Karnataka Times
Trending Stories, Viral News, Gossips & Everything in Kannada

Automatic Cars: ಕೈಗೆಟುಕುವ ಬೆಲೆಯಲ್ಲಿ ಅಟೋಮೇಟಿಕ್ ಕಾರುಗಳು, 6–8 ಲಕ್ಷ ರೂಪಾಯಿಗಳ ಆಯ್ಕೆಗಳು!

advertisement

ಕಾರು ಮಾರುಕಟ್ಟೆಯಲ್ಲಿ ಇತ್ತೀಚಿಗೆ ಆಟೋಮೆಟಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಮೊದಲಿಗೆ ಹೋಲಿಸಿದರೆ ಈಗ ಆಟೋಮೆಟಿಕ್ ಕಾರುಗಳು (Automatic Cars) ನೀಡುವ ಮೈಲೇಜ್ ಮತ್ತು ಕಡಿಮೆಯಾದ ಮ್ಯಾನುವಲ್ – ಆಟೋಮೇಟಿಕ್ ಬೆಲೆಗಳ ವ್ಯತ್ಯಾಸ ಹೆಚ್ಚಿನ ಜನ ಆಟೋಮೆಟಿಕ್ ಕಾರಿನತ್ತ ಒಲವು ತೋರಲು ಕಾರಣವಾಗಿದೆ.

ಆಟೋಮೆಟಿಕ್ ಕಾರುಗಳ ಕ್ಷೇತ್ರದಲ್ಲೂ ಈಗ ಮೊದಲನೇ ಗಿಂತ ಹೆಚ್ಚು ಕಾಂಪಿಟೇಶನ್ ಅನ್ನು ಕಾಣಬಹುದು. ಎಲ್ಲಾ ಕಾರುಗಳ ಮಾಡೆಲ್ ಗಳಲ್ಲಿಯೂ ಆಟೋಮೆಟಿಕ್ ಆಯ್ಕೆಗಳು ಈಗ ಸಾಮಾನ್ಯ ಆಗಿದೆ. ನೀವು ಒಂದು ಆಟೋಮೆಟಿಕ್ ಕಾರು (Automatic Cars) ಖರೀದಿಸುವ ಯೋಜನೆಯಲ್ಲಿ ಇದ್ದು ನಿಮ್ಮ ಬಜೆಟ್ ಆರರಿಂದ ಎಂಟು ಲಕ್ಷ ಆಗಿದ್ದಲ್ಲಿ ನಿಮ್ಮ ಮುಂದಿರುವ ಆಯ್ಕೆಗಳು ಯಾವುದು ಮತ್ತು ಯಾವ ಕಾರು ಯಾವ ವಿಷಯದಲ್ಲಿ ಚೆನ್ನಾಗಿದೆ ಎನ್ನುವುದನ್ನು ಇವತ್ತು ಹೇಳಲಿದ್ದೇವೆ.

Maruti Suzuki Wagon R:

 

 

ಮಾರುತಿ ಸುಜುಕಿ ಕಾರುಗಳ ರೇಂಜ್ನಲ್ಲಿ ಸಕ್ಸಸ್ಫುಲ್ ಆದ ಕಾರು ವ್ಯಾಗನಾರ್. ಇದರ ಮಿಡಲ್ ವೇರಿಯಂಟ್ ಆದ ವಿಎಕ್ಸ್ಐ ಆಟೋಮೆಟಿಕ್ ವೇರಿಯಂಟ್ 6.54 ಲಕ್ಷಕ್ಕೆ ಸಿಗುತ್ತದೆ. ಈ ಕಾರು 25.19 ಕಿಲೋಮೀಟರ್ ಪ್ರತಿ ಲೀಟರ್ಗೆ ಮೈಲೇಜ್ ನೀಡುತ್ತದೆ. ಇದರ ಮುಂದಿನ ವೇರಿಯಂಟ್ಗಳಾದ ZXI ಮತ್ತು ZXI+ ಆಟೋಮೆಟಿಕ್ ವೇರಿಯಂಟ್ ಗಳು ಕೂಡ 7.3 ಲಕ್ಷ ಮತ್ತು 7.42 ಲಕ್ಷಕ್ಕೆ ದೊರಕುತ್ತವೆ. ಈ ಕಾರಿನಲ್ಲಿ 1.2 ಲೀಟರ್ ನ ಪೆಟ್ರೋಲ್ ಇಂಜಿನ್ ಇದೆ ಅದು ಮತ್ತು 88 ಬಿ.ಎಚ್.ಪಿ ಪವರ್ ಮತ್ತು 113 ನ್ಯೂಟನ್ ಮೀಟರ್ ನ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Maruti Suzuki Swift:

