Karnataka Times
Trending Stories, Viral News, Gossips & Everything in Kannada

UPI Payment: ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ದರೂ UPI ಪೇಮೆಂಟ್ ಮಾಡಬಹುದು, ಈ ವಿಧಾನ ಅನುಸರಿಸಿ!

advertisement

ಭಾರತದಲ್ಲಿಗ ಜನರು ಹೆಚ್ಚಾಗಿ ಬಳಸುವ ಪೇಮೆಂಟ್ ವಿಧಾನ ಯುಪಿಐ (UPI Payment)ಆಗಿದೆ. ಇದು ಬಹಳ ಸರಳವಾದ ಹಣ ವರ್ಗಾವಣೆ ತಂತ್ರಜ್ಞಾನವಾಗಿದ್ದು ಮೊಬೈಲ್ ನಲ್ಲಿ ಸ್ಕ್ಯಾನರ್ ನ ಮೂಲಕ ಹಣ ಪಡೆಯುವ ಅಕೌಂಟ್ ನ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಬಹುದಾಗಿದೆ. ಈ ತಂತ್ರಜ್ಞಾನವನ್ನು ಭಾರತವೇ ಅಭಿವೃದ್ಧಿಪಡಿಸಿರುವುದು ಎಂದು ನಿಮಗೆ ಗೊತ್ತಿದೆಯೇ? ಇತ್ತೀಚಿಗೆ ರಿಸರ್ವ್ ಬ್ಯಾಂಕ್ ಆಫ್ (Reserve Bank Of India) ಇಂಡಿಯಾ ರೂಪೆ (Rupay) ಕ್ರೆಡಿಟ್ ಕಾರ್ಡ್ ನ ಮೂಲಕ ಯುಪಿಐ ಪೇಮೆಂಟ್ ಮಾಡಬಹುದು ಎಂಬ ನಿಯಮವನ್ನು ಮಾಡಿತು. ಈ ನಿಯಮ ಜಾರಿಗೆ ಬಂದ ಮೇಲೆ ಅಕೌಂಟ್ ನಲ್ಲಿ ಹಣ ಇಲ್ಲದೆಯೂ ಕೂಡ ರೂಪೆ ಕ್ರೆಡಿಟ್ ಕಾರ್ಡ್ ನಲ್ಲಿ ಇರುವ ಕ್ರೆಡಿಟ್ ಲಿಮಿಟ್ ನ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ.

“ಕ್ರೆಡಿಟ್ ಆನ್ ಯುಪಿಐ”

ಆದರೆ ಅಮೆಜಾನ್ ಪೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರೆಡಿಟ್ ಆನ್ ಯುಪಿಐ (Credit On UPI)ಎಂಬ ಯೋಜನೆಯನ್ನು ಜಾರಿಗೆ ತರಲಿದೆ. ಇಲ್ಲಿ ರೂಪೆ ಕ್ರೆಡಿಟ್ ಕಾರ್ಡ್ ಇಲ್ಲದೆಯೂ, ಬ್ಯಾಂಕಿನಲ್ಲಿ ಹಣ ಇಲ್ಲದೆಯೂ ಅಮೆಜಾನ್ ಪೆ ಕೊಡುವ ಕ್ರೆಡಿಟ್ ನ ಆಧಾರದಲ್ಲಿ ಯುಪಿಐ ಪೇಮೆಂಟ್ ಅನ್ನು ಮಾಡಬಹುದಾಗಿದೆ. ಅಮೆಜಾನ್ ಪೆ ಸೇವೆಯನ್ನು ನೀಡುತ್ತಿರುವುದು ಪ್ರಖ್ಯಾತ ಈ ಕಾಮರ್ಸ್ ಕಂಪನಿಯಾದ ಅಮೆಜಾನ್. ಈಗಲೂ ಕೂಡ ಅಮೆಜಾನ್ ಪೆ (Amazon Pay)ಚಾಲ್ತಿಯಲ್ಲಿದ್ದು ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡುವ ಮೂಲಕ ಅಮೆಜಾನ್ ಪೇ ಮೂಲಕ ಹಣ ವರ್ಗಾವಣೆ ಸಾಧ್ಯವಿದೆ. ಆದರೆ ಈಗ ಕ್ರೆಡಿಟ್ ಸಿಸ್ಟಮ್ ಅನ್ನು ಜಾರಿಗೆ ತರಲಿದೆ.

advertisement

ಯಾವಾಗ ಸಿಗಲಿದೆ ಕ್ರೆಡಿಟ್ ಸೌಲಭ್ಯ ?

