Karnataka Times
Trending Stories, Viral News, Gossips & Everything in Kannada

Swavalambi Sarathi Scheme: ವಾಹನ ಖರೀದಿಸಬೇಕೆಂದು ಆಲೋಚನೆಯಲ್ಲಿದ್ದರೆ ಸರ್ಕಾರದ ಈ ಯೋಜನೆಯಲ್ಲಿ 4 ಲಕ್ಷ ಸಹಾಯಧನವನ್ನು ಪಡೆಯಬಹುದು!

advertisement

ರಾಜ್ಯದ ನಿರುದ್ಯೋಗ ಯುವಕ/ ಯುವತಿಯರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.ಸರ್ಕಾರಿ ಯೋಜನೆ ಯಾದ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಅಡಿಯಲ್ಲಿ ವಾಹನಗಳನ್ನು ಖರೀದಿಸುವ ವ್ಯಕ್ತಿಗೆ 4 ಲಕ್ಷ ವರೆಗೂ ಸಹಾಯಧನ ಸಿಗುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ ನೀವು ಕೂಡ ಹಣವನ್ನು ಪಡೆಯಲು ಬಯಸಿದ್ದರೆ ಡಿಸೆಂಬರ್ 15ನೇ ದಿನಾಂಕದೊಳಗೆ ಅರ್ಜಿಯನ್ನು ಪೂರೈಸಿ, ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನಿರುದ್ಯೋಗಿಯಾಗಿರುವ ನೀವು ಒಂದೊಳ್ಳೆ ಕೆಲಸವನ್ನು ವೃದ್ಧಿಸಿಕೊಳ್ಳಲು ಈ ಒಂದು ವಾಹನದ ಸಾಲ ಕೊಡಲು ಮುಂದಾಗಿದೆ ಸ್ವಾವಲಂಬಿ ಸಾರಥಿ ಯೋಜನೆ. ಯುವಕ ಯುವತಿಯರು ಯಾರು ಬೇಕಾದರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹಣವನ್ನು 4 ಲಕ್ಷದವರೆಗೆ ಪಡೆದುಕೊಳ್ಳಬಹುದು.

4 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ:

 

 

ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಯಡಿಯಲ್ಲಿ ಯುವಕ ಯುವತಿಯರು ನಿರುದ್ಯೋಗದಿಂದ ಮನೆಯಲ್ಲೇ ಇದ್ದರೆ, ಅಂತವರಿಗೆ ಹಲವಾರು ಬ್ಯಾಂಕ್ಗಳು ಕೂಡಿ ಸಾಲ ಸೌಲಭ್ಯವನ್ನು ನೀಡುತ್ತವೆ. ನಂತರ ನೀವು ಯಾವುದಾದರೂ ಒಂದು ಕೆಲಸವನ್ನು ಆಯ್ಕೆ ಮಾಡಿಕೊಂಡು ಕೊಡುವ ಸಾಲವನ್ನು ಕೆಲಸಕ್ಕಾಗಿ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಹೆಚ್ಚಿನ ಆದಾಯವನ್ನು ಹಿಂಪಡೆದುಕೊಳ್ಳಬೇಕು ಈ ಕಾರಣಕ್ಕಾಗಿ ನಿರುದ್ಯೋಗವನ್ನು ಭತ್ಯೆ ಮಾಡಲು ಹಲವಾರು ಬ್ಯಾಂಕ್ಗಳು ಕ್ರಮವನ್ನು ತೆಗೆದುಕೊಂಡು ವಾಹನದ ಖರೀದಿಗೆ 4 ಲಕ್ಷ ವರೆಗೆ ಸಾಲವನ್ನು ನೀಡಲು ಮುಂದಾಗಿದೆ.

