Karnataka Times
Trending Stories, Viral News, Gossips & Everything in Kannada

iVOOMI: ಕೇವಲ 2,999 ರೂಪಾಯಿ ಇದ್ದರೆ ಸಾಕು, ಈ ಕಂಪನಿಯ ಹಳೆಯ ಸ್ಕೂಟರ್ ಅನ್ನು ಹೊಸದಾಗಿ ಮಾಡಬಹುದು!

advertisement

ವಾಹನಗಳು ಇಂದು ನಗರ ವಾಸಿಗಳಿಗೆ ಬಹಳ ಅಗತ್ಯವಾಗಿದೆ. ಹಾಗಾಗಿ ಒಬ್ಬೊಬ್ಬರ ಮನೆಯಲ್ಲಿಯೂ ಮೂರು ನಾಲ್ಕು ವಾಹನ ಇರುತ್ತದೆ. ಕಚೇರಿ, ಆಸ್ಪತ್ರೆ, ಶಾಪಿಂಗ್, ಮದುವೆ ಸಮಾರಂಭಕ್ಕೆ ಇಲ್ಲವೇ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜು ಹೋಗಲು ಕೂಡ ವಾಹನವನ್ನು ಅವಲಂಬನೆ ಮಾಡುತ್ತಾರೆ. ಅದರಲ್ಲೂ ಸ್ಕೂಟರ್ ಬೈಕ್ ಗಳಿಗಂತೂ ಅಧಿಕ ಬೇಡಿಕೆ ಇದೆ ಎಂದು ಹೇಳಬಹುದು. ಸ್ಕೂಟರ್ ಹಾಗೂ ಬೈಕ್ ಗಳು‌ ಬಜೆಟ್ ಫ್ರೆಂಡ್ಲಿ ಆಗಿರುವ ಎಲೆಕ್ಟ್ರಾನಿಕ್ ಸ್ಕೂಟರ್ ಒಂದು ಮರು ವಿನ್ಯಾಸದ ಅಪ್ ಗ್ರೇಡ್ ಹೊಂದಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

2,999ರೂಪಾಯಿಗೆ ಬಂಪರ್ ಕೊಡುಗೆ

ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನದ ತಯಾರಿಕ ಕಂಪೆನಿಯು iVOOMI ಕಂಪೆನಿಯು ತನ್ನ ವಾಹನದ ವ್ಯವಸ್ಥೆಯನ್ನು ಅಪ್ ಗ್ರೇಡ್ ಪ್ರೋಗಾಂ ಮಾಡುವ ಬಗ್ಗೆ ಘೋಷಿಸಿದೆ. ಈ ಮೂಲಕ ಕಂಪೆನಿಯ ಅಸ್ತಿತ್ವದಲ್ಲಿರುವ ಈ ಸ್ಕೂಟರ್ ಅನ್ನು ಹೊಸ ವೈಶಿಷ್ಟ್ಯಗಳನ್ನು ಅನ್ ಲಾಕ್ ಮಾಡುವ ಆಯ್ಕೆಯನ್ನು ಸಹ ನೀಡುತ್ತಿದೆ. ಅದಕ್ಕೆ 2,999ರೂಪಾಯಿ ಮಾತ್ರವೇ ಪಡೆಯಲಾಗುವುದು. ಈ ಮೂಲಕ ಇತ್ತೀಚಿನ ಕೆಲ ತಂತ್ರಜ್ಞಾನವನ್ನು ಪಡೆಯಲು ಹಳೆ ಇವಿ ಗಳಿಗೆ ಈ ಉಪಾಯ ಬಹಳ ಸಹಕಾರಿ ಆಗಲಿದೆ.

ಯಾವೆಲ್ಲ ಸ್ಕೂಟರ್ ಇದೆ?

