Karnataka Times
Trending Stories, Viral News, Gossips & Everything in Kannada

Driving License: ಟ್ರಾಫಿಕ್ ನಿಯಮ ಪಾಲಿಸದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗೊದು ಗ್ಯಾರಂಟಿ, ಹೊಸ ಆದೇಶ.

advertisement

ಡಿಎಲ್ ಇಂದು ವಾಹನ ಚಲಾಯಿಸುವ ಕಡ್ಡಾಯ ದಾಖಲಾತಿಗಳಲ್ಲಿ ಒಂದಾಗಿದ್ದು ಪ್ರತೀ ವಾಹನಕ್ಕೂ ಕೂಡ ಡ್ರೈವಿಂಗ್ ಲೈಸೆನ್ಸ್ (Driving License) ಅತ್ಯಗತ್ಯವಾಗಿದೆ. ಡ್ರೈವಿಂಗ್ ಲೈಸೆನ್ಸ್ ಇದ್ದರೆ ಟ್ರಾಫಿಕ್ ಪೊಲೀಸರ ಫೈನ್ ಕೂಡ ಬೀಳಲಾರದು ಅದೇ ರೀತಿ ಇತ್ತೀಚೆಗೆ ವಾಹನ ಚಲಾಯಿಸುವವರು ಕೆಲ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ ವೆಂಕಟೇಶ್ವರಲು ಅವರು ವಿಕಾಸಭವನದಲ್ಲಿ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಯ ಜೊತೆ ಸಭೆ ನಡೆಸಿದ್ದು ಕೆಲ ಅಗತ್ಯ ಕ್ರಮಗಳ ಸೂಚನೆ ನೀಡಿದ್ದಾರೆ.

ಈ ಒಂದು ಸಭೆಯಲ್ಲಿ ಸಂಚಾರ ಉಪ ಪೊಲೀಸ್ ಆಯುಕ್ತರಾದ ಸಲ್ಮಾನ್ ತಾಜ್ ಪಾಟೀಲ್, ಮುಖ್ಯ ಅಭಿವೃದ್ಧಿ ಅಧಿಕಾರಿ ಸುಧೀರ್ ಕುಮಾರ್, ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ರಾಜೇಶ್ ಕುಮಾರ್, ವಿಭಾಗೀಯ ಸಾರಿಗೆ ಅಧಿಕಾರಿ ವಿದಿಶಾ ಸಿಂಗ್, ವಿಭಾಗೀಯ ಸಾರಿಗೆ ಅಧಿಕಾರಿ ರಾಜೇಶ್ ಸಿಂಗ್ ಅವರ ಸಮ್ಮುಖದಲ್ಲಿ ಈ ಸಭೆ ನಡೆಯಲಾಗಿದ್ದು ಅನೇಕ ಕ್ರಮ ಕೈಗೊಳ್ಳಲಾಯಿತು.

ಅರಿವು ಮೂಡಿಸುವ ಪ್ರಯತ್ನ:

 

 

advertisement

ಸಂಚಾರ ನಿಯಮ ಪಾಲಿಸದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಅವರ ವಾಹನ ಪರವಾನಿಗೆಯನ್ನು (Driving License) ರದ್ದುಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ಮೊದಲೇ ಈ ಬಗ್ಗೆ ಎಚ್ಚೆತ್ತುಕೊಳ್ಳ ಬೇಕಾದ ಸಂಗತಿಯನ್ನು ಸಹ ಅರಿವು ಮೂಡಿಸಲು ಪ್ರಯತ್ನ ಪಡಲಾಗಿದೆ. ಒಂದು ದಿನದಲ್ಲಿ ಗ್ರಾಮಾಂತರಕ್ಕಿಂತಲೂ ನಗರ ಭಾಗದಲ್ಲಿ ವಾಹನ ಓಡಾಟ ಹೆಚ್ಚಾಗಿದ್ದು, ಸಂಚಾರ ನಿಯಮ ಕೂಡ ಪಾಲನೆ ಆಗಲಾರದು. ಹಾಗಾಗಿ ನಾವು ಜಾರಿಗೆ ತರಬೇಕೆಂದುಕೊಂಡಿದ್ದ ನಿಯಮದ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿದರು.

ಹೀಗೆ ಮಾಡಿದರೆ ವಾಹನ ದಟ್ಟನೆ ಆಗಲಾರದು:

ವಾಹನ ದಟ್ಟಣೆ ಆಗದಂತೆ ಜನರು ಮೊದಲೇ ಎಚ್ಚೆತ್ತುಕೊಳ್ಳಬೇಕು. ಹಾಗಾಗಿ ವಾಹನ ಸವಾರರು ತಮ್ಮ ವಾಹನವನ್ನು ರಸ್ತೆ ಹೊರಗೆ ಅಂಗಡಿ ಮುಂಗಟ್ಟಿನ ಎದುರು ಪಾರ್ಕಿಂಗ್ ಮಾಡಬಾರದು. ವಾಹನಕ್ಕಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರುವಲ್ಲೆ ವಾಹನ ಪಾರ್ಕಿಂಗ್ ಮಾಡಬೇಕು. ವಾಹನದ ಸಂಚಾರ ನಿಯಮ ಪಾಲಿಸುವಂತೆ ಅವರು ತಿಳಿಸಿದರು.

ಈ ಬಗ್ಗೆ ಸೂಚನೆ:

  • ರಸ್ತೆ ಸುರಕ್ಷತೆ ಸಮಿತಿ ಸಭೆಯನ್ನು ಆಗಾಗ ಮಾಡಬೇಕು.
  • ಗುರುತಿಸಲಾದ ಬ್ಲಾಕ್ ಸ್ಪಾಟ್ ಗೆ ರಸ್ತೆ ಸುಧಾರಣೆ ಮಾಡಬೇಕು.
  • ಅಪಘಾತ ಸಂದರ್ಭದಲ್ಲಿ ನೆರವಾಗುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು.
  • ರಸ್ತೆಗಳಲ್ಲಿ ಅಲ್ಲಲ್ಲಿ ವೇಗದ ಮಿತಿ ಸೂಚನಾ ಫಲಕ ಅಳವಡಿಸಬೇಕು.
  • ಅಪ್ರಾಪ್ತರು ವಾಹನ ಚಲಾವಣೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
  • ವಾಹನ ನಿಲುಗಡೆಗಾಗಿ ಪ್ರಮುಖ ಸ್ಥಳದಲ್ಲಿ ಪಾರ್ಕಿಂಗ್ ಅಭಿವೃದ್ಧಿ ಪಡಿಸುವುದು.
  • ಅಪಘಾತಕ್ಕೆ ನಿಖರ ಕಾರಣ ಪರಿಶೀಲಿಸಿ ಅದನ್ನು ಪರಿಹರಿಸುವ ಕ್ರಮ ಶೀಘ್ರ ಜಾರಿಗೆ ಬರಬೇಕು.

advertisement

Leave A Reply

Your email address will not be published.