Karnataka Times
Trending Stories, Viral News, Gossips & Everything in Kannada

Electric Vehicle: ಹಳೆ ವಾಹನ ಬದಲಾವಣೆ ಮಾಡಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!

advertisement

ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಲೆಕ್ಟ್ರಾನಿಕ್ ವಾಹನಗಳು (Electric Vehicles) ಇತ್ತೀಚಿನ ದಿನಗಳಲ್ಲಿ ಹೆಚ್ಚು ಫೇಮಸ್ ಆಗುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ತೈಲದ ಬೆಲೆಗಳಿಂದಾಗಿ ಈ ಎಲೆಕ್ಟ್ರಿಕ್ ವಾಹನಗಳ ಆಯ್ಕೆಯೇ ಉತ್ತಮ ಎಂದು ಗ್ರಾಹಕರಿಗೆ ಅನಿಸಿಬಿಟ್ಟಿದೆ. ಇಲೆಕ್ಟ್ರಿಕ್ ವಾಹನ ಖರೀದಿ ಮಾಡಿದ್ರೆ ತೆರಿಗೆ ರಿಯಾಯಿತಿ ಯೊಂದಿಗೆ ಹೆಚ್ಚಿನ ಲಾಭವನ್ನು ಸಹ ಪಡೆಯಬಹುದು‌

ಈ ಅವಕಾಶ ನೀಡಿದೆ:

ಇದೀಗ ಎಲೆಕ್ಟ್ರಿಕ್ ವಾಹನಗಳ‌ ಖರೀದಿಗೆ ಬೆಂಬಲಿಸುವ ನಿಟ್ಟಿನಲ್ಲಿ ಸ್ಕೂಟರ್ ಖರೀದಿಗೆ 5000 ರೂ.ವರೆಗೆ, ಅದೇ ರೀತಿ ಕಾರು ಖರೀದಿ ಮಾಡಲು ರೂ 50,000 ವಾಹನ ತೆರಿಗೆ ವಿನಾಯಿತಿ ನೀಡಲು ಸರಕಾರ ಮುಂದಾಗಿದೆ.

 

ಹೆಚ್ಚಿದ ಆವಿಷ್ಕಾರ:

advertisement

ಕರ್ನಾಟಕದಲ್ಲೂ ನಿಧಾನವಾಗಿ ಎಲೆಕ್ಟ್ರಿಕ್‌ ವಾಹನಗಳ (Electric Vehicle) ಬಳಕೆ ಏರಿಕೆ ಗತಿಯಲ್ಲಿ ಸಾಗುತ್ತಿದೆ.ಬ್ಯಾಟರಿ ಚಾಲಿತ ವಾಹನಗಳಿಂದ ಹಣ ಮತ್ತು ಇಂಧನ ಉಳಿತಾಯಗಳೆರಡೂ ಆಗುತ್ತದೆ. ಅದೇ ರೀತಿ ಈ ಎಲೆಕ್ಟ್ರಿಕ್ ವಾಹನದ ಆವಿಷ್ಕಾರ ಕೂಡ ಹೆಚ್ಚಾಗಿ ನಡೆಯುತ್ತಿದ್ದು ಎಲೆಕ್ಟ್ರಿಕ್‌ ಕಾರು (Electric Car), ಬೈಕ್‌ (Bike), ಬಸ್‌ (Bus), ಟ್ರ್ಯಾಕ್ಟರ್‌ಗಳು (Tractor), ಸರಕು ಸಾಗಣೆ ಆಟೋಗಳು ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಇಷ್ಟು ವಿನಾಯಿತಿ ಇದೆ:

ವಾಹನ ಸ್ಕ್ರಾಪಿಂಗ್ ಮಾಡಿ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಎರಡು ಚಕ್ರದ ವಾಹನಕ್ಕೆ 1 ಸಾವಿರದಿಂದ 5000 ರೂ.ವರೆಗೆ, ಅದೇ ರೀತಿ 4 ಚಕ್ರದ ವಾಹನಗಳಿಗೆ 10,000 ದಿಂದ 50,000 ರೂ.ವರೆಗೆ, ತೆರಿಗೆ ಮೊತ್ತದ ಶೇಕಡ 10ರಷ್ಟು ತೆರಿಗೆ ವಿನಾಯಿತಿ ಇದೆ.

ಸ್ಮಾರ್ಟ್ ಪೋನ್ ಆಪ್ಲಿಕೇಷನ್:

ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸಲು ಅದೇ ರೀತಿ ವಾಹನ ಪ್ರೀಯರನ್ನು ಸೆಳೆಯಲು ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು ಕೂಡ ಬಳಕೆಯಲ್ಲಿವೆ. ಈ ಆಪ್‌ಗಳು ಕಡಿಮೆ ಶುಲ್ಕದಲ್ಲಿ ಚಾರ್ಜಿಂಗ್ ಮಾಡಲು ಕಾರಿನ ಚಟುವಟಿಕೆಗಳ ಮೇಲೆ ನಿಯಂತ್ರಣ ಇಡಲು ಸಹಕಾರಿ ಯಾಗುತ್ತದೆ.

ಸಹಾಯಧನ:

ಇತರ ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಗ್ರಾಹಕರಿಗೆ ಸಹಾಯಧನ ಕೂಡ ನೀಡಲಾಗುತ್ತದೆ.‌ ಗುಜರಾತ್‌, ಹೊಸದಿಲ್ಲಿ, ಮಹಾರಾಷ್ಟ್ರ ಸರಕಾರಗಳು ವಾಹನ ಖರೀದಿಸುವವರಿಗೆ ಅಧಿಕ ಸಹಾಯಧನ ನೀಡುತ್ತವೆ. ಅದೇ ರೀತಿ ಚಾರ್ಜಿಂಗ್‌ ಘಟಕಗಳನ್ನು ಕೂಡ ಹತ್ತಿರದ ಸ್ಥಳದಲ್ಲಿ ಅಳವಡಿಸಲಾಗಿದೆ.

advertisement

Leave A Reply

Your email address will not be published.