Karnataka Times
Trending Stories, Viral News, Gossips & Everything in Kannada

Horoscope Today: ನಿತ್ಯ ಪಂಚಾಂಗದ ಪ್ರಕಾರ ಈ ದಿನ ಹನ್ನೆರಡು ರಾಶಿಗಳ ರಾಶಿ ಭವಿಷ್ಯ ಹೇಗಿದೆ?

advertisement

ರಾಶಿಚಕ್ರಗಳಲ್ಲಿನ ಬದಲಾವಣೆಗಳು ಜೀವನದ ಸುಖ ದುಃಖಗಳಿಗೆ ಕಾರಣವಾಗುತ್ತವೆ. ಹೀಗಾಗಿ ಹೆಚ್ಚಿನವರು ಜೀವನದ ಏರಿಳಿತಗಳಿಗೆ ರಾಶಿ ಫಲಗಳು ಕಾರಣವೆಂದು ನಂಬುತ್ತಾರೆ. ಹೌದು, ಕೆಲವರಿಗೆ ರಾಶಿ ಭವಿಷ್ಯವು ಕೆಲವರಿಗೆ ಲಾಭದಾಯಕ ದಿನವಾದರೆ, ಇನ್ನು ಕೆಲವರು ಮಿಶ್ರ ಫಲವನ್ನು ತರುತ್ತದೆ. ಹಾಗಾದರೆ ಈ ದಿನದ ಹನ್ನೆರಡು ರಾಶಿಗಳ ರಾಶಿ ಭವಿಷ್ಯ (Horoscope Today) ದ ಸಂಪೂರ್ಣ ಮಾಹಿತಿಯನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

ಮೇಷ ರಾಶಿ:

ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಪರಿಹಾರವಾಗುವ ಮೂಲಕ ಆದಾಯದ ಮೂಲಗಳು ಹೆಚ್ಚಾಗಲಿದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದ್ದು ದಿನಾಂತ್ಯದಲ್ಲಿ ಶುಭ ಸುದ್ದಿಯನ್ನು ಕೇಳಲಿದ್ದೀರಿ.

ವೃಷಭ ರಾಶಿ:

ವೃತ್ತಿ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ವೈಯುಕ್ತಿಕ ಬದುಕಿಗೂ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ನಡವಳಿಕೆಯಲ್ಲಿನ ಬದಲಾವಣೆಗಳು ಇತರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿದೆ.

ಮಿಥುನ ರಾಶಿ:

ಇಂದು ನೀವು ಶುಭ ಸುದ್ದಿಯನ್ನು ಕೇಳುವಿರಿ.ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ನಿಮಗೆ ಮಿಶ್ರ ಫಲಗಳು ಪ್ರಾಪ್ತವಾಗಲಿದೆ.

ಕಟಕ ರಾಶಿ:

ಹೊಸ ಜನರನ್ನು ಭೇಟಿ ಮಾಡುವುದರಿಂದ ನಿಮ್ಮ ಜೀವನಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ. ದೂರದ ಪ್ರಯಾಣಕ್ಕೆ ಯೋಜನೆ ರೂಪಿಸಿದ್ದರೆ, ಆ ಯೋಜನೆಯನ್ನು ಮುಂದಕ್ಕೆ ಹಾಕುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಸಿಂಹ ರಾಶಿ:

ತಂದೆ ತಾಯಿಯ ಆರೋಗ್ಯದ ಮೇಲೆ ಸ್ವಲ್ಪ ನಿಗಾವಹಿಸಿ. ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಇನ್ನಿತ್ತರ ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ. ಹಣ ಹೂಡಿಕೆಯಂತಹ ಕಾರ್ಯಗಳಿಗೆ ಕೈ ಹಾಕುವವರಿದ್ದರೆ ಈ ದಿನ ಉತ್ತಮವಾಗಿದೆ. ಖರ್ಚಿನ ವಿಚಾರದಲ್ಲಿ ಇತಿಮಿತಿಯಿರಲಿ.