2024ರ ಮೊದಲಾರ್ಧದಲ್ಲಿ ಈ ಹೊಸ ಬದಲಾವಣೆ ಬಳಕೆದಾರರಿಗೆ ಸಿಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದನ್ನು ಆಕ್ಟಿವೇಟ್ ಮಾಡಿಕೊಂಡ ಬಳಕೆದಾರರು ಬ್ಯಾಂಕ್ ಅಕೌಂಟ್ ನ ಮೂಲಕ ಅಥವಾ ರೂಪೇ ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವುದರ ಜೊತೆಗೆ “ಕ್ರೆಡಿಟ್ ಆನ್ ಯುಪಿಐ” ಎಂಬ ಆಯ್ಕೆಯ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ಒಂದು ನಿರ್ದಿಷ್ಟ ಅವಧಿಯ ತನಕ ಮಾಡಿರುವ ಪೇಮೆಂಟ್ ಗಳನ್ನು ಬಳಕೆದಾರರು ಅಮೆಜಾನ್ ಪೆ ಗೆ ಮರುಪಾವತಿ ಮಾಡಬೇಕಾಗಿರುತ್ತದೆ.

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ಪೇಮೆಂಟ್ ಗಳಿಗೆ ಕ್ರೆಡಿಟ್ ಲೈನ್ ಆನ್ ಯುಪಿಐ ನ ಮೂಲಕ ಪೇಮೆಂಟ್ ಮಾಡಬಹುದು ಎಂಬ ನಿಯಮವನ್ನು ಜಾರಿಗೆ ತಂದಿದೆ. ಏಪ್ರಿಲ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮೊದಲೇ ಸ್ಯಾಂಕ್ಷನ್ ಆದ ಸಾಲದ ಮೂಲಕ, ಓವರ್ ಡ್ರಾಫ್ಟ್ ಫೆಸಿಲಿಟಿ ಮೂಲಕ, ಬ್ಯಾಂಕಿನಲ್ಲಿರುವ ಹಣದ ಮೂಲಕ ಅಥವಾ ರೂಪೇ ಕ್ರೆಡಿಟ್ ಕಾರ್ಡ್ ನ ಮೂಲಕ ಯುಪಿಐ ಪೇಮೆಂಟ್ಸ್ ಮಾಡಬಹುದು ಎಂದು ನಿರ್ಧರಿಸಿತ್ತು.

pi2016ರಲ್ಲಿ ಜಾರಿಗೆ ಆದ ಯುಪಿಐ ಪೇಮೆಂಟ್ ಸಿಸ್ಟಮ್ ಒಂದು ರಿಯಲ್ ಟೈಮ್ ಪೆಮೆಂಟ್ ಸಿಸ್ಟಮ್ ಆಗಿದೆ. ಇದರ ಮೂಲಕ ಯುಪಿಐ ಐಡಿ ಗೆ ಲಿಂಕ್ ಆದ ಮೊಬೈಲ್ ನಂಬರ್, ಅಕೌಂಟ್ ನಂಬರ್, ಯುಪಿಐ ಐಡಿ ಅಥವಾ ಯುಪಿಆರ್ ಕೋಡ್ ನ ಮೂಲಕ ಹಣ ವರ್ಗಾವಣೆ ಮಾಡಬಹುದು. ಇದು ದಿನದ ಎಲ್ಲಾ ಅವಧಿಯಲ್ಲಿಯೂ ಆಕ್ಟಿವ್ ಆಗಿರುವ ಒಂದು ಹಣ ವರ್ಗಾವಣೆ ವಿಧಾನ ಆಗಿದೆ.

advertisement

Leave A Reply

Your email address will not be published.