Karnataka Times
Trending Stories, Viral News, Gossips & Everything in Kannada

Vastu Tips: ಹೊಸ ವರ್ಷಕ್ಕೆ ಈ ಹೊಸ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಒಳ್ಳೆಯ ಶ್ರೇಯಸ್ಸು ಸಿಗುತ್ತದೆ!

advertisement

ಮನೆ ನಮ್ಮೆಲ್ಲರಿಗೂ ಅತೀ ಅಗತ್ಯ ವಾಸಸ್ಥಳವಾಗಿದ್ದು ಮನೆಯಲ್ಲಿ ಶಾಂತತೆ ಸಮೃದ್ಧಿ ಮಾತ್ರ ಕೆಲವೆಡೆ ಇರಲಾರದು. ಸದಾ ಜಗಳ, ಆರ್ಥಿಕ ಸಂಕಷ್ಟ, ಮಾನಸಿಕ ಕಿರಿಕಿರಿ ಇನ್ನು ಅನೇಕ ಸಮಸ್ಯೆಗಳು ಭಾದಿಸುತ್ತಲೇ ಇರುತ್ತದೆ. ಹಾಗಾಗಿ ಈ ಬಾರಿ ಮನೆಯಲ್ಲಿ ನಿಮ್ಮ ಶ್ರೇಯಸ್ಸು ಅಭಿವೃದ್ಧಿಗಾಗಿ ನೀವು ಕೆಲ ಅಗತ್ಯ ಕೆಲಸ ಮಾಡಬೇಕು. ಕೆಲವೊಂದು ವಸ್ತು ಮನೆ ಮನ ಎರಡನ್ನು ಸದಾ ಸುಖವಾಗಿ ಇಡುತ್ತದೆ.

ಕ್ರಿಸ್ಮಸ್ ಮುಗಿದ ಬಳಿಕ ಇನ್ನೇನು ಹೊಸ ವರ್ಷ ಸಮಿಪಿಸುವ ಹಂತದಲ್ಲಿ ನಾವಿಂದು ಇದ್ದೇವೆ. ಹೊಸ ವರ್ಷಕ್ಕೆ ಹೊಸ ವಸ್ತುಗಳನ್ನು ಮನೆಯಲ್ಲಿ ಇಡಬೇಕು ಇಟ್ಟು ಬೆಳೆಸಬೇಕು ಎಂದವರಿಗೆ ಇಲ್ಲೊಂದು ವಿಚಾರ ಗಮನಿಸುವುದು ಅತ್ಯಗತ್ಯ. ನೀವು ಕೊಳ್ಳುವ ವಸ್ತುಗಳೆಲ್ಲ ನಿಮ್ಮ ಅದೃಷ್ಟ ಸಂಕೇತವಾಗಿರದೇ ಕೆಲ ನಿಮಗೆ ದುರದೃಷ್ಟಕರ ಕೂಡ ಆಗಬಹುದು ಹಾಗಾಗಿ ಯಾವೆಲ್ಲ ವಸ್ತು ಶ್ರೇಯಸ್ಸಿನ ಮಾರ್ಗ ಅನುಕೂಲವಾಗುವಂತೆ ಪರಿವರ್ತಿಸಲಿದೆ ಎಂಬ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಈ ವಸ್ತುಗಳು ಇರಲಿ

ಲಾಫಿಂಗ್ ಬುದ್ಧ (Laughing Buddha)

ಹೆಚ್ಚಾಗಿ ಕಚೇರಿ ಹಾಗೂ ಮನೆಯಲ್ಲಿ ಈ ಒಂದು ಲಾಫಿಂಗ್ ಬುದ್ಧ ಕಾಣಬಹುದು. ಇದು ನಿಮ್ಮ ಜೀವನದಲ್ಕಿ ಧನಾತ್ಮಕ ಆಲೋಚನೆ ಜೊತೆಗೆ ಹೆಜ್ಜೆ ಇಡುವ ಕಾರಣ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗಿ ಶಾಂತಿ ನೆಲೆಸಲಿದೆ. ವಾಸ್ತು ಶಾಸ್ತ್ರದಲ್ಲಿ ಕೂಡ ಈ ವಸ್ತುವಿಗೆ ಹೆಚ್ಚಿಗೆ ಮಾನ್ಯತೆ ಇದ್ದು ಲಾಫಿಂಗ್ ಬುದ್ಧ ನೀವು ಇರಿಸುವಾಗ ಆಗಾಗ ಸ್ವಚ್ಛತೆ ಮಾಡುವುದು ಮರೆಯಬಾರದು.

