Karnataka Times
Trending Stories, Viral News, Gossips & Everything in Kannada

Spam Call: ಪದೇ ಪದೇ ಬರುವ ಸ್ಪ್ಯಾಮ್ ಕಾಲ್​ಗಳನ್ನು ಬ್ಲಾಕ್ ಮಾಡುವುದು ಹೇಗೆ?

advertisement

ಸದ್ಯ ಮೊಬೈಲ್‌ ಪ್ರತಿಯೊಬ್ಬರ ಅಗತ್ಯ ಹಾಗೂ ಅವಶ್ಯ ಡಿವೈಸ್‌ ಆಗಿ ಬಿಟ್ಟಿದೆ. ಅದರಲ್ಲಿಯೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಇಂದು ಎಲ್ಲರ ಕೈನಲ್ಲೂ ರಾರಾಜಿಸುತ್ತಿವೆ. ಸ್ಮಾರ್ಟ್‌ಫೋನ್‌ ವಾಯಿಸ್‌ ಕರೆ ಸೇರಿದಂತೆ ಹಲವು ಕೆಲಸಗಳಿಗೆ ಅಗತ್ಯ ಸಾಧನ ಆಗಿದೆ. ಅದೇ ರೀತಿ ಅನಗತ್ಯ ಕರೆಗಳಿಂದ ಕೆಲವೊಮ್ಮೆ ಕಿರಿಕಿರಿ ಎನಿಸುವುದು ಕೂಡ ಉಂಟೂ. ಅದರಲ್ಲೂ ಸ್ಪ್ಯಾಮ್‌ ಕರೆಗಳು ಉಂಟು ಮಾಡುವ ಕಿರಿಕಿರಿ ಅಷ್ಟಿಷ್ಟಲ್ಲ. ಆದರೆ ಅಂತಹ ಸ್ಪ್ಯಾಮ್‌ ಕರೆಗಳನ್ನು (Spam Calls) ಬ್ಲಾಕ್‌ ಮಾಡಬಹುದಾಗಿದೆ.

ಹೌದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ (Android Smartphone) ನಲ್ಲಿ ಅನಗತ್ಯ ಕರೆಗಳನ್ನು ಬ್ಲಾಕ್‌ (Block) ಮಾಡಬಹುದಾಗಿದೆ. ಇದು ಬಳಕೆದಾರರಿಗೆ ತೊಂದರೆಯಾಗುವ ಅನಗತ್ಯ ಸ್ಪ್ಯಾಮ್ ಕರೆಗಳನ್ನು ಬ್ಲಾಕ್‌ ಮಾಡುವುದಕ್ಕೆ ಆಯ್ಕೆಯನ್ನು ನೀಡುತ್ತದೆ. ಜೊತೆಗೆ ಅನಗತ್ಯ ಜನರಿಂದ ರೋಬೋಕಾಲ್‌ಗಳು ಅಥವಾ ಕಿರಿಕಿರಿ ಮಾಡುವ ಕರೆಗಳನ್ನು ನಿರ್ಬಂಧಿಸಬಹುದು. ಇಂತಹ ಕರೆಗಳನ್ನು ನಿರ್ಲಕ್ಷಿಸಲು ಅನೇಕ ಜನರು ಬಳಸುವ ಅನುಕೂಲಕರ ವಿಧಾನವೆಂದರೆ ಕರೆಗಳನ್ನು ಬ್ಲಾಕ್ ಮಾಡುವುದು. ಹಾಗಾದ್ರೆ ನಿಮ್ಮ ಫೋನ್‌ಗೆ ಬರುವ ಸ್ಪ್ಯಾಮ್‌ ಕರೆಗಳು ಬ್ಲಾಕ್‌ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

Spam Call ಎಂದರೇನು? ಸ್ಪ್ಯಾಮ್ ಕರೆಗಳ ವಿಧಗಳು ಯಾವುವು?