ಕನ್ಯಾ ರಾಶಿ:

advertisement

ಮಾತಿನ ಮೇಲೆ ನಿಗಾವನ್ನು ಇಡುವುದು ಉತ್ತಮ. ಇಲ್ಲವಾದರೆ ಸಂಬಂಧಗಳು ಹಾಳಾಗಬಹುದು. ಸ್ತ್ರೀಯರಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಗಳು ಅಧಿಕವಾಗಿದ್ದು ಜಾಗರೂಕರಾಗಿರಿ. ಹಣಕಾಸಿನ ವಿಚಾರದಲ್ಲಿ ಲಾಭದಾಯಕ ದಿನವಾಗಿರಲಿದೆ.

ತುಲಾ ರಾಶಿ:

ಈಗಾಗಲೇ ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಇಂದು ಪೂರ್ಣವಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ ಮಾಡುವ ಸಾಧ್ಯತೆಯಿದ್ದು, ಯೋಚಿಸಿ ನಿರ್ಧರಿಸಿ. ಕುಟುಂಬದರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ವೃಶ್ಚಿಕ ರಾಶಿ:

ಉದ್ಯೋಗ ಸ್ಥಳಗಳನ್ನು ಉತ್ತಮವಾದ ವಾತಾವರಣವಿರಲಿದ್ದು ಶತ್ರುಗಳು ನಿಮ್ಮ ಏಳಿಗೆಯನ್ನು ಸಹಿಸಲಾರರು. ಅದಲ್ಲದೇ, ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರಿ. ಆರೋಗ್ಯವು ಕೈ ಕೊಡಬಹುದು, ಎಚ್ಚರವಿರಲಿ.

ಧನುಸ್ಸು ರಾಶಿ:

ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದ್ದು, ಹೀಗೆ ಮುನ್ನಡೆಯಿರಿ. ಗಣ್ಯ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ದೂರದ ಪ್ರಯಾಣ ಮಾಡುವ ಸಾಧ್ಯತೆಯಿದೆ.

ಮಕರ ರಾಶಿ:

ಇಂದು ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ಹೀಗಾಗಿ ನೀವು ಸಂಗಾತಿಯ ಮಾತಿಗೂ ಕೂಡ ಮನ್ನಣೆ ನೀಡುವುದು ಸಂಬಂಧಗಳ ದೃಷ್ಟಿಯಿಂದ ಹಿತಕರವಾಗಿದೆ. ಯಾವುದೇ ಕೆಲಸ ಮಾಡುವಾಗ ಹಿರಿಯರ ಸಲಹೆ-ಸೂಚನೆಗಳನ್ನು ಪಡೆಯುವುದರಿಂದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಕುಂಭ ರಾಶಿ:

ಮಾತು ಮನೆಯನ್ನು ಹಾಳು ಮಾಡಬಹುದು ಹೀಗಾಗಿ ನೀವು ಮಾತನಾಡುವ ರೀತಿಯಿಂದ ಹತ್ತಿರದವರಿಗೆ ನೋವಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಖರ್ಚು ವೆಚ್ಚಗಳ ಮೇಲೆ ಇತಿಮಿತಿಯಿರಲಿ.

ಮೀನ ರಾಶಿ:

ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯೂ ನೆಲೆಸಲಿದೆ. ದೂರದ ಬಂಧುಗಳ ಆಗಮನವು ಸಂತಸವನ್ನು ಹೆಚ್ಚಿಸಲಿದೆ. ನೆರೆಹೊರೆಯವರಿಂದ ಸಹಾಯವನ್ನು ಪಡೆಯುವಿರಿ. ಆದರೆ ಆರ್ಥಿಕ ಸಮಸ್ಯೆಗಳಿಂದ ತಲ್ಲಣಿಸುವಿರಿ.

advertisement

Leave A Reply

Your email address will not be published.