Karnataka Times
Trending Stories, Viral News, Gossips & Everything in Kannada

SIP: ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 97 ಲಕ್ಷ ರೂಪಾಯಿ! ಇಲ್ಲಿದೆ ಅದ್ಭುತ ಪ್ಲ್ಯಾನ್.

advertisement

ಇಂದು ಹೂಡಿಕೆ ಅನ್ನೋದು ಬಹಳ ಮುಖ್ಯ. ಮುಂದಿನ ನಮ್ಮ ಜೀವನಕ್ಕೆ ಸಹಾಯಕ ವಾಗಲಿ ಎಂದು ಸ್ವಲ್ಪ ವಾದರೂ ಹಣವನ್ನು ಹೂಡಿಕೆ ಮಾಡುತ್ತೇವೆ.ಅದೇ ರೀತಿ ನೀವು ಮ್ಯೂಚುವಲ್ ಫಂಡ್‌ (Mutual Fund) ಗಳಲ್ಲಿ ಕೆಲವೊಂದು ನಿಯಮವನ್ನು ಅನುಸರಿಸುವ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಲು ಸಹ ಸಾಧ್ಯವಿದೆ. ಇಂದು ಸಣ್ಣ ವಯಸ್ಸಿನಲ್ಲಿಯೇ, ಸಣ್ಣ ಮೊತ್ತವಾದರೂ ಸರಿ, ಹೂಡಿಕೆ ಆರಂಭಿಸಿದರೆ ಉತ್ತಮ. ಯಾಕಂದ್ರೆ ಕಷ್ಟ ಕಾಲದ ಸಮಯದಲ್ಲಿ ಈ ಹೂಡಿಕೆಯ ಹಣ ನೇರವಾಗಬಹುದು.

ಎಸ್ ಐ ಪಿಗೆ ಈ ಕ್ರಮ ಅನುಸರಿಸಿ

  • ಹೂಡಿಕೆಯು ದೀರ್ಘಾವಧಿಯ ತಂತ್ರವಾಗಿದ್ದು ಸರಿಯಾದ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ರೆ ಕೆಲವು ಉತ್ತಮ ಕಾರ್ಯತಂತ್ರದೊಂದಿಗೆ ನೀವು ಉತ್ತಮ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.
  • ಎಸ್​ಐಪಿ ಕಂತು ಕಟ್ಟುವುದನ್ನು ತಪ್ಪಿಸಿದರೆ ಆ ತಿಂಗಳ ಲಾಭ ಸಿಗದೇ ಹೋಗಬಹುದು.
  • ಎಸ್​ಐಪಿ (SIP) ನಲ್ಲಿ ಹೆಚ್ಚು ಲಾಭ ಬರುತ್ತಿದೆ ಎಂದು ಹೆಚ್ಚೆಚ್ಚು ಹೂಡಿಕೆ ಮಾಡುವುದು ಸರಿಯಲ್ಲ.
  • ಪ್ರತಿ ತಿಂಗಳು ಅಥವಾ ತ್ರೈಮಾಸಿಕ ಇಲ್ಲವೇ ವಾರ್ಷಿಕವಾಗಿ ನಿಗದಿತ ಹಣವನ್ನು ಹೂಡಿಕೆ ಮಾಡುವ ಮೂಲಕ ಹೂಡಿಕೆ ಪ್ರಮಾಣವನ್ನು ಹೆಚ್ಚು ಮಾಡಬಹುದು.

ನಿವೃತ್ತಿ ಸಂದರ್ಭದಲ್ಲಿ ಲಾಭ

advertisement

ಈ ಹೂಡಿಕೆ ಅನ್ನೋದು ನಿವೃತ್ತಿ ಸಂದರ್ಭದಲ್ಲಿ ಹೆಚ್ಚಿನ ಲಾಭ ನೀಡಲಿದೆ. ಹೌದು ಮ್ಯೂಚುವಲ್ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆ ಮಾಡಿದ್ರೆ 60 ನೇ ವಯಸ್ಸಿನಲ್ಲಿ ನಿವೃತ್ತಿಯ ಸಂದರ್ಭದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ನೀವು ದೀರ್ಘಾವಧಿಗೆ SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ನೀವು 12% ರಷ್ಟು ಲಾಭ ಗಳಿಸಿದ್ರೆ ನೀವು ರೂ 2.60 ಲಕ್ಷ ಮಾಸಿಕ ಆದಾಯವನ್ನು ಪಡೆಯಬಹುದು.

ಇಷ್ಟು ಹೂಡಿಕೆ ಮಾಡಿ

ನೀವು 25 ವರ್ಷ ವಯಸ್ಸಿನವರಾಗಿದ್ದರೆ SIP ಮೂಲಕ ಪ್ರತಿ ತಿಂಗಳು 1000 ಹಣ ಸೆವಿಂಗ್ಸ್ ಮಾಡಿ, ನೀವು ನಿವೃತ್ತಿಯಾಗುವ ಸಂದರ್ಭದಲ್ಲಿ ಹೂಡಿಕೆಯ ಮೇಲೆ 11% ಪ್ರತಿಶತದಷ್ಟು ಲಾಭವನ್ನು ನೀವು ಪಡೆಯ ಬಹುದು.

ಇಷ್ಟು ಮೊತ್ತ ದೊರೆಯಲಿದೆ

ನೀವು 25 ವರ್ಷ ವಯಸ್ಸಿನವರಾಗಿ, ನೀವು SIP ಮೂಲಕ ತಿಂಗಳಿಗೆ 1000 ರೂ ಹೂಡಿಕೆ ಮಾಡಿದ್ರೆ ಒಂದು ವರ್ಷದಲ್ಲಿ ನಿಮ್ಮ ಹೂಡಿಕೆಯು 12,000 ರೂ ಆಗಿರುತ್ತದೆ. 30 ನೇ ವರ್ಷದವರೆಗೆ ನೀವು ಪ್ರತಿ ವರ್ಷ 5 ಪ್ರತಿಶತದಷ್ಟು ಹೂಡಿಕೆಯನ್ನು ಹೆಚ್ಚಿಸಿದರೆ ಮತ್ತು ಸರಾಸರಿ 11 ಪ್ರತಿಶತದಷ್ಟು ಲಾಭವನ್ನು ಪಡೆದರೆ, 30 ವರ್ಷಗಳಲ್ಲಿ ಅಂದರೆ 55 ವರ್ಷಗಳವರೆಗೆ ನಿಮ್ಮ ಒಟ್ಟು ಹೂಡಿಕೆಯು ಸುಮಾರು 95.67 ಲಕ್ಷ ರೂ. ಸಿಗಲಿದೆ.

advertisement

Leave A Reply

Your email address will not be published.