ivoomi ಯ ಎಲೆಕ್ಟ್ರಾನಿಕ್ ಸ್ಕೂಟರ್ (Electric Scooter)  ಶ್ರೇಣಿಯಲ್ಲಿ ಜೀಟ್ ಎಕ್ಸ್ (Meet x) , S1, S1 2.0 ಮಾದರಿಗಳಿಗೆ ಈ ಒಂದು ವಿಶೇಷ ಆಯ್ಕೆ ನೀಡಲಾಗಿದೆ. Jeta x ಹಾಗೂ S1 ಕಾರು ಈಗ ಒಂದೆ ಚಾರ್ಜಿಂಗ್ ನಲ್ಲಿ ಗಂಟೆಗೆ 100 ರಿಂದ 110 km ಪ್ರಯಾಣಿಸಲಿದೆ. Jeta x ಬೆಲೆ 99,999, ಬೆಲೆ ಆಗಿದ್ದು ಈಗ 84,999 ರೂಪಾಯಿ ಇದೆ‌. ಹಾಗಾಗಿ ಈ ವಾಹನದ ಹಳೆ ಮಾಡೆಲ್ ಇದ್ದರೆ ಇದಕ್ಕೆ ಇತ್ತೀಚಿನ ಕೆಲವು ನವೀಕರಣವನ್ನು, ತಂತ್ರಜ್ಞಾನವನ್ನು ಈಗಾಗಲೇ ಚಾಲ್ತಿಯಲ್ಲಿರುವ ವಾಹನಗಳಿಗೆ ಅಳವಡಿಕೆ ಮಾಡಿಕೊಳ್ಳಬಹುದು. ಹಾಗಾಗಿ ಹೊಸ ವಾಹನಕ್ಕೆ ಮತ್ತೆ ಪುನಃ ಹಣ ವ್ಯಯಿಸುವ ಅಗತ್ಯ ಇಲ್ಲದೆ ಇದ್ದ ಇಲೆಕ್ಟ್ರಾನಿಕ್ ವಾಹನಕ್ಕೆ ನೂತನ ರೂಪ ನೀಡಿದಂತಾಗುವುದು. ಈ ಬಗ್ಗೆ ಇತ್ತೀಚೆಗಷ್ಟೇ ಕಂಪೆನಿಯ ಸಿಇಒ ಆದ ಅಶ್ವಿನ್ ಬಂಡಾರಿ ಅವರು ಮಾತನಾಡಿದ್ದು, ಹೊಸ ಯುಗಕ್ಕೆ ತಕ್ಕಂತ ಕೆಲ ಅಗತ್ಯ ಬದಲಾವಣೆಗೆ ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

advertisement

ಯಾವೆಲ್ಲ ಹೊಸ ಆಯ್ಕೆ ಸಿಗಲಿದೆ?

ಇತ್ತೀಚಿನ ಹೊಸ ಫೀಚರ್ಸ್ ಗಳು ಸಿಗಲಿದೆ ಅಂದರೆ ivoomi ನಲ್ಲಿ ವಾಹನದ ಅಪ್ ಗ್ರೇಡ್ ಪ್ರೋಗ್ರಾಂ ನಲ್ಲಿ ಬ್ಲೂಟುತ್ ಸಂಪರ್ಕ, ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಕೀ ಇಲ್ಲದೆ ಸ್ಟಾರ್ಟ್ ಮತ್ತು ಅನ್ ಲಾಕ್ ಮಾಡುವುದು, ಮೊಬೈಲ್ ಅಪ್ಲಿಕೇಶನ್ ಇಂಟಿಗ್ರೇಶನ್, ಸ್ಟಾರ್ಟ್ ಸೆಕ್ಯೂರಿಟಿ ಇನ್ನು ಅಧಿಕ ವಿಧವಾದ ಆಯ್ಕೆ ಲಭ್ಯವಾಗಲಿದೆ. 4G, 5G ಸಾಮರ್ಥ್ಯ ದ ಸ್ಟ್ಯಾಂಡರ್ಡ್ ಸಿಗಲಿದೆ.

ಇಲ್ಲಿಗೆ ಭೇಟಿ ನೀಡಿ

ಈ ವ್ಯವಸ್ಥೆಯನ್ನು ನಿಮ್ಮ ಹಳೆ ಸ್ಕೂಟರ್ ಗೆ ಅಳವಡಿಸುವ ಮನಸ್ಸು ನಿಮಗೆ ಇದ್ದರೆ ಹತ್ತಿರದ ಡೀಲರ್ ಶಿಪ್ ಗೆ ಭೇಟಿ ನೀಡಿ. ಅವರು ನಿಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಇದು ತಾತ್ಕಾಲಿಕವೇ ಶಾಶ್ಚತವೇ ಎಂಬ ಬಗ್ಗೆ ಕಂಪೆನಿ ಅಧಿಕೃತ ಮಾಹಿತಿ ನೀಡಿಲ್ಲ. ಮುಂಬರುವ ವಾಹನಗಳಿಗೆ ಇನ್ ಬಿಲ್ಟ್ ಆಗಿ ಎಲ್ಲ ಅಭಿವೃದ್ಧಿ ಫೀಚರ್ಸ್ ಗಳು ಒಟ್ಟಿಗೆ ದೊರೆಯಲಿದೆ.

advertisement

Leave A Reply

Your email address will not be published.