Karnataka Times
Trending Stories, Viral News, Gossips & Everything in Kannada

Darshan: ಪವಿತ್ರಾ ಗೌಡ, ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದ ಕಾದಾಟದ ಬಗ್ಗೆ ಕಡೆಗೂ ಮೌನ ಮುರಿದ ಡಿ ಬಾಸ್!

advertisement

ಸ್ಟಾರ್ ಸೆಲೆಬ್ರಿಟಿಗಳು ಆಗಾಗ ಗಾಸಿಪ್ ಮಾಡಿಕೊಳ್ಳುವುದು ಸಾಮಾನ್ಯ ವಿಚಾರವಾಗಿದೆ. ಹಾಗಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಸಿಪ್ ವಿಚಾರಕ್ಕೆ ಆಗಾಗ ಸಿಲುಕುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಕಾಟೇರ ಸಕ್ಸಸ್ ಪಾರ್ಟಿನಲ್ಲಿ ಹಲವು ವಿವಾಧ ಹುಟ್ಟಿಸಿಕೊಂಡಿದ್ದರು. ತಡರಾತ್ರಿ ಪಾರ್ಟಿ ಮಾಡಿದ್ದ ವಿಚಾರಕ್ಕೆ ದರ್ಶನ್ ಅವರು ವಿಚಾರಣೆಗೆ ಸಹ ಹಾಜರಾಗಿದ್ದರೂ ಇದೀಗ ಅದರ ಬೆನ್ನಲ್ಲೆ ಮತ್ತೊಂದು ವಿವಾಧದ ಗೊಜಲಿಗೆ ಡಿ ಬಾಸ್ ಸಿಲುಕಿದ್ದಾರೆ.

ಪೋಟೋ ವೈರಲ್

ಇತ್ತೀಚೆಗಷ್ಟೇ ದರ್ಶನ್ ಆಪ್ತರಲ್ಲಿ ಒಬ್ಬರಾದ ಪವಿತ್ರಾ ಗೌಡ (Pavithra Gowda) ಅವರು ದರ್ಶನ್ ಜೊತೆಗೆ ಇದ್ದ ಅತ್ಯಮೂಲ್ಯ ಕ್ಷಣಗಳ ಫೋಟೋ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಡಿ ಬಾಸ್ ಜೊತೆ ಹತ್ತು ವರ್ಷದ ಸಂಬಂಧದ ಬಗ್ಗೆ ಆಕೆ ಪೋಸ್ಟ್ ಮಾಡಿದ್ದು ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಗರಂ ಆಗಿದ್ದಾರೆ. ಬಳಿಕ ಆಕೆಗೆ ಈಗಾಗಲೇ ಮದುವೆಯಾಗಿದೆ. ಪವಿತ್ರಾ ಗೌಡರ ಅವರ ಮಗಳಿಗೂ ದರ್ಶನ್ ಗೂ ಯಾವ ವಿಧವಾದ ಸಂಬಂಧ ಇಲ್ಲ ಎಂದು ತಿಳಿಸಿ ಪವಿತ್ರಾ ವಿರುದ್ಧ ಅವರ ಮೊದಲ ಪತಿಗೆ ಸಂಬಂಧ ಪಟ್ಟ ಪೋಸ್ಟ್ ಹಾಕಿದ್ದಾರೆ.

