Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ, ಯೋಜನೆಯಲ್ಲಿ ಹೊಸ ತಿರುವು ​

advertisement

ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಜಾರಿ ಆಗಿ ಕೆಲವು ತಿಂಗಳುಗಳೇ ಕಳೆದಿವೆ. ಈಗಾಗಲೇ ಮನೆಯೊಡತಿಯರ ಖಾತೆಗೆ 2 ಸಾವಿರ ಹಣ ಕೂಡ ಜಮೆ ಆಗಿದ್ದು, ಕೆಲವರು ಸಂತಸ ವ್ಯಕ್ತಪಡಿಸಿದರೆ ಇನ್ನು ಕೆಲವರಿಗೆ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ. ಆದರೆ ಕೆಲವರ ಖಾತೆಗೆ ಹಣ ಜಮಾ ಆಗಿದ್ದರೂ ಕೂಡ ಅದನ್ನು ವಾಪಸ್ಸು ಪಡೆಯಲಾಗಿದೆ. ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಖಾತೆಗೆ ಜಮಾ ಆದ ಹಣವು ವಾಪಸ್ಸು ಪಡೆದ ಸರ್ಕಾರ:

 

 

advertisement

ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಯ ಮೂರು ಕಂತುಗಳ ಹಣವು ಬಿಡುಗಡೆಯಾಗಿದೆ. ಆದರೆ ಕೆಲವರಿಗೆ ಮೊದಲ ಕಂತಿನ ಹಣವು ಖಾತೆಗೆ ಜಮಾ ಆಗಿದ್ದು, ಇನ್ನು ಉಳಿದ ಕಂತಿನ ಹಣವು ಖಾತೆಗೆ ಜಮಾ ಆಗಿಲ್ಲ. ಈಗಾಗಲೇ ಒಂದು ಕೋಟಿಯ ಹದಿನೇಳು ಲಕ್ಷ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಸರಿಸುಮಾರು ಹತ್ತು ಲಕ್ಷ ಜನರಿಗೆ ಖಾತೆ ಜಮಾ ಆದ ಹಣವು ಸರ್ಕಾರವು ಹಿಂಪಡೆದಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಾಗೂ ಅರ್ಜಿದಾರರ ಅಗತ್ಯ ದಾಖಲೆಗಳು ಅಪ್ಡೇಟ್ ಆಗದ ಕಾರಣದಿಂದ ಈ ರೀತಿಯಾಗಿದೆ ಎನ್ನಲಾಗಿದೆ.

ಖಾತೆಗೆ Gruha Lakshmi Money ಜಮಾ ಆಗಿರದವರು ಹೀಗೆ ಕೆಲಸ ಮಾಡಿ?

  • ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಬಾರದೇ ಇದ್ದವರು ನಿಮ್ಮ ರೇಷನ್ ಕಾರ್ಡ್ (Ration Card) ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದು ಮೊದಲು ಪರೀಕ್ಷಿಸಿಕೊಳ್ಳಿ.
  • KYC ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC Update ಮಾಡಿಸಿಕೊಳ್ಳಿ.
  • ಅದಲ್ಲದೇ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದವರು ಬ್ಯಾಂಕ್ ನಲ್ಲಿ ಇ-ಕೆವೈಸಿ ಹಾಗೂ ಆಧಾರ್(Aadhaar Card)  ಜೋಡಣೆ ಮಾಡಿಕೊಂಡ ಮಾತ್ರ ಹಣ ಜಮಾ ಆಗಲಿದೆ.
  • ಅದಲ್ಲದೇ ನಿಮ್ಮ ಹತ್ತಿರದ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ದಾಖಲೆಯನ್ನು ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.

advertisement

Leave A Reply

Your email address will not be published.