Karnataka Times
Trending Stories, Viral News, Gossips & Everything in Kannada

Moto G34 5G: 5,000mAh ಬ್ಯಾಟರಿ ಸಾಮರ್ಥ್ಯ, ಬೆಲೆ ಕೇವಲ 11,941 ರೂಪಾಯಿ, ಮೋಟೋ ಕಂಪನಿಯ ಅದ್ಭುತ 5G ಫೋನ್ ಬಿಡುಗಡೆ!

advertisement

ಇತ್ತೀಚಿನ ದಿನಗಳಲ್ಲಿ ಮೊಟೊರೊಲಾ ಕಂಪೆನಿಯ ಫೋನ್‌ಗಳಿಗೆ ಟೆಕ್‌ ವಲಯದಲ್ಲಿ ಭಾರಿ ಬೇಡಿಕೆಯಿದೆ. ಸ್ಟೈಲಿಶ್‌ ಪ್ಯಾನಲ್‌ ಡಿಸೈನ್‌, ಕ್ಯಾಮೆರಾ ಮಾಡ್ಯೂಲ್‌ಗಳಿಗೆ ಮೊಟೊರೊಲಾ ಫೋನ್‌ಗಳು ಪ್ರಸಿದ್ಧಿ ಪಡೆದುಕೊಂಡಿವೆ. ಇದೇ ಹಾದಿಯಲ್ಲಿ ಮೊಟೊರೊಲಾ ಕಂಪೆನಿ ಹೊಸದಾಗಿ ಮೋಟೋ G34 5G (Moto G34 5G) ಸ್ಮಾರ್ಟ್‌ಫೋನ್ ಅನಾವರಣಗೊಳಿಸಿದೆ. ಇದು ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಹೊಂದಿದೆ.

ಹೌದು, ಮೋಟೋ G34 5G ಸ್ಮಾರ್ಟ್‌ಫೋನ್ ಇದೀಗ ಅಧಿಕೃತವಾಗಿ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 6-ಸರಣಿ ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಹಾಗಾದ್ರೆ ಮೋಟೋ G34 5G ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ತಿಳಿದುಕೊಳ್ಳೋಣ.

ಮೋಟೋ G34 5G ಡಿಸ್‌ಪ್ಲೇ ವಿನ್ಯಾಸ ಹೇಗಿದೆ ?

ಮೋಟೋ G34 5G ಸ್ಮಾರ್ಟ್‌ಫೋನ್‌ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪಂಚ್-ಹೋಲ್ ವಿನ್ಯಾಸದೊಂದಿಗೆ ಫ್ಲಾಟ್ ಡಿಸ್‌ಪ್ಲೇ ಎನಿಸಿಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 1600×720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಮೋಟೋ G34 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌‌ ಸಾಮರ್ಥ್ಯದಲ್ಲಿದೆ. ಇದಲ್ಲದೆ 8GB ವರ್ಚುವಲ್ RAM ನಿಂದ ಬೆಂಬಲಿತವಾಗಿದೆ. ಇದರೊಂದಿಗೆ ಮೈಕ್ರೊ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

advertisement

ಕ್ಯಾಮೆರಾ ಸೆಟಪ್‌ ಏನಿದೆ?

ಮೋಟೋ G34 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ( Dual Rear Camera) ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು (Selfie Camera) ಸಹ ಪಡೆದುಕೊಂಡಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಷ್‌ (LED Flash)ಅನ್ನು ಸಹ ನೀಡಲಾಗಿದೆ.

ಬ್ಯಾಟರಿ ಹೇಗಿದೆ?

ಮೋಟೋ G34 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು USB-C ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ (Bluetooth), GPS, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ. ಇದಲ್ಲದೆ ಹೆಚ್ಚುವರಿ ಭದ್ರತೆಗಾಗಿ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ (Fingerprint Sensor) ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಆಡಿಯೊಫೈಲ್‌ಗಳಿಗಾಗಿ, ಸಾಧನವು ಡಾಲ್ಬಿ ಅಟ್ಮಾಸ್-ಟ್ಯೂನ್ಡ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ (Dolby Atmos Tune Dual Sterio Speaker) ಹೊಂದಿದೆ.

ಬೆಲೆ ಎಷ್ಟು?

ಇತ್ತೀಚೆಗೆ ಮೋಟೋ G34 5G ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಅನಾವರಣಗೊಂಡಿದೆ. ಆದರಿಂದ ಇದರ 8GB+128GB ರೂಪಾಂತರದ ಆಯ್ಕೆಯು ಚೀನಾದಲ್ಲಿ ಯುವಾನ್‌ 999 ಅಂದರೆ ಭಾರತದ ರೂಪಾಯಿಗಳ ಪ್ರಕಾರ ಅಂದಾಜು 11,941 ರೂಪಾಯಿ ಬೆಲೆಯನ್ನು ಹೊಂದಿದೆ. ಇದನ್ನು ಸ್ಟಾರ್ ಬ್ಲ್ಯಾಕ್ ಮತ್ತು ಸೀ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆಯಿದೆ.

advertisement

Leave A Reply

Your email address will not be published.