Karnataka Times
Trending Stories, Viral News, Gossips & Everything in Kannada

WhatsApp: ವಾಟ್ಸ್ ಆ್ಯಪ್ ನಲ್ಲಿ ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತವಾಗಿರಿಸಲು ಈ ಸೆಟ್ಟಿಂಗ್ ಆನ್ ಮಾಡಿಕೊಳ್ಳಿ.

advertisement

ಇತ್ತೀಚಿನ ದಿನದಲ್ಲಿ ವಾಟ್ಸ್ ಆ್ಯಪ್ (WhatsApp) ಎನ್ನುವುದು ಜಾಗತಿಕ ಮಟ್ಟದಲ್ಲಿ ಬಳಸಲ್ಪಡುವ ಆ್ಯಪ್ ಗಳ ಸಾಲಿನಲ್ಲಿ ಸೇರಿದೆ. ಬೆಳಗ್ಗೆ ಎದ್ದ ಕೂಡಲೇ ಬ್ರಶ್ ಮಾಡುವುದಕ್ಕಿಂತಲೂ ವಾಟ್ಸ್ ಆ್ಯಪ್ ನಲ್ಲಿ ಏನು ಬಂದಿದೆ ಎಂದು ಚೆಕ್ ಮಾಡುವವರೇ ನಮ್ಮಲ್ಲಿ ಅನೇಕರಿದ್ದಾರೆ. ಹಾಗಾಗಿ ಕಾಲಕ್ರಮೇಣ ಈ ವಾಟ್ಸ್ ಆ್ಯಪ್ ಎನ್ನುವುದು ಎಲ್ಲರ ಮೊಬೈಲ್ ನಲ್ಲಿ ಇರುವ ಸಾಮಾನ್ಯ ಅಪ್ಲಿಕೇಶನ್ ಗಳ ಸಾಲಿನಲ್ಲಿ ಒಂದು ಎಂಬ ಖ್ಯಾತಿಯನ್ನು ಪಡೆದಿದೆ.

ಆಗಾಗ ಅಪ್ಡೇಟ್

ವಾಟ್ಸ್ ಆ್ಯಪ್ ಆರಂಭ ಆದಾಗ ಇದ್ದ ಅನೇಕ ವೈಶಿಷ್ಟ್ಯ ಈಗ ಬಹುತೇಕ ಬದಲಾಗಿದೆ ಎನ್ನಬಹುದು. ಮೆಸೆಂಜರ್, ಇಮೋಜಿ ಸೇರಿದಂತೆ ಅನೇಕ ಫೀಚರ್ಸ್ ಆಗಾಗ ಅಪ್ಡೇಟ್ ಪ್ರಕ್ರಿಯೆ ಚಾಲ್ತಿಗೆ ಬರುತ್ತಲೇ ಇರುತ್ತದೆ. ಹಾಗಿದ್ದರೂ ನೀವು ವಾಟ್ಸ್ ಆ್ಯಪ್ ನಲ್ಲಿ ಕೆಲ ಗೌಪ್ಯ ಮಾಹಿತಿ ಕಳುಹಿಸಿದಾಗ ಅದು ನಿಮಗೆ ತಿಳಿಯದಂತೆ ಮಿಸ್ ಯೂಸ್ ಆಗುವ ಸಾಧ್ಯತೆ ಸಹ ಇದೆ. ಈ ನಿಟ್ಟಿನಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸುವುದು ಅತ್ಯವಶ್ಯಕವಾಗಿದೆ.

