Karnataka Times
Trending Stories, Viral News, Gossips & Everything in Kannada

7th Pay Commission: 7ನೇ ವೇತನ ಆಯೋಗದಲ್ಲಿ ಕೇಂದ್ರ ನೌಕರರು ಎಷ್ಟು ತುಟ್ಟಿ ಭತ್ಯೆ ಪಡೆಯಲಿದ್ದಾರೆ?

advertisement

7ನೇ ವೇತನ ಆಯೋಗವು ಸರ್ಕಾರಿ ನೌಕರರ ಯುಜಿಸಿ/ ಎಐಸಿಟಿಇ/ ಐಸಿಎಆರ್/ ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ ಎಲ್ಲ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಸಿಬ್ಬಂದಿಗಳ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸಿ, ನೂತನ ವೇತನ ರಚನೆಯನ್ನು ಮಾಡುತ್ತದೆ. ಈ ಆಯೋಗ ಮೂಲಕ ಸರಕಾರಿ ನೌಕರರು ಎಷ್ಟು ಭತ್ಯೆ ಪಡೆಯುತ್ತಾರೆ ಎಂದು ಅಂದಾಜಿಸಲಾಗುತ್ತದೆ‌. ಈ ತುಟ್ಟಿಭತ್ಯೆ ಎಂಬುದು ಹಣದುಬ್ಬರದ ಹೆಚ್ಚಳದ ನಿಟ್ಟಿನಿಂದಾಗಿ ನೌಕರರ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸರ್ಕಾರಿ ನೌಕರರಿಗೆ ನೀಡಲಾಗುವ ಮೊತ್ತವೆ ಆಗಿದೆ.

ತುಟ್ಟಿಭತ್ಯೆ ಮೊತ್ತ ಯಾವಾಗ ದೊರೆಯಲಿದೆ?

ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಇದಾಗಿದ್ದು ಜನವರಿ 2024 ರಿಂದ ಜಾರಿಗೆ ಬರಲಿರುವ ತುಟ್ಟಿಭತ್ಯೆಗೆ ಅನುಮೋದನೆ ಸಹ ಸಿಕ್ಕಿದ್ದು ಏಪ್ರಿಲ್‌ನ ಸಂಬಳದಲ್ಲಿಯೇ ಇದನ್ನು ಪಾವತಿಮಾಡಲಾಗುತ್ತದೆ.

ಎಷ್ಟು ಹೆಚ್ಚಳ ವಾಗಿದೆ

ಕೇಂದ್ರ ನೌಕರರ ತುಟ್ಟಿಭತ್ಯೆ (DA) ಶೇ 4ರಷ್ಟು ಹೆಚ್ಚಳವಾಗಲಿದ್ದು ಇದು ಜನವರಿ 1, 2024 ರಿಂದ ಜಾರಿಗೆ ಬಂದಿದ್ದು ಜನವರಿಯಿಂದ ಮಾರ್ಚ್ ವರೆಗಿನ ತುಟ್ಟಿಭತ್ಯೆಯನ್ನು ಬಾಕಿಯಾಗಿ ಎಪ್ರಿಲ್ ನಲ್ಲಿ ಪಾವತಿಸಲಾಗುತ್ತದೆ. ಎಲ್ಲಾ ಕೇಂದ್ರ ನೌಕರರು ಮತ್ತು ಪಿಂಚಣಿದಾರರು 3 ತಿಂಗಳ ಬಾಕಿಯ ಲಾಭವನ್ನು ಸಹ ಈ ಮೂಲಕ ಪಡೆಯಲಿದ್ದಾರೆ.

advertisement

ಲೆಕ್ಕಚಾರ ಹೇಗೆ?

ಲೆವೆಲ್-1 ಗ್ರೇಡ್ ಪೇ-1800ರಲ್ಲಿ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಕೇಂದ್ರ ನೌಕರರ ಗರಿಷ್ಠ ಮೂಲ ವೇತನ 56,900 ರೂ. ಈ ನೌಕರರ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಒಟ್ಟು ಡಿಎಯಲ್ಲಿ 2276 ರೂಪಾಯಿ ವ್ಯತ್ಯಾಸವಾಗಲಿದೆ

ಹಂತ-10 ರಲ್ಲಿ ಕೇಂದ್ರ ನೌಕರರ ದರ್ಜೆಯ ವೇತನ ರೂ. 5400. ಈ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 56,100 ರೂ. ಈ ನೌಕರರ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಒಟ್ಟು ಡಿಎಯಲ್ಲಿ 2244 ರೂಪಾಯಿ ವ್ಯತ್ಯಾಸವಾಗಿದೆ.

ವಿಂಗಡಣೆ ಹೇಗೆ?

7ನೇ ವೇತನ ಆಯೋಗ (7th Pay Commission)ದ ಅಡಿಯಲ್ಲಿ, ಕೇಂದ್ರ ನೌಕರರ ವೇತನವನ್ನು ಹಂತ 1 ರಿಂದ ಹಂತ 18 ರವರೆಗೆ ವಿವಿಧ ದರ್ಜೆಯ ವೇತನಗಳಾಗಿ ವಿಭಜನೆ ಮಾಡಲಾಗಿದ್ದು ಇದರಲ್ಲಿ ಗ್ರೇಡ್ ಪೇ ಮತ್ತು ಪ್ರಯಾಣ ಭತ್ಯೆಯ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ನೀಡಲಾಗುತ್ತದೆ. ಹಂತ 1 ರಲ್ಲಿ, ಕನಿಷ್ಠ ವೇತನವು ರೂ 18,000 ರಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ವೇತನವು ರೂ 56,900 ಆಗಿದೆ. ಅದೇ ರೀತಿ 2ನೇ ಹಂತದಿಂದ 14ನೇ ಹಂತದವರೆಗಿನ ದರ್ಜೆಯ ವೇತನಕ್ಕೆ ಅನುಗುಣವಾಗಿ ವೇತನವು ಬದಲಾಗುತ್ತದೆ.

advertisement

Leave A Reply

Your email address will not be published.