Karnataka Times
Trending Stories, Viral News, Gossips & Everything in Kannada

BSNL: ಕಡಿಮೆ ಬೆಲೆಗೆ 150Mbps ವೇಗದಲ್ಲಿ 2000GB ವರೆಗೆ ಡೇಟಾ ಹಾಗೂ ಉಚಿತ OTT ಅಪ್ಲಿಕೇಶನ್‌ ಕೊಡುತ್ತಿದೆ ಈ ಕಂಪನಿ!

advertisement

ಇತ್ತೀಚೆಗಿನ ದಿನಗಳಲ್ಲಿ ವಿವಿಧ ವಿನ್ಯಾಸ ಹಾಗೂ ವಿಶೇಷತೆಗಳನ್ನು ಒಳಗೊಂಡ ಸ್ಮಾರ್ಟ್ ಫೋನ್ (Smart Phone) ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗುತ್ತಿದ್ದಂತೆ, ಬೋರ್ಡ್ ಬ್ಯಾಂಡ್ ಸಂಪರ್ಕಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಕಂಪನಿಗಳು ಬಳಕೆದಾರರನ್ನು ಆಕರ್ಷಿಸಲು ಉತ್ತಮ ಪ್ರಯೋಜನಗಳೊಂದಿಗೆ ಫೈಬರ್ ಯೋಜನೆ (Fiber Plan) ಸಹ ನೀಡುತ್ತಿವೆ.

ಬಿಎಸ್‌ಎನ್‌ಎಲ್ (BSNL) ಕೂಡ ಈ ರೇಸ್‌ನಲ್ಲಿ ಖಾಸಗಿ ಕಂಪನಿಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. BSNL ನ ಭಾರತ್ ಫೈಬರ್‌ನಲ್ಲಿ ಹಲವು ಯೋಜನೆಗಳು ಲಭ್ಯವಿದ್ದು, ಅದರಲ್ಲಿ 999 ರೂ ಸೂಪರ್ ಸ್ಟಾರ್ ಪ್ರೀಮಿಯಂ ಯೋಜನೆ ಕೂಡ ಒಂದಾಗಿದೆ. ಅಂದಹಾಗೆ, BSNL ನ ಈ ಯೋಜನೆಯು ಜಿಯೋ ಮತ್ತು ಏರ್‌ಟೆಲ್ ಫೈಬರ್ ಪ್ಲಾನ್ ರೂ 999 ರೊಂದಿಗೆ ಸ್ಪರ್ಧೆಯಲ್ಲಿದ್ದು, ಹಾಗಾದ್ರೆ ಈ ಯೋಜನೆಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀವಿಲ್ಲಿ ಪಡೆದುಕೊಳ್ಳಿ.

BSNL Fiber Rs 999 Plan:

 

 

BSNL ಫೈಬರ್‌ (BSNL Fiber) ನ ಈ ಯೋಜನೆಯಲ್ಲಿ, ಬಳಕೆದಾರರು 150Mbps ವೇಗದಲ್ಲಿ 2000GB ವರೆಗೆ ಡೇಟಾವನ್ನು ಪಡೆಯಬಹುದು. ಡೇಟಾ ಮಿತಿ ಮುಗಿದ ನಂತರ, ಯೋಜನೆಯಲ್ಲಿ ನೀಡಲಾದ ಇಂಟರ್ನೆಟ್ ವೇಗವು 10Mbps ಗೆ ಕಡಿಮೆಯಾಗುತ್ತದೆ. ಅನಿಯಮಿತ ಸ್ಥಳೀಯ ಮತ್ತು STD ಕರೆಗಳು, ಕಂಪನಿಯು Disney+ Hotstar, Sony Liv ಮತ್ತು ZEE5 ಸೇರಿದಂತೆ ಹಲವು OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.

advertisement

Jio Fiber Rs 999 Plan:

 

 

ಜಿಯೋ ಕಂಪೆನಿ (Jio Company) ಯ ಈ ಪ್ರಿಪೇಯ್ಡ್ ಫೈಬರ್ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಕಂಪನಿಯು 150Mbps ವೇಗದಲ್ಲಿ ಅನಿಯಮಿತ ಡೇಟಾ, ಅನಿಯಮಿತ ಧ್ವನಿ ಕರೆಗಳು ಹಾಗೂ ಒಟ್ಟು 14 OTT ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯು ಲಭ್ಯವಿದೆ. ಇದು Amazon Prime Video, Disney + Hotstar, Sony Liv, Zee5 ಮತ್ತು Jio ಸಿನಿಮಾವನ್ನು ಸಹ ಒಳಗೊಂಡಿದ್ದು, ಗ್ರಾಹಕರಿಗೆ ಈ ಅನುಕೂಲವಾಗುವಂತಿದೆ.

Airtel Xstream Rs 999 Plan:

 

 

ಏರ್‌ಟೆಲ್‌ನ ಈ ಯೋಜನೆಯಲ್ಲಿ 200Mbps ವೇಗದಲ್ಲಿ ಅನಿಯಮಿತ ಡೇಟಾವು ಲಭ್ಯವಿದೆ. ಅನಿಯಮಿತ ಕರೆಗಳು ಹಾಗೂ ಅಮೆಜಾನ್ ಪ್ರೈಮ್ ವಿಡಿಯೋ, Disney + Hotstar, Xstream Premium Pack ಹಾಗೂ Wink Music ನ ಉಚಿತ ಚಂದಾದಾರಿಕೆಯೊಂದಿಗೆ ಗ್ರಾಹಕರಿಗೆ ಈ ಯೋಜನೆಯು ಲಭ್ಯವಿದೆ.

advertisement

Leave A Reply

Your email address will not be published.