದ ಕೆಲವು ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸಲೆ ಬೇಕು.

ಕ್ರೆಡಿಟ್ ಕಾರ್ಡ್‌ನ ಮೂಲ ಉದ್ದೇಶ:

ಕ್ರೆಡಿಟ್ ಕಾರ್ಡ್‌ ಪ್ರಾಥಮಿಕವಾಗಿ ನೇರ ಪಾವತಿಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದ, ತುರ್ತು ಸಂದರ್ಭಗಳಲ್ಲಿ ಮಾತ್ರ ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯನ್ನು ನೀವು ಮಾಡಬಹುದಾಗಿದೆ.

IT Raid ಅಗಬಾರದಲ್ವಾ?

ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯ ಮಿತಿ ಮೀರಿದರೆ ಆದಾಯ ತೆರಿಗೆ ಇಲಾಖೆ (Income Tax Department) ಯಿಂದ ಪರಿಶೀಲನೆಗೆ ಒಳಪಡಬಹುದು. ಆಗಾಗ್ಗೆ ಮಾಡುವ ಸಣ್ಣ ಪುಟ್ಟ ವರ್ಗಾವಣೆಗಳು ಸಹಾ ತೆರಿಗೆ ಅಧಿಕಾರಿಗಳ ಅನಗತ್ಯ ಗಮನ ಸೆಳೆಯಬಹುದು ಹಾಗಾಗಿ ಹಣ ವರ್ಗಾವಣೆ ಮಾಡುವಾಗ ಜಾಗರೂಕರಾಗಿರಿ.

ಎಚ್ಚರಿಕೆಯಿಂದಿರಿ

ತುರ್ತು ಸಂದರ್ಭಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಆಯ್ಕೆಯು ಬಹಳ ಉಪಯುಕ್ತ ಎನಿಸಿದರೂ ಕೂಡ, ನೀವು ಅದನ್ನು ಎಚ್ಚರಿಕೆಯಿಂದ ಬಳಸಬೇಕು ನೆನಪಿಡಿ, ಇದು ಅಗತ್ಯವಿದ್ದಾಗ ಮಾತ್ರ ಅತ್ಯುತ್ತಮವಾಗಿ ಬಳಸುವ ಸಾಧನವಾಗಿದೆ. ಹಾಗಾಗಿ ಸುಮ್ಮನೆ ಇಲ್ಲದ ಸಲ್ಲದ ಕಾರಣಕ್ಕೆ ಬಳಸದಿರಿ.

advertisement

Leave A Reply

Your email address will not be published.