Karnataka Times
Trending Stories, Viral News, Gossips & Everything in Kannada

Aadhar Card: ಈ ದಿನಾಂಕದವರೆಗೆ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು, ಹೊಸ ಆದೇಶ!

advertisement

ಆಧಾರ್ ಕಾರ್ಡ್ (Aadhar Card) ಭಾರತೀಯ ನಾಗರಿಕರ ಪ್ರಮುಖ ಗುರುತಿನ ದಾಖಲೆಯಾಗಿದ್ದು, ಯಾವುದೇ ಕೆಲಸ ಕಾರ್ಯಕ್ಕೆ, ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಈ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು. ಹೀಗಿರುವಾಗ ಸೆಪ್ಟೆಂಬರ್ 2023 ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಉಚಿತವಾಗಿ ಆಧಾರ್ ಅಪ್‌ಡೇಟ್ ಸೇವೆಯ ಡಿಸೆಂಬರ್ 14 ರವರೆಗೆ ವಿಸ್ತರಣೆ ಮಾಡಿತ್ತು. ಆದರೆ ಈ ಉಚಿತ ಸೇವೆಯನ್ನು ಮೂರು ತಿಂಗಳ ವಿಸ್ತರಿಸಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಯುಐಡಿಎಐಯೂ ಹೊರಡಿಸಿದ ಆದೇಶದಲ್ಲಿ ಏನಿದೆ?

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India -UIDAI) ಸರ್ಕಾರಿ ಪೋರ್ಟಲ್ ಮೂಲಕ ಆಧಾರ್ ನವೀಕರಣದ ( Aadhaar updation ) ಗಡುವನ್ನು ವಿಸ್ತರಿಸಿದೆ. ಯುಐಡಿಎಐಯೂ, ಜನರ ಪಾಸಿಟಿವ್ ಪ್ರತಿಕ್ರಿಯೆಯ ಆಧಾರದ ಮೇಲೆ, ಸೌಲಭ್ಯವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಣೆ ಮಾಡಿದೆ. 3 ತಿಂಗಳು ಅಂದರೆ 15.12.2023 ರಿಂದ 14.03.2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಮೂಲಕ ದಾಖಲೆ ನವೀಕರಣದ ಸೌಲಭ್ಯವು 14.03.2024 ರವರೆಗೆ https://myaadhaar.uidai.gov.in/ ಮೈ ಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ಮುಂದುವರಿಯುತ್ತದೆ. ವಿವರಗಳ ಆನ್ಲೈನ್ ನವೀಕರಣ ಉಚಿತವಾಗಿದ್ದು, ಭೌತಿಕ ಆಧಾರ್ ಕೇಂದ್ರಗಳಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ವ್ಯಕ್ತಿಗಳಿಗೆ 25 ರೂ ಶುಲ್ಕ ವಿಧಿಸಲಾಗುತ್ತದೆ’ ಎಂದು ತಿಳಿಸಿದೆ.

advertisement

10 ವರ್ಷಕ್ಕೊಮ್ಮೆ ಆಧಾರ್ ನವೀಕರಣ ಕಡ್ಡಾಯ

ಯುಐಡಿಎಐಯು ಎಲ್ಲಾ ಬಳಕೆದಾರರು ಹತ್ತು ವರ್ಷಗಳಷ್ಟು ಹಳೆಯದಾದ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕು ಎಂದು ತಿಳಿಸಿದೆ. ಆಧಾರ್ ಕಾರ್ಡ್ ನಲ್ಲಿ ಹೆಸರು, ಹುಟ್ಟಿದ ದಿನಾಂಕ, ವಿಳಾಸದ ಸೇರಿದಂತೆ ಇನ್ನುಳಿದ ಮಾಹಿತಿಯನ್ನು ಬದಲಾವಣೆ ಮಾಡಲು ಬಳಕೆದಾರರು ಆನ್ಲೈನ್ ನವೀಕರಣ ಸೇವೆಯನ್ನು ಬಳಸಬೇಕು. ಇಲ್ಲವಾದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ನವೀಕರಿಸಬಹುದು. ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ.

advertisement

Leave A Reply

Your email address will not be published.