Karnataka Times
Trending Stories, Viral News, Gossips & Everything in Kannada

Jio: ಜಿಯೋದ ಅದ್ಭುತ ಕೊಡುಗೆ; ಈ ರಿಚಾರ್ಜ್ ಮಾಡಿದ್ರೆ 1,000 ರೂಪಾಯಿವರೆಗೆ ಸಿಗುತ್ತೆ ಕ್ಯಾಶ್ ಬ್ಯಾಕ್!

advertisement

ದೇಶದ ದೈತ್ಯ ಟೆಲಿಕಾಂ ಕಂಪನಿ ಆಗಿರುವ ರಿಲಯನ್ಸ್ ಜಿಯೋ (Jio) ತನ್ನ ಗ್ರಾಹಕರಿಗೆ ಸಾಕಷ್ಟು ಅತ್ಯುತ್ತಮವಾಗಿರುವಂತಹ ಆಕರ್ಷಕವಾದ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಾ ಬಂದಿದೆ. ಇದೀಗ 2024 ಹೊಸ ವರ್ಷ ಆರಂಭವಾಗಲಿದೆ. ಈ ವರ್ಷದ ಆರಂಭಕ್ಕೆ ಗ್ರಾಹಕರಿಗೆ ಬೆಸ್ಟ್ ಆಫರ್ ಘೋಷಿಸಿದೆ ರಿಲಯನ್ಸ್ ಜಿಯೋ!

ಹೊಸ ವರ್ಷಕ್ಕೆ ಹೊಸ ಕೊಡುಗೆ ಘೋಷಿಸಿದ ರಿಲಯನ್ಸ್ ಜಿಯೋ!

ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಜಿಯೋ (Jio) ತನ್ನ ಗ್ರಾಹಕರಿಗೆ ಅತಿ ಉತ್ತಮವಾಗಿರುವ ಆಫರ್ ಒಂದನ್ನು ಘೋಷಿಸಿದೆ. ನೀವೇನಾದ್ರೂ ಈ ಆಫರ್ ಪಡೆಯಬೇಕು ಅಂತ ಇದ್ರೆ ನಿಮ್ಮ ಜಿಯೋ ಸಿಮ್ ಅನ್ನು ಡಿಸೆಂಬರ್ 31ರ ಒಳಗೆ ರಿಚಾರ್ಜ್ ಮಾಡಬೇಕು. ಇಲ್ಲವಾದರೆ ಹೊಸ ವರ್ಷದ ಆರಂಭದಲ್ಲಿ ಸಿಗುವ ಈ ಆಫರ್ ನಿಮ್ಮ ಕೈ ಸೇರುವುದಿಲ್ಲ. ಹಾಗಾದ್ರೆ ಜಿಯೋದ ಹೊಸ ಆಫರ್ ಏನು? ಎಷ್ಟು ರಿಚಾರ್ಜ್ ಮಾಡಬೇಕು? ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ!

advertisement

1000 ರೂಪಾಯಿಗಳು ಕ್ಯಾಶ್ ಬ್ಯಾಕ್ ಸಿಗುತ್ತೆ!

ಜಿಯೋ ಕಂಪನಿಯ ಈ ಆಫರ್ ಆನ್ಲೈನ್ ಮೂಲಕ ರಿಚಾರ್ಜ್ ಮಾಡುವವರಿಗೆ ಮಾತ್ರ ಲಭ್ಯವಾಗಲಿದೆ. ನೀವು PhonePe, MobiKwik, Amazon pay ಮೊದಲಾದ ಅಪ್ಲಿಕೇಶನ್ ಗಳ ಮೂಲಕ ರಿಚಾರ್ಜ್ ಮಾಡಿದರೆ ಸಾವಿರ ರೂಪಾಯಿಗಳವರೆಗಿನ ಕ್ಯಾಶ್ ಬ್ಯಾಕ್ ಪಡೆಯಬಹುದು. ಯಾವ ಅಪ್ಲಿಕೇಶನ್ ನಲ್ಲಿ ರಿಚಾರ್ಜ್ ಮಾಡಿದರೆ ಎಷ್ಟು ಲಾಭ ಸಿಗುತ್ತೆ ನೋಡೋಣ.