advertisement

ಈ ರೀತಿಯಾಗಿ ಮಾಡಿ

  • ವಾಟ್ಸ್ ಆ್ಯಪ್ ಕಾಲ್ ಸಂದರ್ಭದಲ್ಲಿ ಕಾಲ್ ಗಳ ಐಪಿ ವಿಳಾಸವನ್ನು ಗೌಪ್ಯವಾಗಿಟ್ಟುಕೊಂಡು ನಿಮ್ಮ ಸ್ಥಳ ಟ್ರ್ಯಾಕ್ ಮಾಡುವುದನ್ನು ತಡೆಯಬಹುದು.cನಿಮ್ಮ ಕರೆಗಳು ಸರ್ವರ್ ಮೂಲಕವೇ ನಡೆಯುವಂತದ್ದಾಗಿದ್ದು ನಿಮ್ಮ ಸ್ಥಳದ ಮಾಹಿತಿಯನ್ನು ಯಾರು ತಿಳಿದುಕೊಳ್ಳಲು ಸಾಧ್ಯವಿಲ್ಲ‌.
  • ವಾಟ್ಸ್ ಆ್ಯಪ್ ಎನ್ನುವುದು ಕಳೆದ ವರ್ಷವಷ್ಟೇ ಹೊಸ ಫೀಚರ್ಸ್ ಒಂದನ್ನು ಬಿಡುಗಡೆ ಮಾಡಿದೆ ಅದರ ಹೆಸರು ಡಿಸಪಿಯರಿಂಗ್ ಮೆಸೆಜರ್ಸ್ (Disappearing Messagers) ಎಂದು, ಇದನ್ನು ಸೆಟ್ಟಿಂಗ್ ನಲ್ಲಿ ನೀವು ಆನ್ ಮಾಡಿದರೆ ನಿಮ್ಮ ಮೆಸೇಜ್ ನಿಗಧಿತ ಸಮಯದ ಬಳಿಕ ಸ್ವಯಂ ಚಾಲಿತವಾಗಿ ಡಿಲೀಟ್ ಆಗಲಿದೆ. ಹಾಗಾಗಿ ನಿಮ್ಮ ಮಾಹಿತಿ ಗೌಪ್ಯವಾಗುವ ಜೊತೆ ಡಿಲಿಟಿಂಗ್ ಸಿಸ್ಟಂ ಕೂಡ ಆಟೋಮ್ಯಾಟಿಕ್ ಆಗಿ ಕೆಲಸ ಮಾಡಲಿದೆ.
  • ವಾಟ್ಸ್ ಆ್ಯಪ್ ಮೂಲಕ ಎಂಡ್ ಟು ಎಂಡ್ ಎನ್ಕ್ರಿಪ್ಶನ್(End To End Encryption) ಮೂಲಕ ವಾಟ್ಸ್ ಆ್ಯಪ್ ಬ್ಯಾಕಪ್ ಪಡೆಯಬಹುದು. ಚಾಟ್ ಬ್ಯಾಕಪ್ ಹಾಗೂ ಎಂಡ್ ಟು ಎಂಡ್ ಎನ್ ಕ್ರಿಪ್ಶನ್ ಆಯ್ಕೆ ಮಾಡಬೇಕು.
  • ನೀವು ಯಾವುದೇ ವ್ಯಕ್ತಿಯ ಅಥವಾ ಕಂಪೆನಿಯ ಗೌಪ್ಯ ಮಾಹಿತಿ ಬಗ್ಗೆ ಚಾಟ್ ಮಾಡಿದ್ದರೆ ಅದನ್ನು ಚಾಟ್ ಲಾಕ್ ಸಿಸ್ಟಂ ಮೂಲಕ ಲಾಕ್ ಮಾಡಿ ಹೈಡ್ ಮಾಡುವ ಆಯ್ಕೆ ಕೂಡ ಇದೆ. ಅದೇ ರೀತಿ ಅಪರಿಚಿತ ಕರೆಗಳ ಕಿರಿ ಕಿರಿ ತಪ್ಪಿಸಿಕೊಳ್ಳಲು ಕೂಡ ನಿಷ್ಕ್ರಿಯ ಮಾಡುವ ಆಯ್ಕೆ ಕೂಡ ಇರಲಿದೆ.

ಒಟ್ಟಾರೆಯಾಗಿ ವಾಟ್ಸ್ಆ್ಯಪ್ ಎನ್ನುವುದು ಧನಾತ್ಮಕವಾಗಿ ಪ್ರಯೋಜನವನ್ನು ಪಡೆಯುವುದಕ್ಕಿಂತಲೂ ಅಧಿಕವಾಗಿ ಅದು ಮಿಸ್ ಯೂಸ್ ಕೂಡ ಆಗುತ್ತಿದೆ‌. ಹಾಗಾಗಿ ನೀವು ಈ ಬಗ್ಗೆ ಕೂಡಲೆ ಜಾಗೃತಿ ವಹಿಸುವುದು ಅತ್ಯವಶ್ಯಕವಾಗಿದೆ. ವಾಟ್ಸ್ ಆ್ಯಪ್ ಎನ್ನುವುದು ನೀವು ಬಳಕೆ ಮಾಡಿದಂತೆ ಅದರಲ್ಲಿ ಅಡಗಿರುವ ಫೀಚರ್ಸ್ ಅನ್ನು ಅರಿಯುವುದು ಕೂಡ ಅತೀ ಅವಶ್ಯಕವಾಗಿದೆ.

advertisement

Leave A Reply

Your email address will not be published.