 

 

ಕೇವಲ ವ್ಯಾಗನರ್ ಅಲ್ಲದೆ ಮಾರುತಿ ಸುಜುಕಿಯ ಇನ್ನೊಂದು ಪ್ರಖ್ಯಾತ ಮತ್ತು ಡಿಪೆಂಡೆಬಲ್ ಕಾರು ಎನ್ನಬಹುದಾದ ಸ್ವಿಫ್ಟ್ ಕೂಡ ಇದೆ ಪ್ರೈಸ್ ರೇಂಜ್ನಲ್ಲಿ ದೊರಕುತ್ತದೆ. ಇದರ ವಿ.ಎಕ್ಸ್.ಐ ವೇರಿಯಂಟ್ 7.5 ಲಕ್ಷಕ್ಕೆ ದೊರಕುತ್ತದೆ. ಹಲವಾರು ಮಂದಿ ಈ ಕಾರಿನ ಡ್ರೈವಿಂಗ್ ಕಂಫರ್ಟ್ ಮತ್ತು ಸ್ಪೋರ್ಟಿ ಡ್ರೈವಿಂಗ್ ಗಾಗಿ ಈ ಕಾರನ್ನು ಇಷ್ಟಪಡುತ್ತಾರೆ.

advertisement

Tata Punch:

 

 

ಟಾಟಾದ ಚಿಕ್ಕದಾದ ಪಂಚ್ ಕಾರು 4 ಆಟೋಮೆಟಿಕ್ ವೇರಿಯಂಟ್ಗಳನ್ನು ಹೊಂದಿದ್ದು ಎಲ್ಲವೂ ಇದೆ ಪ್ರೈಸ್ ರೇಂಜ್ನಲ್ಲಿ ಇವೆ ಪಂಚ್ ಅಡ್ವೆಂಚರ್ AMT, ಕೆಮೋ ಅಡ್ವೆಂಚರ್ ಎಎಂಟಿ, ಕೆಮೋ ಅಡ್ವೆಂಚರ್ ಬೆಲೆಗಳು 7.5 ಲಕ್ಷದಿಂದ 7.95 ಲಕ್ಷದ ತನಕ ಇವೆ. ಈ ಕಾರು 1.2 ಲೀಟರ್ ನ ಮೂರು ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿದ್ದು 18.8 ಕಿಲೋಮೀಟರ್ ಪ್ರತಿ ಲೀಟರ್ನ ಮೈಲೇಜ್ ಅನ್ನು ನೀಡುತ್ತದೆ.

Maruti Suzuki Swift Dzire:

 

 

ಮಾರುತಿ ಸುಜುಕಿ ಸ್ವಿಫ್ಟ್ ನ ಸೆಡಾನ್ ವೇರಿಯಂಟ್ ಆದ ಸ್ವಿಫ್ಟ್ ಡಿಸೈರ್ ನ ಒಂದು ವೇರಿಯಂಟ್ ಎಂಟು ಲಕ್ಷದ ಒಳಗೆ ದೊರಕುತ್ತದೆ. ವಿಎಕ್ಸ್ಐ ಆಟೋಮೆಟಿಕ್ ವೇರಿಯಂಟ್ ನ ಬೆಲೆ 7.99 ಲಕ್ಷ ಆಗಿದೆ.

Maruti Suzuki Baleno:

 

 

ಇತ್ತೀಚೆಗೆ ಡಿಸೈನ್ ನಲ್ಲಿ ಬದಲಾವಣೆ ಮಾಡಿಕೊಂಡು ಗ್ರಾಹಕರಿಗೆ ಪ್ರಿಯವಾಗುತ್ತಿರುವ ಕಾರು ಬಲಿನೋ. ಇದರ ಡೆಲ್ಟಾ ಆಟೋಮೆಟಿಕ್ ವೇರಿಯಂಟ್ 8 ಲಕ್ಷ ರೂಪಾಯಿಗಳಿಗೆ ದೊರಕುತ್ತದೆ. ಈ ಕಾರು ಕೂಡ 1.2 ಲೀಟರ್ ನ ನಾಲ್ಕು ಸಿಲಿಂಡರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ.

advertisement

Leave A Reply

Your email address will not be published.