  • ಪೇಟಿಎಂ ಮೊಬೈಲ್ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡಿಸಿದರೆ ಸಾವಿರ ರೂಪಾಯಿಗಳವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು ಇದರ ಜೊತೆಗೆ 1300 ರೂಪಾಯಿಗಳ ವಿಶೇಷ ಬಹುಮಾನ ಪಡೆಯುವ ಅವಕಾಶವೂ ಇದೆ. ಇದಕ್ಕಾಗಿ ನೀವು JIOPTM, JIODEC ಕೋಡ್ ಬಳಕೆ ಮಾಡಿ.
  • ಫೋನ್ ಪೇ ಪೇಮೆಂಟ್ ಆಪ್ ಮೂಲಕ ಜಿಯೋ ಸಿಮ್ ರಿಚಾರ್ಜ್ ಮಾಡಿದ್ರೆ 400 ಬಹುಮಾನ ಘೋಷಿಸಲಾಗಿದೆ. ಪ್ರತಿ ಮೊದಲ ಹಾಗೂ ಮೂರನೇ ರಿಚಾರ್ಜ್ಗೆ ಅನ್ವಯವಾಗುವ ಕೊಡುಗೆಯಾಗಿದೆ.
  • ಮೂರನೆಯದಾಗಿ TataNeu ಮೂಲಕ ಜಿಯೋ ಮೊಬೈಲ್ ರಿಚಾರ್ಜ್ ಮಾಡಿಸಿದರೆ 50NeuCoins ಪಡೆಯಬಹುದು.
  • ಮೊಬಿಕ್ವಿಕ್ ಜಿಪ್ ಆಫರ್ ನೋಡುವುದಾದರೆ ಒಂದು ಬಾರಿ ರಿಚಾರ್ಜ್‌ ಮಾಡಿದರೆ 25 ರೂಪಾಯಿಗಳ ಕ್ಯಾಶ್ಬ್ಯಾಕ್ ಸಿಗುತ್ತದೆ.
  • ಅದೇ ರೀತಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ ಅಮೆಜಾನ್ ಪೇನಲ್ಲಿ ರಿಚಾರ್ಜ್ ಮಾಡಿಸಿದರೆ 2% ಫ್ಲಾಟ್ ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ 5% ನಷ್ಟು ನಿಯೋ ಕಾಯಿನ್ ನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದರೆ ಪಡೆಯಬಹುದಾಗಿದೆ.
  • ಮೊಬಿಕ್ವಿಕ್ ಆಪ್ ನಲ್ಲಿ ರೀಚಾರ್ಜ್ ಮಾಡಿದ್ರೆ ಗರಿಷ್ಠ 250ಗಳನ್ನು ಪಡೆಯಬಹುದು ಹಾಗೂ ಅಮೆಜಾನ್ ಪೇ ಯಲ್ಲಿ ರೂ.250ಗಳನ್ನು ಜಿಯೋ ರಿಚಾರ್ಜ್ ಮೇಲೆ ಪಡೆಯಬಹುದು. ಹಾಗಾದ್ರೆ ಇನ್ಯಾಕೆ ತಡ ನೀವು ಜಿಯೋ ಗ್ರಾಹಕರಾಗಿದ್ರೆ ತಕ್ಷಣವೇ ನಿಮ್ಮ ಸಿಮ್ ರೀಚಾರ್ಜ್ ಮಾಡಿಕೊಳ್ಳಿ ಹಾಗೂ ಹೊಸ ವರ್ಷದ ಆರಂಭಕ್ಕೂ ಮೊದಲೇ ಅತ್ಯುತ್ತಮ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಿ.

advertisement

Leave A Reply

Your email address will not be published.