Karnataka Times
Trending Stories, Viral News, Gossips & Everything in Kannada

Gold Rate Today: ಇಂದು ಮತ್ತೆ ಇಳಿಕೆ ಕಂಡ ಚಿನ್ನ ಹಾಗೂ ಬೆಳ್ಳಿ ಬೆಲೆ, ಆಭರಣ ಪ್ರಿಯರು ಫುಲ್ ಖುಷ್!

advertisement

ಆಭರಣ ಎಂದರೆ ಮಹಿಳೆಯರಿಗೆ ಬಲು ಇಷ್ಟ. ಹೀಗಿರುವಾಗ ಏಕಾಏಕಿ ಚಿನ್ನದ ಬೆಲೆ (Gold Rate) ಯೂ ಏರಿಕೆ ಕಂಡದ್ದು ಆಭರಣ ಪ್ರಿಯರನ್ನು ಬೇಸರ ತಂದಿತ್ತು. ಆದರೆ ಕಳೆದ ಕೆಲ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆ ಕಂಡಿದ್ದು ಆಭರಣ ಪ್ರಿಯರಿಗೆ ಮತ್ತೆ ಸಂತಸ ತಂದಿದ್ದು, ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ (Gold And Silver Rate) ಎಷ್ಟಿದೆ ಎನ್ನುವುದನ್ನು ತಿಳಿಯೋಣ.

ಇಂದಿನ ಚಿನ್ನ ಹಾಗೂ ಬೆಳ್ಳಿ ದರ (Gold and Silver Rate):

ಇಂದು ಚಿನ್ನ ಹಾಗೂ ಬೆಳ್ಳಿದರದಲ್ಲಿ ಮತ್ತೆ ಇಳಿಕೆ ಕಂಡಿದೆ. ಹೀಗಾಗಿ ಚಿನ್ನದ ಬೆಲೆ ಒಂದು ಗ್ರಾಂಗೆ 40 ರೂನಷ್ಟು ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆ ಒಂದು ಗ್ರಾಂಗೆ 30 ಪೈಸೆಯಷ್ಟು ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂನ ಚಿನ್ನದ ಬೆಲೆ 57,450 ರೂಪಾಯಿ, 24 ಕ್ಯಾರೆಟ್​ನ ಹತ್ತು ಗ್ರಾಂ ಅಪರಂಜಿ ಚಿನ್ನದ ಬೆಲೆ 62,670 ರೂಪಾಯಿಯಾಗಿದೆ. ಅದಲ್ಲದೇ, 100 ಗ್ರಾಂ ಬೆಳ್ಳಿ ಬೆಲೆ 7,820 ರೂಪಾಯಿಯಾಗಿದೆ.

advertisement

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ

22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ 57,450 ರೂ., ಚೆನ್ನೈ ನಲ್ಲಿ 58,150 ರೂ., ಮುಂಬೈನಲ್ಲಿ 57,450 ರೂ., ದೆಹಲಿಯಲ್ಲಿ 57,600 ರೂ., ಕೋಲ್ಕತಾದಲ್ಲಿ 57,450 ರೂ., ಕೇರಳದಲ್ಲಿ 57,450 ರೂ., ಅಹ್ಮದಾಬಾದ್ ನಲ್ಲಿ 57,500 ರೂ., ಜೈಪುರ್ ನಲ್ಲಿ 57,600 ರೂ., ಲಕ್ನೋದಲ್ಲಿ 57,600 ರೂ., ಭುವನೇಶ್ವರ್ ನಲ್ಲಿ 57,450 ರೂಪಾಯಿಯಿದೆ.

advertisement

Leave A Reply

Your email address will not be published.