Karnataka Times
Trending Stories, Viral News, Gossips & Everything in Kannada

Raptee Bike: ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಹೈ ವೋಲ್ಟೇಜ್ ಎಲೆಕ್ಟ್ರಿಕ್ ಬೈಕ್! ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ.

advertisement

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ಜನ ಬಳಸುತ್ತಿದ್ದಾರೆ. ಇದಕ್ಕೆ ನಮ್ಮ ದೇಶ ಕೂಡ ಹೊರತಾಗಿಲ್ಲ. ತೈಲ ಬೆಲೆಗಳು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಯನ್ನು ಸರ್ಕಾರವು ಕೂಡ ಬೆಂಬಲಿಸುತ್ತದೆ. ಹಾಗಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನಬಹುದು. ಓಲಾ (OLA), ಹೀರೋ (Hero), ಎಥರ್ (Ather), ಬಜಾಜ್ (Bajaj) ಕಂಪನಿಗಳು ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇದ್ರೆ, ಇಂತಹ ಕಂಪನಿಗಳಿಗೆ ಸ್ಟಾರ್ಟ್ ಅಪ್ ಕಂಪನಿಗಳು ನಿಜವಾದ ಸ್ಪರ್ಧೆ ಒಡ್ಡಿವೆ.

ಹೊಸ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮಾರುಕಟ್ಟೆಗೆ!

ಚೆನ್ನೈ ಮೂಲದ ರಾಪ್ಟಿ (Raptee) ಎನ್ನುವ ಕಂಪನಿ, ಸ್ಟಾರ್ಟ್ ಅಪ್ ಕಂಪನಿ ಆಗಿದ್ದು, ತಮಿಳುನಾಡಿನ ಗ್ಲೋಬಲ್ ಇನ್ವೆಸ್ಟರ್ಸ್ ಎಲೆಕ್ಟ್ರಾನಿಕ್ ಮೋಟರ್ ಸೈಕಲ್ ಪ್ರದರ್ಶನ ಗೊಳಿಸಿದೆ. ಇದು ವಿಶ್ವದ ಮೊದಲ ಹೈ ವೋಲ್ಟೇಜ್ ಎಲೆಕ್ಟ್ರಿಕ್ ಬೈಕ್ ಎಂದು ಕಂಪನಿ ಹೇಳಿಕೊಂಡಿದೆ.

ಚೆನ್ನೈನಲ್ಲಿ ಈ ಕಂಪನಿ ತಮ್ಮ ಬೈಕ್ ತಯಾರಿಕೆಗಾಗಿ ನಾಲ್ಕು ಎಕರೆ ಭೂಮಿ ಖರೀದಿಸಿದೆ ಎನ್ನಲಾಗಿದೆ. ಇದಕ್ಕಾಗಿ 85 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಯೂನಿಟ್ ತಯಾರಿಸುವ ಗುರಿ ಹೊಂದಿದೆ ಈ ಸ್ಟಾರ್ಟ್ ಅಪ್ ಕಂಪನಿ!

ರಾಪ್ಟಿ ಕಂಪನಿ ಹೊಸ ಬೈಕ್ ಬಿಡುಗಡೆ!

ರಾಪ್ಟಿ ಕಂಪನಿ ತನ್ನ ಯೂನಿಟ್ ನಲ್ಲಿ ಬ್ಯಾಟರಿ ಕೂಡ ಉತ್ಪಾದಿಸುತ್ತಿದೆ. ರಾಪ್ಟಿ ಕಂಪನಿ ಬಿಡುಗಡೆ ಮಾಡಿರುವ ಬೈಕ್ ಪಾರದರ್ಶಕವಾಗಿದ್ದು ಒಳಭಾಗದಲ್ಲಿ ಇರುವ ಇಂಜಿನ್ ಗಳು ಕೂಡ ಸ್ಪಷ್ಟವಾಗಿ ಕಾಣುತ್ತವೆ. ಹಾಗಾಗಿ ಇತರ ಎಲೆಕ್ಟ್ರಿಕ್ ಬೈಕ್ ಗಳಿಗಿಂತಲೂ ಬಹಳ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಈ ಬೈಕ್ ಕಾಣಿಸುತ್ತದೆ.

advertisement

ಅಷ್ಟೇ ಅಲ್ಲದೆ ಈ ಎಲೆಕ್ಟ್ರಿಕ್ ಬೈಕ್, ಸ್ಪೋರ್ಟಿ ಲುಕ್ ಹೊಂದಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಬೈಕ್ ನಲ್ಲಿ ಚಾರ್ಜಿಂಗ್ ಪೋರ್ಟ್ ಇಂಟರ್ನಲ್ ಟ್ಯಾಂಕ್ ಮೇಲೆ ಅಳವಡಿಸಲಾಗಿದೆ.

ರಾಪ್ಟಿ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್!

ಗರಿಷ್ಠ 135 km ವ್ಯಾಪ್ತಿಯನ್ನು ಕೊಡಬಲ್ಲ ಈ ಹೊಸ ಎಲೆಕ್ಟ್ರಿಕ್ ಬೈಕ್ ಒಂದು ಚಾರ್ಜ್ ಗೆ 150 ಕಿಮೀ ಮೈಲೇಜ್ ನೀಡಬಲ್ಲದು. ಯಾವ ಇಂಧನ ಮೋಟಾರ್ ಸೈಕಲ್ ಗಳಿಗೂ ಕಡಿಮೆ ಇಲ್ಲದಂತೆ ಕೇವಲ 3.5 ಸೆಕೆಂಡ್ಗಳಲ್ಲಿ ಗಂಟೆಗೆ 0 – 60 ಕಿಲೋಮೀಟರ್ ವರೆಗೆ ವೇಗ ಪಡೆದುಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

CCS2 ಚಾರ್ಜಿಂಗ್ ಸ್ಟೇಷನ್ ನಲ್ಲಿ ಈ ಮೋಟಾರ್ ಸೈಕಲ್ ಅನ್ನು ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಪ್ರಯಾಣಿಸಬಹುದು. ನಿಮಿಷಗಳಲ್ಲಿ 80% ವರೆಗೆ ಚಾರ್ಜ್ ಮಾಡಬಹುದು.

ರಾಪ್ಟಿ ಕಂಪನಿ 2019 ರಿಂದಲೂ ಮೋಟರ್ ಸೈಕಲ್ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದು, ಬಿಡುಗಡೆ ಆಗಲಿರುವ ಹೊಸ ಮೋಟಾರ್ ಎಲೆಕ್ಟ್ರಿಕ್ ಸೈಕಲ್ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.

advertisement

Leave A Reply

Your email address will not be published.