Karnataka Times
Trending Stories, Viral News, Gossips & Everything in Kannada

BYD Seagull: ಟಾಟಾ ನ್ಯಾನೋ ಕಾರಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಚೀನಿ ಕಾರು ಬಿ ವೈ ಡಿ ಸಿಗುಲ್, 450Km ಮೈಲೇಜ್!

advertisement

ಎಲೆಕ್ಟ್ರಿಕ ಮಾರುಕಟ್ಟೆಯಲ್ಲಿ ಈಗ ಪೈಪೋಟಿ ಮೊದಲಿನಿಗಿಂತ ಹೆಚ್ಚಾಗಿದೆ. ಎಲ್ಲಾ ಬ್ರಾಂಡ್ ಮೇಕರ್ಸ್ ಕೂಡ ತಮ್ಮ ಪ್ರಖ್ಯಾತ ಕಾರು ಮಾಡೆಲ್ ಗಳನ್ನೂ ಇವಿ ಆಯ್ಕೆಯೊಂದಿಗೆ ನೀಡುತ್ತಿದ್ದಾರೆ. ಸರ್ಕಾರದಿಂದ ಸಿಗುತ್ತಿರುವ ಪ್ರೋತ್ಸಾಹ ಮತ್ತು ಒಟ್ಟಾರೆ ಪರಿಸರದ ಬಗ್ಗೆ ಇರುವ ಕಾಳಜಿಯಿಂದ ಇ ವಿ ಕಾರುಗಳ ಬಳಕೆ ಹೆಚ್ಚಾಗುತ್ತದೆ.

ಎಲೆಕ್ಟ್ರಿಕ ಕಾರುಗಳು ಮಾರುಕಟ್ಟೆಗೆ ಬಂದ ಮೇಲೆ ಬಿವೈಡಿ ಎಂಬ ಚೈನಿಸ್ ಕಾರು ತಯಾರಕರ ಕಾರುಗಳನ್ನು ನೀವು ರಸ್ತೆಯ ಮೇಲೆ ನೋಡಿರಬಹುದು. ಈಗ ಇದೆ ಕಾರು ತಯಾರಕ ಬಿವೈಡಿ ಹೊಸ ಕಾರಿನೊಂದಿಗೆ ಭಾರತದ ಮಾರುಕಟ್ಟೆಯನ್ನು ಇ.ವಿ ಕಾರಿನ ಇನ್ನೊಂದು ಆಯ್ಕೆಯೊಂದಿಗೆ ತುಂಬಲಿದ್ದಾರೆ.
ಕೇವಲ ಭಾರತದಲ್ಲಷ್ಟೇ ಅಲ್ಲದೆ ಬೇರೆ ದೇಶಗಳಲ್ಲೂ ಈ ಕಾರು ಲಾಂಚ್ ಆಗಲಿದೆ. ಹಾಗಾದರೆ ಲಾಂಚ್ ಆಗುತ್ತಿರುವ ಕಾರು ಯಾವುದು, ಅದರಲ್ಲಿರುವ ಫೀಚರ್ಸ್ ಏನು, ಎಷ್ಟು ಕಿಲೋಮೀಟರ್ ಒಂದೇ ಚಾರ್ಜ್ ನಲ್ಲಿ ಓಡುತ್ತದೆ, ಬೆಲೆ ಏನಿರಬಹುದು ಇಂತಹ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಮುಂದೆ ಉತ್ತರ ನೀಡಲಿದ್ದೇವೆ.

