Karnataka Times
Trending Stories, Viral News, Gossips & Everything in Kannada

Bigg Boss Kannada 10: 50 ಲಕ್ಷ ನಗದು ಜೊತೆಗೆ ವಿನ್ನರ್ & ರನ್ನರ್ ಅಪ್‌ಗೆ ಏನೆಲ್ಲಾ ಗಿಫ್ಟ್ ಸಿಗುತ್ತೆ ಗೊತ್ತಾ?

advertisement

ಬಿಗ್‌ಬಾಸ್‌ ಕನ್ನಡ ಸೀಸನ್ 10 (Bigg Boss 10) ರ ಗ್ರ್ಯಾಂಡ್ ಫಿನಾಲೆ ಇಂದು . ಸದ್ಯ ಆರು ಸ್ಪರ್ಧಿಗಳು ಟ್ರೋಫಿ ಗೆಲ್ಲುವ ರೇಸ್‌ನಲ್ಲಿದ್ದಾರೆ. ಈ ಪೈಕಿ ಒಬ್ಬರು ವಿನ್ನರ್ ಆದರೆ, ಇನ್ನೊಬ್ಬರು ಕಪ್ ಎತ್ತಿ ಹಿಡಿಯಲಿದ್ದಾರೆ. ಇಲ್ಲಿ ಬಿಗ್‌ಬಾಸ್‌ ಸೀಸನ್ 10ರ ವಿನ್ನರ್ ಹಾಗೂ ರನ್ನರ್‌ ಅಪ್‌ಗೆ ಏನೆಲ್ಲಾ ಬಹುಮಾನಗಳು ಸಿಗಲಿವೆ ಎಂಬ ಮಾಹಿತಿ ನೋಡೋಣ.

ಜನವರಿ 27 ಹಾಗೂ 28ರಂದು ಬಿಗ್‌ಬಾಸ್‌ ಕನ್ನಡ ಸೀಸನ್ 10 (Bigg Boss Kannada 10) ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಫಿನಾಲೆ ಎಪಿಸೋಡ್ ಪ್ರಸಾರವಾಗಲಿದೆ. ಫಿನಾಲೆಗಾಗಿ ಈಗಾಗಲೇ ಎಲಿಮಿನೇಟೆಡ್ ಭರ್ಜರಿ ತಯಾರಿ ನಡೆಸುತ್ತಿದ್ದು, ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ ಗ್ರ್ಯಾಂಡ್ ಫಿನಾಲೆ ಹಲವು ವಿಶೇಷತೆಗಳಿಂದ ಕೂಡಿರಲಿದ್ದು, ವೀಕ್ಷಕರು ವಿನ್ನರ್ ಯಾರಾಗಲಿದ್ದಾರೆಂಬ ಕುತೂಹಲದಲ್ಲಿದ್ದಾರೆ.

ಟ್ರೋಪಿ ಗೆದ್ದವರಿಗೆ ಏನು ಸಿಗಲಿದೆ?

 

advertisement

 

ಬಿಗ್‌ಬಾಸ್‌ ಸೀಸನ್ 1ರಿಂದಲೂ ವಿಜೇತರಾದವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಗುವುದು ವಾಡಿಕೆ. ಅದರಂತೆ ಈ ಸೀಸನ್‌ನ ಆರಂಭದಲ್ಲೂ 50 ಎಂದೇ ನಿಗದಿಪಡಿಸಲಾಗಿತ್ತು. ನಂತರ ಬಿಗ್‌ಬಾಸ್‌ ಟ್ವಿಸ್ಟ್ ಕೊಟ್ಟಿ ಅದನ್ನು 25 ಲಕ್ಷಕ್ಕೆ ತಂದರು. ಬಳಿಕ ಹಲವು ಟಾಸ್ಕ್‌ಗಳನ್ನು ನೀಡಿ ಈ ಹಣವನ್ನು ವಾಪಾಸ್ ಪಡೆದುಕೊಳ್ಳೋಕೆ ಅವಕಾಶ ನೀಡಲಾಯಿತು. ಎಲ್ಲರೂ ಟಾಸ್ಕ್ ಚೆನ್ನಾಗಿ ಆಡಿ ಆ ಹಣ ವಾಪಾಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ, ಈ ಬಾರಿಯೂ ಟ್ರೋಫಿ ಗೆದ್ದವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ.

ಬೋನಸ್ ಕೂಡ ಪಡೆಯಲಿದ್ದಾರೆ:

ಬಿಗ್‌ಬಾಸ್‌ 10 (Bigg Boss Kannada 10) ವಿಜೇತರಿಗೆ ನಗದು ಜೊತೆಗೆ ಮತ್ತೊಂದಷ್ಟು ಹಣ ಸಿಗಲಿದೆ. 50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ (Maruti Suzuki Brezza) ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಕೂಡ ಸಿಗಲಿದೆ. ರನ್ನರ್ ಅಪ್‌ಗೂ ಹಣದ ಜೊತೆಗೆ ಎಲೆಕ್ಟ್ರಿಕ್ ಸ್ಕೂಟಿ ಸಿಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮೊದಲೇ ಘೋಷಣೆ ಮಾಡಿದ್ದರು. ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಅರು ಮಂದಿ ಉಳಿದುಕೊಂಡಿದ್ದಾರೆ. ಸಂಗೀತಾ ಶೃಂಗೇರಿ (Sangeetha Sringeri), ಡ್ರೋನ್ ಪ್ರತಾಪ್ (Drone Prathap), ವಿನಯ್ ಗೌಡ (Vinay Gowda), ಕಾರ್ತಿಕ್ ಮಹೇಶ್ (Karthik Mahesh), ತುಕಾಲಿ ಸಂತೋಷ್ (Tukali Santhosh) ಹಾಗೂ ವರ್ತೂರು ಸಂತೋಷ್ (Varthur Santhosh) ನಡುವೆ ಸ್ಫರ್ಧೆ ಮುಂದುವರೆದಿದೆ. ಈ ಪೈಕಿ ಸಂಗೀತಾ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ ಟಾಪ್ 5ರ ಸ್ಥಾನದಲ್ಲಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಒಬ್ಬೊಬ್ಬರೇ ಟ್ರೆಂಡ್ ಆಗ್ತಿದ್ದಾರೆ.

advertisement

Leave A Reply

Your email address will not be published.