Karnataka Times
Trending Stories, Viral News, Gossips & Everything in Kannada

Simple Dot One: ಕೇವಲ 1 ಲಕ್ಷಕ್ಕೆ 151 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಇವಿ ಸ್ಕೂಟರ್ ಬಿಡುಗಡೆ!

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ವಾಹನವೆಂಬುದು ಬಹು ಮುಖ್ಯವಾದ ಮೂಲಭೂತ ಅವಶ್ಯಕ ವಸ್ತು. ಪ್ರತಿಯೊಬ್ಬರ ಮನೆಯಲ್ಲೂ ಒಂದಾದರೂ ವಾಹನ ಇದ್ದೆ ಇರುತ್ತದೆ.‌ ಅದರಲ್ಲಿ ಮುಖ್ಯವಾಗಿ ‌ಯುವಕರಿಗೆ ದಿನ ನಿತ್ಯ ಸಂಚಾರಿಸಲು ಬೈಕ್ ಅಥವಾ ಸ್ಕೂಟರ್ ನ ಉಪಯೋಗ ಬಹಳಷ್ಟು ಇದೆ. ಇದೀಗ ಮಾರುಕಟ್ಟೆಯಲ್ಲಿಯು ವಿವಿಧ ರೀತಿಯ ಮಾಡೆಲ್ ನ ವಾಹನಗಳು ಬಂದಿದ್ದು ಯುವಕರಿಗೆ ಖರೀದಿ ಮಾಡಲು ಮತ್ತಷ್ಟು ಕ್ರೇಜ್ ಹುಟ್ಟಿಸಿದೆ. ಇದೀಗ ಸಿಂಪಲ್ ಎನರ್ಜಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಆದ ಡಾಟ್ ಒನ್ (Simple Dot One) ಇವಿ ಸ್ಕೂಟರ್ (Ev Scooter) ಬಿಡುಗಡೆ ಮಾಡಿದ್ದು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಯಲ್ಲಿ ಖರೀದಿ ಮಾಡಬಹುದಾಗಿದೆ.

ಮೈಲೇಜ್ ಹೇಗಿದೆ?

 

 

ಈ ಸ್ಕೂಟರ್ ಭರ್ಜರಿ ಮೈಲೇಜ್ ಹೊಂದಿದ್ದು ಉತ್ತಮ ಬ್ಯಾಟರಿ ಪ್ಯಾಕ್ (Battery Pack) ಜೋಡಣೆ ಹೊಂದಿದೆ. ಇದು ವಾಹನ ಪ್ರೀಯರನ್ನು ಬಹಳಷ್ಟು ಗಮನಸೆಳೆಯಲಿದ್ದು , ಸುಮಾರು 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು ಇದು ಪ್ರತಿ ಚಾರ್ಜ್ ಗೆ 151 ಕಿ.ಮೀ ಮೈಲೇಜ್ ನೊಂದಿಗೆ 72 NM ಟಾರ್ಕ್ ಉತ್ಪಾದನೆ ನೀಡುತ್ತದೆ.

ಬೆಲೆ ಹೇಗಿದೆ?

 

advertisement

 

ಸಿಂಪಲ್ ಎನರ್ಜಿ (Simple Energy) ಕಂಪನಿಯ ಹೊಸ ಡಾಟ್ ಒನ್ (Simple Dot One) ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಬೆಲೆಯು ರೂ. 99,999 ಬೆಲೆ ಹೊಂದಿದ್ದು ಬುಕಿಂಗ್ ಮಾಡಿ ಖರೀದಿ ಮಾಡಬಹುದಾಗಿದ್ದು ನೂತನ ವೈಶಿಷ್ಟ್ಯತೆಗಳೊಂದಿಗೆ ಗಮನ ಸೆಳೆಯಲಿದೆ.

ಹೇಗಿದೆ ವೈಶಿಷ್ಟ:

ಹೊಸ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ನೂತನ ವೈಶಿಷ್ಟ್ಯ ಇದ್ದು, ಇದು ಟ್ಯೂಬ್‌ಲೆಸ್ ಟೈಯರ್ಸ್ ವೈಶಿಷ್ಟ್ಯತೆಯೊಂದಿಗೆ ಅಲಾಯ್ ವ್ಹೀಲ್ಸ್, ಅಂಡರ್ ಸೀಟ್ ಸ್ಟೋರೇಜ್ ಮತ್ತು ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ರೀತಿಯ ವೈಶಿಷ್ಟ್ಯ ಇರಲಿದೆ.ಈ‌ ಸ್ಕೂಟರ್ 4 ಬಣ್ಣಗಳ ಆಯ್ಕೆಯಲ್ಲಿ ಬರಲಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್,‌ ಆಂಡ್ರಾಯ್ಡ್ (Android) ಒಎಸ್ (ios) ಸೇರಿದಂತೆ ಉತ್ತಮ ವೈಶಿಷ್ಟ್ಯಗಳು ಬರಲಿದೆ.ಇದು 105 km ಟಾಪ್ ಸ್ವೀಡ್ ಹೊಂದಿದ್ದು ಇಕೋ, ರೈಡ್, ಡ್ಯಾಶ್ ರೈಡಿಂಗ್ ಮೋಡ್ ಆಯ್ಕೆ ಕೂಡ ಇರಲಿದೆ.

ಒಟ್ಟಿನಲ್ಲಿ ಅತ್ಯಾಕರ್ಷಕ ವಿನ್ಯಾಸ, ಉತ್ತಮ ಫೀಚರ್ಸ್ ಹೊಂದಿರುವ ಸಿಂಪಲ್ ಡಾಟ್ ಒನ್ ಇವಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಉಂಟು ಮಾಡಿ ಇತರ ಕಂಪನಿಯ ವಾಹನಗಳಿಗೆ ಪೈಪೋಟಿ ‌ನೀಡಲಿದೆ.

advertisement

Leave A Reply

Your email address will not be published.