Karnataka Times
Trending Stories, Viral News, Gossips & Everything in Kannada

AMO Jaunty Pro: ಕೇವಲ 75,000ರೂಪಾಯಿಗೆ 100Km ರೇಂಜ್ ಕೊಡುವ ಅದ್ಭುತ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಬೆಂಕಿ ಲುಕ್!

advertisement

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬೇಡಿಕೆ ಹೆಚ್ಚುತ್ತಿದೆ. ಬೇರೆ ಬೇರೆ ಸ್ಟಾರ್ಟ್ ಆಗುವ ಕಂಪನಿಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ತಯಾರಿಸುತ್ತಿವೆ. ನೀವು ಕೂಡ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿ ಮಾಡಲು ಬಯಸಿದರೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

AMO Jaunty Pro ಎಲೆಕ್ಟ್ರಿಕ್ ಸ್ಕೂಟರ್?

 

 

ಹೌದು, ಎಲೆಕ್ಟ್ರಿಕಲ್ ಸ್ಕೂಟರ್ (Electric Scooter) ವಿಭಾಗದಲ್ಲಿ AMO Jaunty Pro Electric Scoter ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತತೆ ಪಡೆದುಕೊಂಡಿದೆ. ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ದ್ವಿಚಕ್ರವಾಹನ ಕೈಗೆಟ್ಟುಕುವ ಬೆಲೆಯಲ್ಲಿ ಲಭ್ಯವಿದೆ. ಹಾಗಾಗಿ ಜನಸಾಮಾನ್ಯರು ಕೂಡ Electric Scooter ಖರೀದಿ ಮಾಡಲು ಮುಂದಾಗಿದ್ದಾರೆ.

advertisement

AMO Jaunty Pro Electric Scooter Features:

AMO Jaunty Pro Electric Scooter 2.5 Kwh ಸಾಮರ್ಥ್ಯ ಇರುವ ಲಿಥಿಯಂ ಅಯಾನ್ ಬ್ಯಾಟರಿ ಅಳವಡಿಸಲಾಗಿದೆ. 249 ವ್ಯಾಟ್ ಶಕ್ತಿ ಹೊಂದಿದ್ದು ಬ್ರಷ್ ಲೆಸ್ ಡಿಸಿ ಎಲೆಕ್ಟ್ರಿಕ್ ಮೋಟಾರ್ ಕೊಡಲಾಗಿದೆ. ಅತಿ ಹೆಚ್ಚು ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು ಕೇವಲ ಆರು ಗಂಟೆಗಳಲ್ಲಿ ಈ ಸ್ಕೂಟನ್ನು ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಬಹುದು.

ಈ ಸ್ಕೂಟರ್ ನಲ್ಲಿ ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದು. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ನೂರು ಕಿಲೋಮೀಟರ್ ವ್ಯಾಪ್ತಿ ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಸಾಕಷ್ಟು ಫೀಚರ್ಗಳನ್ನು ಇದರಲ್ಲಿ ಕಾಣಬಹುದು. ಬ್ರೇಕ್ ಉತ್ತಮಗೊಳಿಸುವ ಸಲುವಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ಕಾಣಬಹುದು. ಟೆಲಿಸ್ಕೋಪ್ ಮಾದರಿಯ ಹೈಡ್ರಾಲಿಕ್ ಸಸ್ಪೆನ್ಷನ್ ಹಾಗೂ ಹಿಂಭಾಗದಲ್ಲಿ ಸ್ಪ್ರಿಂಗ್ ಆಧಾರಿತ ಶಾಪ್ ಅಬ್ಸರ್ವರ್ ಜೋಡಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಜಿಟಲ್ ಟ್ರಿಪ್ ಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಯು ಎಸ್ ಬಿ ಚಾರ್ಜಿಂಗ್ ಪೋರ್ಟ್, ಫಾಸ್ಟ್ ಚಾರ್ಜಿಂಗ್ ಫೆಸಿಲಿಟಿ, ಸುರಕ್ಷತೆಯ ದೃಷ್ಟಿಯಿಂದ, ಪುಶ್ ಅಂಡ್ ಸ್ಟಾರ್ಟ್ ಬಟನ್, ಎಲ್ಇಡಿ ಹೆಡ್ ಲೈಟ್, EABS ಮೊದಲಾದ ಫಿಚರ್ ಗಳನ್ನು ಅಳವಡಿಸಲಾಗಿದೆ.

ಕೇವಲ 75,000 ಗಳ ಆರಂಭಿಕ ಬೆಲೆಯೊಂದಿಗೆ (Ex-Showroom Price) AMO ಜಾಂಟಿ ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಸದ್ಯದಲ್ಲಿ ದೇಶದಲ್ಲಿ ಜನಪ್ರಿಯ ಎಲೆಕ್ಟ್ರಿಕ್ ಚಕ್ರ ವಾಹನ ಎನಿಸಲಿದೆ.

advertisement

Leave A Reply

Your email address will not be published.