ಬಿವೈಡಿ ಸೀಗುಲ್ ಕಾರ್ ಡಿಸೈನ್ ಮತ್ತು ಫೀಚರ್ಸ್

ಬಿ ವೈ ಡಿ ಸಿಗುಲ್ (BYD Seagull)ಇವಿ ಕಾರು ಬಹಳ ಕಾಂಪ್ಯಾಕ್ಟ್ ಎನ್ನಬಹುದಾದ ಡಿಸೈನ್ ಮಾದರಿಯಲ್ಲಿ ಲಾಂಚ್ ಆಗಲಿದೆ. ಇದರ ಡಿಸೈನ್ ಕೂಡ ಬಹಳ ಸ್ಟೈಲಿಶ್ ಆಗಲಿದೆ. 3.0 ಎನ್ನುವ ಪ್ಲ್ಯಾಟ್ ಫಾರ್ಮ್ ಮೇಲೆ ಈ ಕಾರನ್ನು ಬಿಲ್ಡ್ ಮಾಡಲಾಗಿದೆ. ಈ ಕಾರಿನ ಇತರ ಫೀಚರ್ಸ್ ಎಂದರೆ ಡಿಜಿಟಲ್ ಗ್ರಿಲ್, ಎಲ್ಇಡಿ ಲೈಟ್ಸ್, ವಯರ್ಲೆಸ್ ಫೋನ್ ಚಾರ್ಜಿಂಗ್ (Wireless Charging),ಅಡ್ವಾನ್ಸ್ಡ್ ಡ್ರೈವರ್ (Advanced Driver)ಫೀಚರ್ಸ್ ಇತ್ಯಾದಿ. ಈ ಕಾರಿನಲ್ಲಿ ಇರುವ ಮತ್ತೊಂದು ವಿಶೇಷತೆ ಎಂದರೆ 360° ತಿರುಗಬಹುದಾದ ಕ್ಯಾಮೆರಾ ಇದೆ ಟಚ್ ಸ್ಕ್ರೀನ್ ಡಿಸ್ಪ್ಲೇ ಕೂಡ ಈ ಕಾರಿನಲ್ಲಿ ಸಿಗಲಿದೆ.

advertisement

ಪವರ್ ಮತ್ತು ರೇಂಜ್

ಬಿವೈಡಿ ಸೀಗುಲ್ ಕಾರು 30 ಕಿಲೋವ್ಯಾಟ್ ಮತ್ತು 38 ಕಿಲೋವ್ಯಾಟ್ ಮೋಟರ್ ಗಳೊಂದಿಗೆ ಬರಲಿದೆ. ಇವುಗಳಲ್ಲಿ 72ಪಿಎಸ್ ಮತ್ತು 100 ಪಿಎಸ್ ಎಲೆಕ್ಟ್ರಿಕ್ ಮೋಟರ್ ಇರಲಿದೆ. 30 ಕಿಲೋವ್ಯಾಟ್ ಸಾಮರ್ಥ್ಯದ ಕಾರು ಒಂದೇ ಚಾರ್ಜ್ ನಲ್ಲಿ 305 ಕಿಲೋಮೀಟರ್ ರೇಂಜ್ ಅನ್ನು ಕೊಟ್ಟರೆ 38 ಕಿಲೋಮೀಟರ್ ಸಾಮರ್ಥ್ಯದ ಕಾರು 450 ಕಿಲೋಮೀಟರ್ ರೇಂಜ್ ಅನ್ನು ಕೊಡಲಿದೆ ಎಂದು ತಿಳಿದುಬಂದಿದೆ. ಬಿವೈಡಿ ಯ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಕಾರು ಟಚ್ ಸ್ಕ್ರೀನ್ ಡಿಜಿಟಲ್ ಡ್ರೈವರ್ ಇನ್ಫಾರ್ಮಶನ್ ಸಿಸ್ಟಮ್. ಮತ್ತು ವಯರ್ಲೆಸ್ ಚಾರ್ಜಿಂಗ್ (Wireless Charging) ನಂತಹ ಫೀಚರ್ಸ್ ಗಳನ್ನು ಕೂಡ ಹೊಂದಲಿದೆ.

ಬೆಲೆ ಮತ್ತು ಕಾಂಪಿಟೇಷನ್

ಈ ಕಾರಿನ ಬೆಲೆ 10 ಲಕ್ಷಗಳ ಆಸು ಪಾಸಿನಲ್ಲಿ ಇರಲಿದೆ ಎಂದು ಊಹಿಸಲಾಗಿದೆ. 2024 ರ ಮೊದಲಾರ್ಧದಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಈ ಕಾರು ಟಾಟಾ ಟಿಯಾಗೊ ಇವಿ, ಸಿಟ್ರಿಯಾನ್ ಇ.ಸಿ.3 ಮತ್ತು ಎಂಜಿ ಕಾಮೆಟ್ ನಂತಹ ಕಾರುಗಳಿಗೆ ಪೈಪೋಟಿ ನೀಡಲಿದೆ.

advertisement

Leave A Reply

Your email address will not be published.