Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮೀ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರಲಿದೆ ಅನ್ನೊರಿಗೆ ಇಲ್ಲಿದೆ ಶುಭ ಸುದ್ದಿ

advertisement

ರಾಜ್ಯದಲ್ಲಿ ಈಗ ಗ್ಯಾರೆಂಟಿ ಸರಕಾರ ಭರ್ಜರಿಯಾಗೇ ಆಡಳಿತ ಮಾಡುತ್ತಿದೆ. ಚುನಾವಣೆಗೆ ಪೂರ್ವದಲ್ಲಿ ಪಂಚ ಗ್ಯಾರೆಂಟಿ ಭರವಸೆಯನ್ನು ನೀಡಿ ಜನರ ಗಮನವನ್ನು ತನ್ನತ್ತ ಕಾಂಗ್ರೆಸ್ ಪಕ್ಷವು ಸೆಳೆಸಿತ್ತು‌. ಚುನಾವಣೆಯ ಭರ್ಜರಿ ಗೆಲುವು ಸಾಧಿಸಿದ್ದ ನಂತರ ಶಕ್ತಿ ಯೋಜನೆ (Shakti Yojana) ಮೊದಲ ಘೋಷಣೆಯನ್ನು ಬಿಡುಗಡೆ ಮಾಡಿತ್ತು ಅದಾದ ಬಳಿಕ ಕಾಂಗ್ರೆಸ್ ಪಕ್ಷವು ಉಳಿದ ಗ್ಯಾರೆಂಟಿಗಳಾದ ಅನ್ನಭಾಗ್ಯ (Anna Bhagya), ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮೀ (Gruha Lakshmi), ಯುವನಿಧಿಯನ್ನು ಹಂತ ಹಂತವಾಗಿ ಜಾರಿಗೆ ತಂದಿತ್ತು. ಈ ಎಲ್ಲ ಯೋಜನೆ ಜನರಿಗೆ ಬಹಳ ಇಷ್ಟವಾಗಿದ್ದರೂ ಗೃಹಲಕ್ಷ್ಮೀ ಯೋಜನೆ ಮೂಲಕ ಗೃಹಿಣಿಯರಿಗೆ, ಮನೆ ಹಿರಿಯ ಮಹಿಳೆಯರಿಗೆ ಪ್ರಾತಿನಿಧ್ಯತೆ ದೊರೆತಂತಾಗಿದೆ.

ಮೆಲುಕು ನೋಟ:

ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಗೃಹಲಕ್ಷ್ಮೀ ಯೋಜನೆ ಪರಿಚಯಿಸಲಾಗಿದ್ದು ಮಹಿಳೆಯರಿಗೆ ಈ ಯೋಜನೆ ಆರ್ಥಿಕ ನೆರವು ನೀಡಿದಂತಾಗಿದೆ. ಈ ಮೂಲಕ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಜಾರಿಗೆ ಬಂದಾಗಲೇ ಅನೇಕ ಸಮಸ್ಯೆ ಬ್ಯಾಂಕ್ ಖಾತೆ ಸಮಸ್ಯೆ ಇತರ ಕಾರಣದಿಂದ ಅಪಸ್ವರಗಳು ಕೇಳಿ ಬಂದಿತ್ತು. ಹಾಗಿದ್ದರೂ ಅಂತಹ ಅನೇಕ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಿ ಕಂತಿನ ರೂಪದಲ್ಲಿ ಹಣ ಬಿಡುಗಡೆ ಮಾಡಲಾಗುತ್ತಲಿದೆ. ಇದೀಗ ಮುಂದಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ ಸಿಕ್ಕಿದೆ.

ಹೊಸ ನಿಯಮ ಜಾರಿ:

 

advertisement

 

ಬ್ಯಾಂಕ್ ಹಾಗೂ ಆಧಾರ್ ಲಿಂಕ್ ಮಾಡಬೇಕು ಎಂಬ ನಿಯಮಕ್ಕೂ ಮೀರಿ ಇತ್ತೀಚೆಗಷ್ಟೇ ಕೆಲ ನಿರ್ದಿಷ್ಟ ನಿಯಮಗಳ ಬಗ್ಗೆ ತಿಳಿಸಲಾಗಿತ್ತು. EKYC ಸಮಸ್ಯೆಯನ್ನು ಬ್ಯಾಂಕಿನಲ್ಲಿ ಪರಿಹಾರ ಮಾಡಿಕೊಂಡು ಬಳಿಕ ಈ ಸಂಬಂಧಿತ ಮಾಹಿತಿಯನ್ನು ನಿಮ್ಮ ನ್ಯಾಯಬೆಲೆ ಅಂಗಡಿಗೆ ನೀಡುವಂತೆ ಸೂಚಿಸಲಾಗಿತ್ತು. ಅದೇ ರೀತಿ ಆರನೇ ಕಂತಿನ ಹಣ ಪಡೆಯಲು NPIC ಯನ್ನು ಸಹ ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್ , ಪಡಿತರ ಕಾರ್ಡ್ ಜೊತೆಗೆ ಬ್ಯಾಂಕ್ ಖಾತೆಯ ವಿವರಣೆ ಜೊತೆಗೆ ನೀವು ಬ್ಯಾಂಕ್ ನಲ್ಲಿ NPIC ಮಾಡಿಸಲು ಸಾಧ್ಯವಿದೆ.

ಯಾವಾಗ ಬರುತ್ತೆ ಹಣ:

ಗೃಹಲಕ್ಷ್ಮೀ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಸರಕಾರದ ನಿಯಮಕ್ಕೆ ಬದ್ಧವಾಗಿದ್ದ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣವು ಫೆಬ್ರವರಿ 15 ನೇ ತಾರೀಖಿನಂದು ಜಮೆ ಆಗಲಿದೆ. ಇತ್ತೀಚೆಗಷ್ಟೆ ಕೆವೈಸಿ ಅಪ್ಡೇಟ್ ಮಾಡಲು ಸಹ ತಿಳಿಸಿದ್ದು ಅದನ್ನು ಮಾಡಿಸದೇ ಬಾಕಿ ಇಟ್ಟವರಿಗೆ ಹಣ ಬರದಿರಲು ಬಹುದು ಹಾಗಾಗಿ ನಿಮ್ಮ ಬ್ಯಾಂಕ್ ಅಥವಾ ಇತರ ಅಪ್ಡೇಟ್ ಪ್ರಕ್ರಿಯೆ ಬಾಕಿ ಇಟ್ಟಲ್ಲಿ ಕೂಡಲೇ ಅದನ್ನು ಪರಿಹರಿಸಿಕೊಳ್ಳುವುದು ಅತ್ಯವಶ್ಯವಾಗಿದೆ.

ಒಟ್ಟಾರೆಯಾಗಿ ಮಹಿಳೆಯರಿಗೆ ರಾಜ್ಯದ ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿಯ ಪರ್ವಕಾಲ ಬಂದಂತಾಗಿದೆ. ಮಹಿಳಾ ಪರ ಗೃಹಲಕ್ಷ್ಮೀ, ಅನ್ನಭಾಗ್ಯದ ಹಣ ಹಾಗೂ ಶಕ್ತಿ ಯೋಜನೆ ಲಭ್ಯವಾಗುತ್ತಿದ್ದು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾಂಗ್ರೆಸ್ ಸರಕಾರ ಎಂಬ ಹೆಗ್ಗಳಿಕೆಯನ್ನು ಸಹ ಜನರು ನೀಡುತ್ತಿದ್ದಾರೆ ಎನ್ನಬಹುದು.

advertisement

Leave A Reply

Your email address will not be published.