Karnataka Times
Trending Stories, Viral News, Gossips & Everything in Kannada

Subsidy Loan: ಗ್ಯಾರಂಟಿ ಯೋಜನೆಗಳ ನಂತರ ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದ ಸರ್ಕಾರ!

advertisement

ಇಂದು ಮಹೀಳೆಯರಿಗಾಗಿ ಸರಕಾರ ಹಲವು‌ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದ್ದು, ಹೆಚ್ಚಿನ ಪ್ರೋತ್ಸಾಹವನ್ನು ಸಹ ನೀಡುತ್ತಿದೆ. ಈಗಾಗಲೇ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆಯ ಮೂಲಕ ಮಹೀಳೆಯರಿಗೆ ಸಹಾಯಧನ ನೀಡ್ತಾ ಇದೆ. ಇದೀಗ ಸರಕಾರ ಮತ್ತೊಂದು ಸೌಲಭ್ಯ ದ ಮೂಲಕ ಗುಡ್ ನ್ಯೂಸ್ ‌ನೀಡುತ್ತಿದೆ, ಎಷ್ಟೋ ಜನ‌ ಮಹೀಳೆಯರಿಗೆ ತಮ್ಮದೇ ಆದ ಸ್ವಂತ ಭೂಮಿ ಬೇಕು ಎಂದು ಕನಸು ಇಟ್ಟು ಕೊಂಡಿರುತ್ತಾರೆ. ಆದರೆ ಹೆಚ್ಚಿನ ಮಹೀಳೆಯರಿಗೆ ಇದು ಕಷ್ಟಸಾಧ್ಯ. ಆದರೆ ಇದೀಗ ಸರಕಾರ ಭೂಮಿ ರಹಿತರಿಗೆ ಭೂಮಿ ಖರೀದಿ ಮಾಡಲು ಸಾಲ ನೀಡಲು ಮುಂದಾಗಿದ್ದು ಸಬ್ಸಿಡಿ ಕೂಡ ನೀಡಲಿದೆ.

ಭೂ ಒಡೆತನ ಯೋಜನೆ:

ಭೂ ಒಡೆತನ ಯೋಜನೆಗೆ ಮಹೀಳೆಯರು ಅರ್ಜಿ ಸಲ್ಲಿಸ ಬಹುದಾಗಿದ್ದು, ಭೂ ರಹಿತ ಮಹಿಳಾ ಕೃಷಿಕರು ತಾವು ವಾಸಿಸುವ ಸ್ಥಳದಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜಾಗ ಖರೀದಿಸಲು ಸರ್ಕಾರ ಸಹಾಯಧನ ನೀಡುತ್ತದೆ. ಸುಮಾರು 20 ರಿಂದ 25 ಲಕ್ಷ ಸಾಲ ಸೌಲಭ್ಯ ಸಿಗಲಿದ್ದು ಇದರಲ್ಲಿ 50% ನಷ್ಟು ಫಲಾನುಭವಿಗಳು ಪಾವತಿಸಿದರೆ ಇನ್ನು 50% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

advertisement

ಈ ಯೋಜನೆಗೆ ಮಹೀಳಾ ಫಲಾನುಭವಿಗಳು ಅರ್ಜಿ ಸಲ್ಲಿಸ ಬಹುದಾಗಿದ್ದು ಅರ್ಜಿ‌ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ. ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಮುಖ್ಯ ದಾಖಲೆಗಳು ಬೇಕಾಗುತ್ತದೆ. ಹೌದು ಮುಖ್ಯವಾಗಿ ಆಧಾರ್ ಕಾರ್ಡ್ (Aadhar Card), ಜಾತಿ ಪ್ರಮಾಣ ಪತ್ರ (Cast Certificate), ಅರ್ಜಿದಾರರ, ಕೃಷಿ ಕಾರ್ಮಿಕರ ದೃಢೀಕರಣ ಪತ್ರ ಇತ್ಯಾದಿ ದಾಖಲೆಗಳು ಬೇಕು.

ಈ ಲಿಂಕ್ ಬಳಸಿ:

ಅರ್ಜಿ ಸಲ್ಲಿಕೆ ಮಾಡಲು ನೀವು‌ ಈ ಲಿಂಕ್ ಬಳಸಬಹುದಾಗಿದೆ. https://sevasindhu.karnataka.gov.in/Sevasindhu/Kannada ಇಲ್ಲಿ ಭೇಟಿ ನೀಡಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳು ಕರ್ನಾಟಕ ಓನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ.

ಈ ನಿಯಮ ಇದೆ:

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಮಹೀಳೆಯ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ 1.5 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ 2 ಲಕ್ಷ ಮೀರಬಾರದು ವಾಸ ಮಾಡುವ ಸ್ಥಳದಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಮೀನನ್ನು ಖರೀದಿ ಮಾಡಿದ್ರೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ.

advertisement

Leave A Reply

Your email address will not be published.