ಈ ಫೋಟೋ , ಚಿತ್ರ ಇರಲಿ

ಹೊಸ ವರ್ಷಕ್ಕೆ ನೀವು ಹೊಸದಾಗಿ ಚಿತ್ರ ಅಥವಾ ಫೋಟೋ ಫ್ರೇಮ್ ಖರೀದಿ ಮಾಡಬೇಕು ಎಂದವರು ನೀವಾಗಿದ್ದರೆ ಏಳು ಕುದುರೆ ಓಟದ ಫೋಟೋ ಖರೀದಿ ಮಾಡಿ. ಇದು ನಿಮಗೆ ಎಷ್ಟೋ ದಿನದಿಂದ ಬಾಕಿ ಉಳಿಸಿಟ್ಟ ಕೆಲಸ ಕಾರ್ಯಗಳು ಶೀಘ್ರವೇ ಕೈಗೂಡಲಿದೆ. ಅದೇ ರೀತಿ ಮನೆಯಲ್ಲಿ ಹಂಸನ ಚಿತ್ರ ಇರಿಸಿದರೆ ಕೂಡ ನಿಮಗೆ ಉತ್ತಮ ಸಮಾಚಾರಗಳು ಅರಸಿ ಬರಲಿದೆ. ಹಂಸ ಕೂಡ ಶುಭ ಹಕ್ಕಿಯಾಗಿದ್ದು ನಿಮಗೆ ಧನಾಗಮನಕ್ಕೆ ಇದು ಒಂದು ಉತ್ತನ ವಿಧಾನ ಆಗಿದೆ. ಹಾರುವ ಹಕ್ಕಿ, ಪರ್ವತ, ನವಿಲು ಗರಿಬಿಚ್ಚುವುದು ಇಂತಹ ಅನೇಕ ಧನಾತ್ಮಕ ಯೋಚನೆಗೆ ಸಹಕಾರಿ ಆಗುವ ಫೋಟೋ ಅಥವಾ ಚಿತ್ರವನ್ನೆ ಹಾಕಿಕೊಳ್ಳಿ.

advertisement

ವಿಗ್ರಹ

ಮನೆಯಲ್ಲಿ ಎಲ್ಲ ವಿಧವಾದ ವಿಗ್ರಹ ಇಡಬಾರದು ಅದರಲ್ಲೂ ತೀರಾ ದೊಡ್ಡದೆನಿಸುವ ವಿಗ್ರಹ ಮನೆಯಲ್ಲಿ ಚೆಂದ ಗಾಣಿಸುತ್ತಿದ್ದರೂ ಅದಕ್ಕೆ ಕೆಲ ನೀತಿ ರಿವಾಜು ಪಾಲನೆ ಮಾಡಬೇಕು ಹಾಗಾಗಿ ಸಣ್ಣ ಲಕ್ಷ್ಮೀ, ಬುದ್ಧ ವಿಗ್ರಹ ತುಂಬಾ ಒಳಿತಾಗಲಿದೆ. ಅದೆ ರೀತಿ ಗಣಪತಿ ವಿಗ್ರಹ ಕೂಡ ತುಂಬಾ ಸಂಗ್ರಹ ಮಾಡಬಾರದು.

ಗಡಿಯಾರ

ಸಾಮಾನ್ಯವಾಗಿ ಮನೆಯಲ್ಲಿ ಒಂದು ಗಡಿಯಾರ ಇಟ್ಟೆ ಇಡುತ್ತಾರೆ ಆದರೆ ಮೊಬೈಲ್ ಬಂದ ಬಳಿಲ ಗಡಿಯಾರ ನೊಡುಗರ ಸಂಖ್ಯೆ ಕಡಿಮೆ ಆಗಿದೆ‌. ಹಾಗೆಂದು ಒಂದಕ್ಕಿಂತ ಅಧಿಕ ಗಡಿಯಾರ ಮನೆಯಲ್ಲಿ ಇರಬಾರದು ಹಾಗೆಯೇ ನಿಂತ ಗಡಿಯಾರ ಕೂಡ ಮನೆಯಲ್ಲಿ ಇಡಬಾರದು. ಹಾಗಾಗಿ ಹೊಸ ಗಡಿಯಾರ ಖರೀದಿ ಮಾಡಿದರೆ ಉತ್ತಮ ಎನ್ನಬಹುದು.

ಗಿಡಗಳು

ಗಿಡಗಳು ಮನೆಯಲ್ಲಿ ಅಲಂಕಾರಿಕ ವಸ್ತುಗಳನ್ನಾಗಿ ಬಳಸುತ್ತಾರೆ ಅಂತಹ ಗಿಡಗಳು ಕೂಡ ನಿಮ್ಮ ಮನಸ್ಸಿನ ಶಾಂತತೆಗೆ ಜೀವನ ಸಂತೋಷಕ್ಕೆ ಧನಾತ್ಮಕ ಯೋಚನಾಲಹರಿಗೆ ಸಹಕಾರಿ ಆಗಲಿದೆ. ಗಿಡಗಳನ್ನು ಸಣ್ಣ ಪಾಟ್ ತರ ನೆಟ್ಟು ಅದನ್ನು ಬಾಡಲು ಬಿಡದೇ ಪೋಷಣೆ ಮಾಡುವುದು ಸಹ ನಿಮಗೆ ಶ್ರೇಯಸ್ಸು ಒದಗಿಸಲಿದೆ.

advertisement

Leave A Reply

Your email address will not be published.