 

 

ಸ್ಪ್ಯಾಮ್ ಕರೆಗಳು (Spam Calls) ಅಸಂಬದ್ಧ ಕರೆಗಳು ಮತ್ತು ಸಾಕಷ್ಟು ಫೋನ್ ಸಂಖ್ಯೆಗಳಿಗೆ ಬರುವ ಸಂದೇಶಗಳಾಗಿವೆ. ಕೆಲವು ಸ್ಪ್ಯಾಮ್ ಕರೆಗಳು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಮತ್ತು ಇನ್ನೂ ಅನೇಕ ವಿಷಯಗಳಿಗಾಗಿ. ಆದರೆ ಸ್ಪ್ಯಾಮ್ ಕರೆಗಳಿಂದ ಈ ಕೊಡುಗೆಗಳಲ್ಲಿ ಆಸಕ್ತಿ ಹೊಂದಿರದವರಿಗೆ ಅವು ಅತ್ಯಂತ ಕಿರಿಕಿರಿ ಉಂಟುಮಾಡುತ್ತವೆ.

advertisement

  • ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಿಂದ ಟೆಲಿಮಾರ್ಕೆಟಿಂಗ್ ಕರೆಗಳು.
  • ರೋಬೋಕಾಲ್‌ಗಳು, ಇವು ಪ್ರಿ-ರೆಕಾರ್ಡ್ ಮಾರಾಟದ ಕರೆಗಳಾಗಿವೆ.
  • ವಂಚಕರಿಂದ ಬರುವ ಸ್ಕ್ಯಾಮ್ ಕರೆಗಳು.

DND ನಲ್ಲಿ ನೋಂದಾಯಿಸುವ ಮೂಲಕ Spam Call ಗಳನ್ನು ಬ್ಲಾಕ್‌ ಮಾಡೋದು ಹೇಗೆ?

ಈ ಮೊಬೈಲ್-ಆಪರೇಟರ್ ನಿರ್ದಿಷ್ಟ DND (Do-Not-Disturb) ನೋಂದಣಿ ವೆಬ್‌ಸೈಟ್‌ಗಳಲ್ಲಿ ನಿಮ್ಮ ಸಂಖ್ಯೆಯನ್ನು ನೀವು ನೋಂದಾಯಿಸಿಕೊಳ್ಳಬಹುದು, ಇದರ ಸಹಾಯದಿಂದ ನೀವು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವಲ್ಲಿ ತೀವ್ರವಾದ ಬದಲಾವಣೆಯನ್ನು ಗಮನಿಸಬಹುದು.

ಇನ್ನು ಗೂಗಲ್‍ (Google) ನ ಹೊಚ್ಚ ಫೋನ್ ಆ್ಯಪ್ ಅನ್ನು ಡೌನ್‍ಲೋಡ್ (Download) ಮಾಡಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ (Block) ಮಾಡಬಹುದು. ಇದಕ್ಕಾಗಿ ನೀವು ಫೋನ್ ಆ್ಯಪ್ ನಿ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ನಂತರ ಆ್ಯಪ್‍ನ ಮೇಲಿನ ಭಾಗದಲ್ಲಿ ಸುಮಾರು ಅರ್ಧದಷ್ಟು, ಹಸಿರು ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಸೈಲೆನ್ಸ್ ಅನ್‍ನೋನ್ ಕಾಲರ್ಸ್ ಅನ್ನು ಆಯ್ಕೆ ಆನ್ ಮಾಡಿ ಟಾಗಲ್ ಮಾಡಿ.

Audio Fingerprinting ಎಂದರೇನು?

ಇನ್ನು ರೋಬೋಕಾಲ್‌ (Robo Call) ಗಳನ್ನು ಬ್ಲಾಕ್‌ ಮಾಡುವುದಕ್ಕೆ ರೋಬೋಕಿಲ್ಲರ್‌ ಅಪ್ಲಿಕೇಶನ್‌ ಸೂಕ್ತವಾಗಿದೆ. ಇದು ತನ್ನ ಅಲ್ಗಾರಿದಮ್‌ ಅನ್ನು ಬಳಸಿಕೊಂಡು ಸ್ಪ್ಯಾಮ್‌ ಕಾಲ್‌ಗಳನ್ನು (Spam Calls) ಬ್ಲಾಕ್‌ ಮಾಡಲಿದೆ. ಆಡಿಯೋ ಫಿಂಗರ್‌ಪ್ರಿಂಟಿಂಗ್ (Audio Fingerprinting) ಟೆಕ್ನಾಲಿಜಿಯನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ನೈಜ ಸಮಯದಲ್ಲಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸ್ಪ್ಯಾಮ್ ಕಾಲರ್ ಐಡಿ, ಐಚ್ಛಿಕ AI ಅಸಿಸ್ಟೆಂಟ್‌ ಕರೆಗಳನ್ನು ಕೂಡ ಇದರಲ್ಲಿ ಪ್ರಿ -ಸ್ಕ್ರೀನ್ ಮಾಡಬಹುದಾಗಿದೆ.

advertisement

Leave A Reply

Your email address will not be published.