Karnataka Times
Trending Stories, Viral News, Gossips & Everything in Kannada

Yakuza Karishma: ಟಾಟಾ ನ್ಯಾನೋ ಗಿಂತ ಸಣ್ಣದಾಗಿದೆ ಈ ಎಲೆಕ್ಟ್ರಿಕ್ ಕಾರು, ಬೆಲೆ ಕೇವಲ 1.7 ಲಕ್ಷ!

advertisement

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಬೇಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿವೆ. ಹೀಗಾಗಿ ವಾಹನ ತಯಾರಕ ಕಂಪೆನಿಗಳು ಕೂಡ ಸಾಂಪ್ರದಾಯಿಕ ಇಂಧನ ಪ್ರೇರಿತ ವಾಹನಗಳಿಂತ ಪರಿಸರ ಸ್ನೇಹಿ ವಾಹನಗಳ ತಯಾರಿಕೆ ಹೆಚ್ಚು ಗಮನ ಹರಿಸುತ್ತಿದೆ. ಅದರಲ್ಲಿಯು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಕ್ರೇಜ್ ತುಂಬಾ ಹೆಚ್ಚಾಗಿದೆ. ಇತ್ತೀಚೆಗೆ ಯಕುಜಾ ಕಂಪೆನಿಯು ಕರಿಷ್ಮಾ (Yakuza Karishma) ಎನ್ನುವ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದ್ದು, ನೋಡಲು ಸೊಗಸಾದ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು ಹಾಗೂ ಬೆಲೆಯ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಕರೀಷ್ಮ ಇವಿಯ ಬ್ಯಾಟರಿ ಸಾಮರ್ಥ್ಯ

ಈ ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಹರಿಯಾಣದ ಸಿರ್ಸಾ ಮೂಲದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾದ ಯಾಕುಜಾ (Yakuza) ಎಲೆಕ್ಟ್ರಿಕ್ ತಯಾರಿಸಿದ್ದು, ಇದು ಈ ಕಂಪನಿಯ ಅಗ್ಗದ ಎಲೆಕ್ಟ್ರಿಕ್ ಕಾರಾಗಿದೆ. ಸಣ್ಣ ಕುಟುಂಬದವರನ್ನು ಗಮನದಲ್ಲಿಟ್ಟುಕೊಂಡು ಕಂಪೆನಿಯು ಕಾರನ್ನು ತಯಾರಿಸಿದ್ದು, ನೋಡಲು ಆಕರ್ಷಕವಾಗಿದೆ. ಯಕುಜಾ ಕರಿಷ್ಮಾ ಇವಿಯಲ್ಲಿ 60v45ah ಪವರ್‌ನ ಬ್ಯಾಟರಿಯನ್ನು ನೀಡಲಾಗಿದೆ. ಈ ಕಾರು 50 ರಿಂದ 60 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸರಿಸುಮಾರು 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಇದರೊಂದಿಗೆ ಟೈಪ್ 2 ಚಾರ್ಜರ್ ಕೂಡ ಲಭ್ಯವಿದೆ.

Image Source: Yakuza Electric Vehicles

advertisement

ಯಾಕುಜಾ ಕರಿಷ್ಮಾ ಇವಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ?

ಯಾಕುಜಾ ಕರಿಷ್ಮಾ ಇವಿಯು 3 ಆಸನಗಳ ಮತ್ತು ಸಣ್ಣ EV ಕಾರು ಟಾಟಾದ ನ್ಯಾನೋಗಿಂತ ಚಿಕ್ಕದಾಗಿದ್ದರೂ ನೋಡುವುದಕ್ಕೆ ಸುಂದರವಾಗಿದೆ. ಇದರಲ್ಲಿ ನೀವು ಎಲ್ಇಡಿ ಡಿಆರ್ಎಲ್ (LED DRL), ಎಲ್ಇಡಿ ಫಾಗ್ ಲ್ಯಾಂಪ್ (LED Fog Lamp), ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ (Connected LED Tail Lamp), ಬಾಟಲ್ ಹೋಲ್ಡರ್ (Bottle Holder), ಪವರ್ ವಿಂಡೋ (Power Window), ಬ್ರಾಡ್ ಗ್ರಿಲ್ (Broad Grill), ಕ್ರೋಮ್ ಡೋರ್ ಹ್ಯಾಂಡಲ್ (Chrome Door Handle), ಪ್ರೊಜೆಕ್ಟರ್ ಹೆಡ್ಲ್ಯಾಂಪ್ (Projector HeadLamp), ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ಸನ್‌ರೂಫ್ (Sunroof), ಬ್ಲೋವರ್, ಸ್ಪೀಕರ್‌ಗಳು, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳಿವೆ.

Image Source: Yakuza Electric Vehicle

ಯಕುಜಾ ಕರಿಷ್ಮಾ ಇವಿಯ ಆರಂಭಿಕ ಬೆಲೆ

ಯಕುಜಾ ಕರಿಷ್ಮಾ ಇವಿ (Yakuza Karishma EV) ಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಆದರೆ ಇನ್ನು ವಿತರಣೆಯನ್ನು ಆರಂಭಿಸಿಲ್ಲ. ಆದರೆ ಈ ಯಕುಜಾ ಕರಿಷ್ಮಾ ಎಕ್ಸ್ ಶೋ ರೂಂ ಬೆಲೆಯು 1.70 ಲಕ್ಷ ರೂಪಾಯಿಯಾಗಿದ್ದು, ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿಡಿ ಈ ಇವಿಯನ್ನು ಬುಕ್ ಮಾಡಬಹುದು.

advertisement

Leave A Reply

Your email address will not be published.