advertisement

ಪರಿಶಿಷ್ಟ (SC) ಜಾತಿ ಹಾಗೂ ಪರಿಶಿಷ್ಟ ಪಂಗಡ (ST) ದ ಯುವಕ ಯುವತಿಯರಿಗೆ ಮಾತ್ರ 4 ಲಕ್ಷ ರೂ ಹಣ ಸಿಗುತ್ತದೆ. ಈ ವರ್ಗದ ಜನರಿಗೆ ಮಾತ್ರ ಸ್ವಾವಲಂಬಿ ಸಾರಥಿ ಯೋಜನೆ ಅನ್ವಯವಾಗುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ ಸರಕು ವಾಹನಗಳು ಹಾಗೂ ಹಳದಿ ಬೋರ್ಡ್ ಹೊಂದಿರುವ ಟ್ಯಾಕ್ಸಿಯನ್ನು ಖರೀದಿಸಬಹುದು. ಖರೀದಿಸಿದ ವಾಹನಗಳಲ್ಲೇ ನೀವು ಪ್ರತಿನಿತ್ಯ ಕೆಲಸವನ್ನು ಮಾಡಬಹುದು. ಈ ವಾಹನಗಳ ಖರೀದಿಗೆ 75 ರಷ್ಟು ಸಹಾಯಧನ ಮಾಡಲಾಗುತ್ತದೆ. ಅಂದರೆ 4 ಲಕ್ಷದವರೆಗೆ ಹಣವನ್ನು ಈ ಯೋಜನೆ ನಿಮಗೆ ದೊರಕಿಸಿ ಕೊಡುತ್ತದೆ. ಈ ಒಂದು ಯೋಜನೆಯ ಉದ್ದೇಶವೇನೆಂದರೆ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಒಂದೊಳ್ಳೆ ಕೆಲಸವನ್ನು ಆ ನಿರುದ್ಯೋಗಿಗಳಿಗೆ ಕೊಟ್ಟು ಆದಾಯವನ್ನು ತೆಗೆಯುವಂತ ಉದ್ದೇಶ ಈ ಯೋಜನೆಯದು. ಈ ಮೊದಲು 3.50 ಲಕ್ಷ ಇದ್ದ ಹಣವನ್ನು ಈ ವರ್ಷದಿಂದ 4 ಲಕ್ಷಕ್ಕೆ ಏರಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು:

  • ಅಭ್ಯರ್ಥಿಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿ ಆಗಿರಬೇಕು ಅಥವಾ SC-ST ವರ್ಗದ ವ್ಯಕ್ತಿಯಾಗಿರಬೇಕು. ಇಂಥಹ ವರ್ಗದ ಯುವಕರಿಗೆ ಈ ಯೋಜನೆ ಸಲ್ಲುತ್ತದೆ.
  • ಅರ್ಜಿದಾರರು ಕರ್ನಾಟಕದಲ್ಲಿಯೇ ವಾಸವಿರಬೇಕು.
  • ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 18 ವರ್ಷ ಮೇಲ್ಪಟ್ಟು ಹಾಗೂ 55 ವರ್ಷ ಒಳಗಿನ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆಯ ಸೌಲಭ್ಯ ದೊರೆಯುತ್ತದೆ.
  • ಕುಟುಂಬದ ವಾರ್ಷಿಕ ಆದಾಯವು 4.50 ಲಕ್ಷ ಹಣ ಮೀರಿರಬಾರದು.
  • ಅರ್ಜಿದಾರನ ಕುಟುಂಬದ ಯಾವುದೇ ವ್ಯಕ್ತಿಗಳು ಕೂಡ ಸರ್ಕಾರಿ ನೌಕರರಾಗಿರಬಾರದು.
  • RTO ಡ್ರೈವಿಂಗ್ ಲೈಸನ್ಸ್ ಅನ್ನು ಪಡೆದುಕೊಂಡಿರಬೇಕು. ಇದು ಎಲ್ಲಾ ಅರ್ಜಿ ಸಲ್ಲಿಸುವ ಅಭ್ಯರ್ಥಿಗೂ ಕೂಡ ಕಡ್ಡಾಯವಾಗಿದೆ.

ಈ ಕೆಳಕಂಡ ದಾಖಲಾತಿಗಳನ್ನು ಅರ್ಜಿದಾರನು ಹೊಂದಿರಬೇಕು:

  • Two Passport Size Photographs of the Applicant
  • Aadhaar Card
  • Online Application
  • Bank Passbook
  • Driving Licence
  • Income Certificate and Caste Certificate
  • ಈ ಹಿಂದೆ ನೀವು ಯಾವುದೇ ಯೋಜನೆಯಲ್ಲಿ ಸಾಲವನ್ನು ಪಡೆದಿರಬಾರದು, ಇಂಥಹ ಒಂದು ದಾಖಲಾತಿಯನ್ನು ಕೂಡ ಹೊಂದಿರಬೇಕು.

advertisement

Leave A Reply

Your email address will not be published.