ಪವಿತ್ರ ಗೌಡ ಪೋಸ್ಟ್

advertisement

ಈ ವಿಚಾರ ತಿಳಿದ ಪವಿತ್ರಾ ಗೌಡ ಕೂಡ ಸುಮ್ಮನಾಗದೇ ವಿಜಯಲಕ್ಷ್ಮೀ ಅವರು ತನ್ನ ಬಗ್ಗೆ ಅವಾಚ್ಯವಾಗಿ ಬೈದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದಕ್ಕೆ ತನಗೂ ಹಾಗೂ ಮಗಳಿಗೂ ಮಾನಸಿಕ ಹಿಂಸೆ ಆಗಿದೆ ಎಂಬ ಬಗ್ಗೆ ಪೋಸ್ಟ್ ಹಾಕಿದ್ದಾರೆ. ನಾನು ಸಂಜಯ್ ಸಿಂಗ್ ಜೊತೆ ವಿವಾಹವಾದ ಬಳಿಕ ಖುಷಿ ಜನಿಸಿದ್ದು. ಬಳಿಕ ನಮ್ಮಿಬ್ಬರಿಗೆ ಹೊಂದಾಣಿಕೆ ಆಗದೇ ಡೈವೋರ್ಸ್ ಆಗಿದ್ದೇವೆ. ದರ್ಶನ್ ಅವರ ಜೊತೆ ಹತ್ತು ವರ್ಷದಿಂದ ಖುಷಿಯಲ್ಲಿದ್ದೇನೆ. ಈ ವಿಚಾರ ದರ್ಶನ್ ಪತ್ನಿಗೂ ಮೊದಲೇ ತಿಳಿದಿದೆ. ವಿಜಯಲಕ್ಷ್ಮೀ ಅವರು ತಮ್ಮ ಇನ್ ಸ್ಟ್ರಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಅನೇಕ ಕೆಟ್ಟ ಕಮೆಂಟ್ ಮಾಡಿದ್ದು ಬೇಸರ ತಂದಿದೆ. ಅನುಮತಿ ಇಲ್ಲದೇ ನನ್ನ ವೈಯಕ್ತಿಕ ಫೋಟೋ ಅಪ್ಲೋಡ್ ಮಾಡುವ ಅಧಿಕಾರ ಯಾರಿಗೂ ಇರಲಾರದು. ಈ ಬಗ್ಗೆ ನಾನು ಕೂಡ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದೇನೆ ಎಂಬುದು ತಿಳಿದಿರಿ ಎಂದು ಅವರು ಹೇಳಿದ್ದಾರೆ.

ದರ್ಶನ್ ಹೇಳಿಕೆ

ಹೀಗೆ ದರ್ಶನ್ ಪತ್ನಿ ಹಾಗೂ ಪವಿತ್ರಾ ಗೌಡ ನಡುವೆ ತೀವೃ ವಾದ ವಿವಾಧ ನಡೆಯುತ್ತಿದ್ದು ಈ ಬಗ್ಗೆ ಇಷ್ಟು ದಿನಗಳ ಕಾಲ ಮೌನವಾಗಿದ್ದ ದರ್ಶನ್ (Darshan) ಅವರು ಈಗ ಬಹಿರಂಗ ಹೇಳಿಕೆ ನೀಡಿದ್ದಾರೆ. ಇಬ್ಬರ ಕಿತ್ತಾಟದ ನಡುವೆ ಇಷ್ಟು ಸಮಯ ಸುಮ್ಮನೇ ಇದ್ದ ದಚ್ಚು ಈಗ ಕಡಕ್ ಉತ್ತರ ನೀಡಿದ್ದಾರೆ. ಮಂಡ್ಯದಲ್ಲಿ ನಡೆದ ರೈತನಾಯಕ ಪುಟ್ಟಣ್ಣಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿದ್ದಾರೆ. ಈ ಮೂಲಕ ಯಾರು ಏನೆ ಹೇಳಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳೊಲ್ಲ. ನನಗೆ ಸೆಲೆಬ್ರಿಟಿಗಳು ಮಾತ್ರ ಸಾಕು. ಈಗ ನಾನು ತಾಳ್ಮೆ ಪಾಠ ಕಲಿತಿದ್ದೇನೆ ಎಂದು ಮಾತನಾಡಿದ್ದಾರೆ.

ಈ ಮೂಲಕ ದರ್ಶನ್ ಹಾಗೂ ಅವರ ವೈಯಕ್ತಿಕ ಬದುಕಿನ ಬಗ್ಗೆ ಅನೇಕ ಜನರು ಆಡಿಕೊಂಡಿದ್ದಕ್ಕೆ ಸರಿಯಾಗೆ ಟಾಂಗ್ ನೀಡಿದ್ದಾರೆ. ಈ ಮೂಲಕ ದರ್ಶನ್ ಬದುಕಲ್ಲಿ ಉಂಟಾದ ಈ ಹೊಸ ಅಲೆ ಬಗ್ಗೆ ಅವರು ಪರೋಕ್ಷ ಹೇಳಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಸದಾ ವಿವಾಧದ ಸುಳಿಯಲ್ಲೇ ಸಿಲುಕುತ್ತಿದ್ದು ಈ ಬಗ್ಗೆ ಮುಂದೆ ಏನೆಲ್ಲಾ ಆಗಬಹುದು ಎಂದು ಕಾದು ನೋಡಬೇಕು.

advertisement

Leave A Reply

Your email address will not be published.